ಅ.26: ಬಂಗಾರಪ್ಪ ಜನ್ಮದಿನಾಚರಣೆ ಆಚರಿಸಲು ಆಗ್ರಹ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಅಕ್ಟೋಬರ್ 26 ರಂದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಜನ್ಮ ದಿನಾಚರಣೆಯನ್ನು ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಆಚರಿಸಲು ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ಹೇಳಿದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಗಾರಪ್ಪ ದೀನದಲಿತರ ಕಣ್ಮಣಿಯಾಗಿದ್ದರು. ರೈತರ, ಕಾರ್ಮಿಕರ ಆಶಾಕಿರಣವಾಗಿದ್ದರು.. ಬಗರ್ ಹುಕುಂ ರೈತರ ಪಾಲಿಗೆ ಬೆನ್ನೆಲುಬಾಗಿದ್ದರು. ಸಮಾಜವಾದಿಯ ದಿಟ್ಟ ಹೋರಾಟಗಾರರು ಎಂದರು. ಇಂತಹವರ ಜನ್ಮ ದಿನಾಚರಣೆಯನ್ನು ಸರಕಾರಿ ಕಚೇರಿ‌ ಮತ್ತು ಶಾಲಾ ಕಾಲೇಜಿನಲ್ಲಿ ಆಚರಿಸಲು ಆದೇಶಿಸಬೇಕೆಂದರು. 

ಹೊಳೆಹೊನ್ನೂರು ಹೋಬಳಿ, ಯಡೇಹಳ್ಳಿ ಸರ್ವೆ ನಂ : 66 ರಲ್ಲಿ 68 ಎಕರೆ 1960-61 ರಲ್ಲಿ 34 ಪ್ರತಿ ಕುಟುಂಬದವರಿಗೆ 2,00 ಎಕರೆ ಮಂಜೂರಾದ ಜಮೀನಿನ ಪಹಣಿ ರದ್ದು ಮಾಡಿರುವುದನ್ನು ಖಂಡಿಸಿ ರೈತರ ಜಮೀನಿನ ಬಗ್ಗೆ ದೌರ್ಜನ್ಯ ದಬ್ಬಾಳಿಕೆ ನಡೆಸಿ ಸುಳ್ಳು ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಆ. 25 ರಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೂ ಪಾದಯಾತ್ರೆ ನಡೆಸಿ ಆರಂಭಿಸಿರುವ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದರು.

ಕ್ಷೇತ್ರಕ್ಕೆ ಜಿಲ್ಲಾ ಮಂತ್ರಿ ಎಸ್ ಮಧು ಬಂಗಾರಪ್ಪ ಸಭೆಯಲ್ಲಿ ಭಾಗವಹಿಸಿ ಶಿವಮೊಗ್ಗ ನಗರದಲ್ಲಿ ಇದ್ದರೂ ಕನಿಷ್ಟ ಸೌಜನ್ಯಕ್ಕಾದರೂ ಭೇಟಿ ನೀಡದೆ ರೈತರ ಸಮಸ್ಯೆಗಳನ್ನು ಆಲಿಸದ ಕ್ರಮವನ್ನು ಖಂಡಿಸಸುವುದಾಗಿ ಹೇಳಿದರು.

ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಒತ್ತಾಯಿಸಿ ಹಾಗೂ ಸತ್ಯಾಗ್ರಹವು ಮುಂದುವರೆಯಲಿದೆ . ಸೆ 10 ರಂದು ಸಾಗರದಲ್ಲಿ ಕಾಗೋಡು ತಿಮ್ಮಪ್ಪ ರವರಿಗೆ ವಿಶ್ವ ಮಾನವ ಪ್ರಶಸ್ತಿಯನ್ನು ಅರ್ಪಿಸಿ ಹೋರಾಟದ ಮನವಿಯನ್ನು ಸಹ ಅರ್ಪಿಸಿ ಅದೇ ದಿನ ಅಲ್ಲಿಂದ ಸೊರಬ ತಾಲ್ಲೂಕಿನಲ್ಲಿ ಇರುವ ಎಸ್ ಬಂಗಾರಪ್ಪ ಸಮಾಧಿ ಸ್ಥಳದ ಮುಂದೆ ಪ್ರತಿಭಟನಾ ಸತ್ಯಾಗ್ರಹ ಮುಂದುವರೆಯಲಿದೆ ಎಂದು‌ವಿವರಿಸಿದರು.

ಮಲೆನಾಡು ರೈತರ ಹೋರಾಟ ಸಮಿತಿಯೂ ಸಹ ಈ ಧರಣಿಗೆ ಬೆಂಬಲ ವ್ಯಕ್ತಪಡಿಸಲಿದೆ ಎಂದು ತೀ ನಾ ಶ್ರೀನಿವಾಸ್ ಈ ವೇಳೆ ಹೇಳಿದರು.

- Advertisement -  - Advertisement -  - Advertisement - 
Share This Article
error: Content is protected !!
";