ನಗರಸಭೆಯ ಇ-ಸ್ವತ್ತು ಅಕ್ರಮ, ಕರ್ತವ್ಯ ಲೋಪ ಎಸಗಿದ ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ,  ಜಿಲ್ಲಾಧಿಕಾರಿಗಳಿಗೂ ದಾರಿ ತಪ್ಪಿಸುವ ಹುನ್ನಾರ..?

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ನಗರಸಭೆಯ ಇ-ಸ್ವತ್ತು ಅಕ್ರಮ, ಕರ್ತವ್ಯ ಲೋಪ ಎಸಗಿದ ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಜಿಲ್ಲಾಧಿಕಾರಿಗಳಿಗೂ ದಾರಿ ತಪ್ಪಿಸುವ ಹುನ್ನಾರ..?

ಚಂದ್ರವಳ್ಳಿ ನ್ಯೂಸ್, ಹಿರಿಯೂರು:

ಯೋಜನಾ ನಿರ್ದೇಶಕರ ದಿವ್ಯ ನಿರ್ಲಕ್ಷತನ ಕಸದ ಬುಟ್ಟಿಗೆ ಸೇರಿದ ವಿಶೇಷ ವರದಿ.

ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಹಕರಿಸುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶವನ್ನು ಸರ್ಕಾರ ದಿನಾಂಕ 17 ಜೂನ್ 2003ರಲ್ಲಿ ಈ ನಗರ ಅಭಿವೃದ್ಧಿ ಕೋಶಗಳ ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹಾಗೂ ಯೋಜನಾ ನಿರ್ದೇಶಕರುಗಳ ಕಾರ್ಯಪಾಲಕ ಅಭಿಯಂತರರುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಅಧಿಕಾರ ಮತ್ತು ಕರ್ತವ್ಯಗಳನ್ನು ಗುರುತಿಸಿ ರಾಜ್ಯ ಸರ್ಕಾರ ದಿನಾಂಕ 10 ಅಕ್ಟೋಬರ್ 2003 ರಲ್ಲಿ ಸುತ್ತೋಲೆ ಹೊರಡಿಸಿತ್ತು.

ಪ್ರತ್ಯೇಕ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಚೇರಿ, ಜೊತೆಗೆ ಈ ಮೂರು ಅಧಿಕಾರಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡುವ ಸಲುವಾಗಿ ಮೂರು ವಾಹನಗಳ ಸೌಲಭ್ಯ ಜೊತೆಗೆ ಸೂಕ್ತ ಸಿಬ್ಬಂದಿಯನ್ನು ನೇಮಕಮಾಡಿದೆ.

ಯೋಜನಾ ನಿರ್ದೇಶಕರಿಗೆ ಸಾಮಾನ್ಯ ಮತ್ತು ಸ್ವತಂತ್ರ ಅಧಿಕಾರಗಳನ್ನು ಸಹ ನೀಡಿದ್ದು ಅದರಲ್ಲಿ ಪ್ರಮುಖ

ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಕ್ರಮ ತೆಗೆದುಕೊಂಡು ಅವುಗಳ ನಿವಾರಣೆ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ.

ನಿಯಮ ಉಲ್ಲಂಘಿಸಿ. ಇ-ಸ್ವತ್ತು ಮಾಡಿರುವ ಹಿರಿಯೂರು ನಗರಸಭೆಯ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಪೌರಾಯುಕ್ತರ ವಿರುದ್ಧ ಎಫ್ಐಆರ್ ದಾಖಲಿಸಲು ಆಗ್ರಹ ಎಂಬ ತಲೆ ಬರಹದಡಿ ಚಂದ್ರವಳ್ಳಿ ದಿನ ಪತ್ರಿಕೆಯಲ್ಲಿ ವಿಶೇಷ ವರದಿ ಮಾಡಿತ್ತು. ಈ ವರದಿಗೆ ಕ್ಯಾರೇ ಎನ್ನದ ಜಿಲ್ಲಾ ಯೋಜನಾ ನಿರ್ದೇಶಕರು ಪತ್ರಿಕೆಯಲ್ಲಿ ಬಂದ ವರದಿಯನ್ನು ಕಸದ ಪುಟ್ಟಿಗೆ ಎಸೆದಿದ್ದಾರೆ.

ಜಿಲ್ಲಾ ಯೋಜನಾ ನಿರ್ದೇಶಕರಿಗೆ ಅಕ್ರಮವಾಗಿ ಇ-ಸ್ವತ್ತು ಮಾಡಿರುವ ವಿಚಾರದ ಸತ್ಯಾಸತ್ಯತೆ ಗೊತ್ತಿದ್ದರೂ ಸಹ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ತನಕ ತರದೇ ಇರುವುದನ್ನು ನೋಡಿದರೆ ಹಲವು ಸಂಶಯಗಳು ಹುಟ್ಟಿಕೊಂಡಿವೆ.

ಆದರೆ ಈ ಹಿಂದೆ ಚಳ್ಳಕೆರೆ ನಗರಸಭೆಯಲ್ಲಿ ತೆರಿಗೆ ಹಣವನ್ನು ಬ್ಯಾಂಕಿಗೆ ಜಮಾ ಮಾಡದೆ ನಕಲು ಸೀಲು ಸಹಿ ಇರುವ ರಸೀದಿ ನೀಡಿ ನಗರಸಭೆಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಕುರಿತು ವರದಿಯಾದ ತಕ್ಷಣ ಇದೇ ಯೋಜನಾ ನಿರ್ದೇಶಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ತಕ್ಷಣ ತನಿಖೆಗೆ ಮೂರು ಅಧಿಕಾರಿಗಳನ್ನು ನೇಮಕ ಮಾಡಿದ್ದು ಗಮನಿಸಬಹುದು. ಅದಕ್ಕಿಂತ ಗಂಭೀರ ಸ್ವರೂಪದ ಇ-ಸ್ವತ್ತು ಅಕ್ರಮಗಳ ಕುರಿತು ವಿಶೇಷವಾಗಿದೆ ಪ್ರಕಟಗೊಂಡರೂ ಸಹ ಯೋಜನಾ ನಿರ್ದೇಶಕರು ಆಮಿಷಗಳಿಗೆ ಬಲಿಯಾಗಿ ತಪ್ಪಿತಸ್ಥ ಅಧಿಕಾರಿ ಮತ್ತು ನೌಕರರ ರಕ್ಷಣೆ ನಿಂತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಸತೀಶರೆಡ್ಡಿ ಮೂಲತಃ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಉಪನಿರ್ದೇಶಕರ ಹುದ್ದೆಯಲ್ಲಿದ್ದು ದಿನಾಂಕ 14 ಆಗಸ್ಟ್ 2020 ರಿಂದ ಒಂದು ವರ್ಷದ ಅವಧಿಗೆ ನಿಯೋಜನೆ ಮೇಲೆ ಬಂದಿದ್ದು ಮತ್ತೆ ಒಂದು ವರ್ಷದ ಅವಧಿಗೆ ರಾಜಕೀಯ ಪ್ರಭಾವ ಬೀರಿ ಒಂದು ವರ್ಷದ ಅವಧಿಗೆ ಯೋಜನೆಯಲ್ಲಿ ಮುಂದುವರೆದಿದ್ದಾರೆ. ಸದರಿ ಅಧಿಕಾರಿಗೆ ನಗರ ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಈ ಮಧ್ಯ ರಾಜ್ಯ ಸರ್ಕಾರವು ಕರ್ನಾಟಕ ಪೌರಾಡಳಿತ ಸೇವಾ ಅಧಿಕಾರಿಗಳ ವೃಂದ ಮತ್ತು ನೇಮಕಾತಿ ನಿಯಮಗಳು 2022 ರಚಿಸಿದ್ದು ಇವುಗಳು ದಿನಾಂಕ 7 ಜುಲೈ 2022 ಜಾರಿಗೆ ಬಂದಿರುತ್ತದೆ.

ಸದರಿ ನಿಯಮದಲ್ಲಿ ಕೆಎಂಎ ಎಸ್ ಮತ್ತು ಕೆಎಎಸ್ ಅಧಿಕಾರಿಗಳು ಮಾತ್ರ ಮುಂದೆ ಯೋಜನಾ ನಿರ್ದೇಶಕರ ಹುದ್ದೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹುದ್ದೆಗಳನ್ನು ಹೊರತುಪಡಿಸಿ ಬೇರೆ ಅಧಿಕಾರಿಗಳು ಜಿಲ್ಲಾ ಯೋಜನಾ ನಿರ್ದೇಶಕರ ಹುದ್ದೆಗೆ ಬರುವಂತಿಲ್ಲ. ಆದರೂ ಬಲಾಢ್ಯರಾದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ ಅವರು ಅಸಮರ್ಥ ಅಧಿಕಾರಿಯಾಗಿದ್ದು, ನಿಯೋಜನೆ ಅವಧಿ ಆಗಸ್ಟ್-14 ಮುಕ್ತಾಯಗೊಳ್ಳುವುದರಿಂದ ಅವರನ್ನು ಅವರ ಮಾತೃ ಇಲಾಖೆಗೆ ವಾಪಸು ಗಳಿಸಬೇಕೆಂಬುದು ಚಂದ್ರವಳ್ಳಿ ಪತ್ರಿಕೆ ಆಶಯವಾಗಿದೆ.

ಸಾರ್ವಜನಿಕರ ದೂರು, ಸಮಸ್ಯೆ, ಅಕ್ರಮಗಳಿಗೆ ಸ್ಪಂದಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದ ಇಂತಹ ಅಧಿಕಾರಿಯಿಂದ ಜಿಲ್ಲೆಗೆ ಯಾವುದೇ ಪ್ರಯೋಜನ ಇದ್ದಂತೆ ಕಾಣುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಅಕ್ರಮ ಎಸಗಿರುವ ನಗರಸಭೆ ಅಧಿಕಾರಿಗಳು ಮತ್ತು ತಮ್ಮ ಕರ್ತವ್ಯ ಲೋಪ ಎಸಗಿರುವ ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

“ತಪ್ಪಿತಸ್ಥ ಅಧಿಕಾರಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕಡತ ರೆಡಿಯಾಗಿದ್ದು ಜಿಲ್ಲಾಧಿಕಾರಿಗಳಿಗೆ ಹೋಗಿದೆ. ಜೊತೆಯಲ್ಲಿ ಇ-ಸ್ವತ್ತು ಮಾಡುವ ಸಂದರ್ಭದಲ್ಲಿ ಅಕ್ರಮ ಎಸಗಿರುವ ದಾಖಲಾತಿಯನ್ನು ಲಗತ್ತಿಸಲಾಗಿದೆ.” ಸತೀಶ್ ರೆಡ್ಡಿ, ಪಿಡಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಚಿತ್ರದುರ್ಗ.

What’s your Reaction?
+1
0
+1
1
+1
0
+1
0
+1
0
+1
0
+1
1