ಕಲ್ಲೇಶಿವೋತ್ತಮರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿ: ಕೆಯುಡಬ್ಲ್ಯೂಜೆ ಅಭಿನಂದನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರ ಕೊಡಮಾಡುವ ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆಯಾಗಿರುವ ತೊಂಬತ್ತೈದು ವರ್ಷದ ಹಿರಿಯ ಪತ್ರಕರ್ತ ಕಲ್ಲೇಶಿವೋತ್ತಮರಾವ್ ಅವರಿಗೆ ಅಭಿನಂದನೆಗಳು.

ಸುವರ್ಣ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರಸಂಘ (ಕೆಯುಡಬ್ಲ್ಯೂಜೆ) ಅವರ ಮನೆಗೆ ತೆರಳಿ ಮನೆಯಂಗಳದಲ್ಲಿ ಅವರನ್ನು ಗೌರವಿಸಿದ್ದು ಅಭಿಮಾನದ ಸಂಗತಿಯಾಗಿತ್ತು.

- Advertisement - 

ಮನೆಯಂಗಳದಲ್ಲಿ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ನಮನ ಕಾರ್ಯಕ್ರಮವನ್ನು ಕಲ್ಲೇ ಅವರ ಮನೆಯಿಂದಲೇ ಪ್ರಾರಂಭಿಸಲಾಗಿತ್ತು.

ಅಷ್ಟೂ ಪತ್ರಕರ್ತರ ಅನುಭವವನ್ನು ಅಮೃತಬೀಜ ಕೃತಿ ಮೂಲಕ ಕೆಯುಡಬ್ಲ್ಯೂಜೆ ದಾಖಲೀಕರಣ ಮಾಡಿದ್ದು ಈ ಕೃತಿಯನ್ನು ಬಹುರೂಪಿ ಸಂಸ್ಥೆ ಹೊರತಂದಿದೆ.

- Advertisement - 

ಹಿರಿಯ ಪತ್ರಕರ್ತರಾದ ಕಲ್ಲೇ ಶಿವೋತ್ತಮರಾವ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಭಿನಂದಿಸಿದ್ದಾರೆ.

 

Share This Article
error: Content is protected !!
";