ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶ್ರೀರಾಮಕೃಷ್ಣ- ಶಾರದಾಮಾತೆಯವರು ನಡೆಸಿದ ಪವಿತ್ರ-ಋಷಿಸದೃಶ ದಾಂಪತ್ಯ ಜೀವನ ಆಧುನಿಕ ಜನರಿಗೆ ಆದರ್ಶವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಮತ್ತು ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.
ಹಿರಿಯೂರು ತಾಲೂಕಿನ ಮದ್ದಿಹಳ್ಳಿಯ ಸ್ವಾಮಿ ವಿವೇಕಾನಂದ ಸೇವಾ ಮತ್ತು ಶೈಕ್ಷಣಿಕ ಟ್ರಸ್ಟ್ ಸಹಯೋಗದಲ್ಲಿ ರಂಗಮ್ಮ ಪಾತಲಿಂಗಪ್ಪ ಅವರ ನಿವಾಸದಲ್ಲಿ ಆಯೋಜಿಸಿದ್ದ “22ನೇ ಮನೆ-ಮನೆಗೆ ಶಾರದಾಮಾತೆ” ಸತ್ಸಂಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಜನೆ ನಡೆಸಿಕೊಟ್ಟ ಅವರು ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥದಲ್ಲಿ ಬರುವ”ಮಾತೃ ಪೀಠಾರೋಹಣ” ಎಂಬ ಅಧ್ಯಾಯ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು.
ಶ್ರೀಮಾತೆಯವರನ್ನು ಸಾಕ್ಷಾತ್ ಜಗನ್ಮಾತೆ ಎಂದು ಆರಾಧಿಸುತ್ತಿದ್ದ ಶ್ರೀರಾಮಕೃಷ್ಣರು ಶಾರದಾಮಾತೆಯರಿಗೆ ನೀಡಿದ ಜೀವನ ಶಿಕ್ಷಣ ಅದ್ಭುತವಾದದ್ದು ಅವರೇ ಶ್ರೀರಾಮಕೃಷ್ಣರ ಮೊದಲ ಶಿಷ್ಯರಾಗಿ ಕಾಮರಹಿತ ಜೀವನ ನಡೆಸಿದ ಅವರ ಬದುಕು-ಸಂದೇಶಗಳು ನಮ್ಮ ನಿತ್ಯ ಬಾಳಿಗೆ ದಾರಿದೀಪವಾಗಿವೆ ಎಂದರು.
ಸತ್ಸಂಗದ ಪ್ರಯುಕ್ತ ದಿವ್ಯತ್ರಯರಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ,ಆರತಿ ಹಾಗೂ ಅನ್ನಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಸಭೆಯಲ್ಲಿ ಮದ್ದಿಹಳ್ಳಿಯ ನಾಗರಾಜ್, ರಂಗಮ್ಮ ಪಾತಲಿಂಗಪ್ಪ, ಶಾರದಾ ಜಗನ್ನಾಥ್, ಜಯಪ್ಪ, ಮಹಾದೇವಮ್ಮ , ಜಿ.ಎನ್ ಗೌಡ, ಕೆಂಚಮ್ಮ, ಶಿವಕುಮಾರ್, ಗೌರಮ್ಮ, ಜಯಮ್ಮ,ಶಾರದಾ, ಮಂಜುಳಕ್ಕ, ಭೂಮಿಕಾ, ಪೂರ್ವಿಕಾ, ಶ್ವೇತ, ಪವಿತ್ರ, ವೆಂಕಟರಮಣಪ್ಪ, ಸುವರ್ಣಮ್ಮ, ನಾಗಮ್ಮ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು.

