ರಾಜಕುಮಾರ್ ಸಿನಿಮಾಗಳು ಸಾಮಾಜಿಕ ನೀತಿಗೆ ಮೈಲಿಗಲ್ಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಪದ್ಮಭೂಷಣ ಡಾ ರಾಜುಕುಮಾರ್ ಅವರು ಅಭಿನಯಿಸುತ್ತಿದ್ದ ಸಿನಿಮಾಗಳ ಬಗ್ಗೆ ಕೆಲವು ವರ್ಷಗಳ ಹಿಂದೆ ವಿಮರ್ಶೆಸಿರುವ ವಿಚಾರದ ಬಗ್ಗೆ ನಾನು ನನ್ನ ವೈಶಿಷ್ಟ್ಯಗಳಲ್ಲಿ ವಿವರಿಸುತ್ತಿರುವೆ.

ರಾಜಕುಮಾರ್ ಸಿನಿಮಾಗಳು ಕುಟುಂಬದ ಸದಸ್ಯರೊಂದಿಗೆ ನೋಡಲು ತುಂಬಾ ಚೆನ್ನಾಗಿರುತ್ತವೆ. ಸಮಾಜದ ಪರಿವರ್ತನೆಗೆ ಒಳ್ಳೆ ಪರಿಣಾಮಕಾರಿ.  ಸಾಮಾಜಿಕ ಜಾಲತಾಣಗಳ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಿದ್ಯಾವಂತ ಮಕ್ಕಳು ತಂದೆ-ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ವಿಚಾರದಲ್ಲಿ ರಾಜಕುಮಾರ್ ಅವರ ಸಿನಿಮಾಗಳು ಈಗಿನ ನಾಗರಿಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ.

- Advertisement - 

ಪುನಿತ್ ರಾಜ್ ಕುಮಾರ್ ಅವರು ಅವರ ಚಿಕ್ಕವಯಸ್ಸಿನಲ್ಲಿ ರಾಜುಕುಮಾರ್ ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ಪಾತ್ರವನ್ನು ಮಾಡುತ್ತಿದ್ದರು. ಆ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳನ್ನು ದೇವೇಗೌಡರು ನೋಡಿದ್ದಾರೆ. ಈ ವಿಚಾರವನ್ನು ದೇವೇಗೌಡರೇ ವಿವರಿಸಿದ್ದಾರೆ.

ಪುನೀತ್ ಅವರ ಅಭಿನಯವನ್ನು ದೇವೇಗೌಡರು ಬಹಳಷ್ಟು ಇಷ್ಟಪಟ್ಟಿದ್ದಾರೆ. ಬಳ್ಳಾರಿ ಗಣಿ ಮಾಫಿಯಾ ವಿಚಾರದಲ್ಲಿ ಪೃಥ್ವಿ ಎಂಬ ಸಿನಿಮಾದಲ್ಲಿ ಪುನೀತ್ ಅವರು ಜಿಲ್ಲಾಧಿಕಾರಿ ಪಾತ್ರ ಬಹಳಷ್ಟು ಅಚ್ಚುಕಟ್ಟಾಗಿ ಅಭಿನಯಿಸಿದರು. ಆ ಸಿನಿಮಾ ಬಿಡುಗಡೆಯಾದ ದಿನಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಪೃಥ್ವಿ ಸಿನಿಮಾ ವೀಕ್ಷಿಸಿದ ಗೌಡರು ಜಿಲ್ಲಾಧಿಕಾರಿಯ ಗಟ್ಟಿತನ ಏನೆಂದು ಪುನೀತ್ ಅವರ ಅಭಿನಯದಲ್ಲಿ ತಿಳಿದುಬಂದಿದೆ ಎಂದು ಪ್ರಶಂಸಿದರು ಈ ಸುದ್ದಿ ಆ ದಿನಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

- Advertisement - 

ದೇವೇಗೌಡರು ಒಮ್ಮೆ ಮೈಸೂರಿಗೆ ಹೋಗಿದ್ದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರ ಅಭಿನಯದ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ  ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಶಿವಣ್ಣ ಹಾಗೂ ಪುನೀತ್ ಇವರಿಬ್ಬರ ಅಭಿನಯದ ಕೆಲವೊಂದು ಸಿನಿಮಾಗಳನ್ನು ಗೌಡರು ಪ್ರಶಂಶಿದ್ದಾರೆ. ಲೇಖನ-ರಘು ಗೌಡ 9916101265

Share This Article
error: Content is protected !!
";