ಜಿ.ಪಂ., ತಾ.ಪಂ ಚುನಾವಣೆ ವಿಳಂಬ ಸಾಧ್ಯತೆ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಬೆಂಗಳೂರು ಮೇಕ್ ಇನ್ ಇಂಡಿಯಾ ರಾಜಕೀಯ

ಜಿ.ಪಂ., ತಾ.ಪಂ ಚುನಾವಣೆ ವಿಳಂಬ ಸಾಧ್ಯತೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸರ್ಕಾರ ಜಿ.ಪಂ., ತಾ.ಪಂ ಚುನಾವಣೆಯನ್ನು ಸದ್ಯಕ್ಕೆ ಮಾಡುವಂತೆ ಕಾಣುತ್ತಿಲ್ಲ, ಏಕೆಂದರೆ ಹೈಕೋರ್ಟ್ ಆದೇಶದ ಮೇರೆಗೆ ಈಗಾಗಲೇ ಜಿಪಂ, ತಾಪಂಗಳ ಕ್ಷೇತ್ರ ಪುನರ್‌ ವಿಂಗಡನೆ ಮಾಡಿ ಮೀಸಲಾತಿ ನಿಗದಿ ಮಾಡಬೇಕಿತ್ತು. ಈ ಸಂಬಂಧ ಹೈಕೋರ್ಟ್‌ ನೀಡಿರುವ ಗಡುವು ಇದೇ ತಿಂಗಳ ಆಗಸ್ಟ್-16ಕ್ಕೆ ಪೂರ್ಣಗೊಳ್ಳಲಿದ್ದರೂ ಸರ್ಕಾರ ಹೈಕೋರ್ಟ್ ಆದೇಶವನ್ನು ಪಾಲಿಸುವ ಲಕ್ಷಣ ಕಾಣುತ್ತಿಲ್ಲ. ಆದ್ದರಿಂದಾಗಿ 2023ರ ವಿಧಾನಸಭಾ ಚುನಾವಣೆಗೆ ಮುನ್ನ ಜಿಪಂ, ತಾಪಂ ಚುನಾವಣೆಗಳು ನಡೆಯುವುದು ಅನುಮಾನವಾಗಿದೆ.

ಜಿಪಂ, ತಾಪಂಗಳ ಕ್ಷೇತ್ರ ಪುನರ್‌ ವಿಂಗಡನೆ ಮಾಡಿ ಸೂಕ್ತ ಮೀಸಲಾತಿ ನಿಗದಿ ಮಾಡುವಂತೆ ಹೈಕೋರ್ಟ್ 12 ವಾರಗಳ ಗಡವು ನೀಡಿ 2022ರ ಮೇ 24ರಂದು ಆದೇಶಿಸಿತ್ತು, ಈ ಗಡುವು ಇದೇ ತಿಂಗಳ ಆಗಸ್ಟ್‌ 16ಕ್ಕೆ ಮುಗಿಯಲಿದೆ. ಆದರೆ ರಾಜ್ಯ ಚುನಾವಣ ಆಯೋಗ ಸರ್ಕಾರ ಜಿಪಂ, ತಾಪಂಗಳ ಕ್ಷೇತ್ರ ಪುನರ್‌ ವಿಂಗಡನೆ ಮಾಡಿ ಮೀಸಲಾತಿ ನಿಗದಿ ಮಾಡುವ ಮಾಡಿಲ್ಲ. ಜಿಪಂ, ತಾಪಂ ಕ್ಷೇತ್ರಗಳ ವಿಂಗಡಣೆ ಮತ್ತು ಮೀಸಲಾತಿ ಅಂತಿಮಗೊಂಡ ಬಳಿಕವಷ್ಟೇ ಚುನಾವಣೆ ನಡೆಸಬಹುದಾಗಿದೆ. 

ಜಿಪಂ, ತಾಪಂಗಳ ಕ್ಷೇತ್ರ ಪುನರ್‌ ವಿಂಗಡನೆ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಜುಲೈ ತಿಂಗಳಲ್ಲೇ ಕರಡು ಹೊರಡಿ ಸಲಾಗುತ್ತದೆ ಎನ್ನಲಾಗಿತ್ತು. ಆದರೆ ಸೀಮಾ ನಿರ್ಣಯ ಆಯೋಗ ಇನ್ನೂ ಕರಡು ಪ್ರಕಟಿಸಿಲ್ಲ. ಅಲ್ಲದೆ, ಒಬಿಸಿ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ನ್ಯಾ| ಭಕ್ತವತ್ಸಲ ಸಮಿತಿ ಶಿಫಾರಸು ಆಧರಿಸಿ ಮೀಸಲಾತಿ ನಿಗದಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಸದ್ಯದ ಸ್ಥಿತಿಯನ್ನು ಗಮನಿಸಿದರೆ ಜಿಪಂ, ತಾಪಂಗಳ ಚುನಾವಣೆ ನಡೆಯುವುದೇ ಅನುಮಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

What’s your Reaction?
+1
0
+1
0
+1
0
+1
0
+1
0
+1
0
+1
0