ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
CM 30% + DCM 30% = 60% ಕಾಂಗ್ರೆಸ್‌ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರ ವಿರುದ್ಧ ಜೆಡಿಎಸ್ ಮತ್ತೊಮ್ಮೆ ಗಂಭೀರ ಆರೋಪ ಮಾಡಿದೆ.
ಸರ್ಕಾರಿ ಇಲಾಖೆಗಳಲ್ಲಿ ಶೇ.60% ಕಮಿಷನ್‌ಗೆ “ಕೈ” ಜೋಡಿಸಿದ ಕಾಂಗ್ರೆಸ್” ಸರ್ಕಾರ. ಕರ್ನಾಟಕದಲ್ಲಿ ದುಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪರ್ಸಂಟೇಜ್‌ಲೆಕ್ಕದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ.
ವಿಧಾನಸೌಧವನ್ನೇ “ಲಂಚದ ಕೇಂದ್ರ ಕಚೇರಿ” ಮಾಡಿಕೊಂಡು ಸಿಎಂ, ಡಿಸಿಎಂ, ಸಚಿವರಾದಿಯಾಗಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.