ಅದ್ಧೂರಿ ಕನಕ ಜಯಂತಿ ಆಚರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಾಡೋನಹಳ್ಳಿ ಗ್ರಾಮದಲ್ಲಿ ಶ್ರೀ ದಾಸ ಶ್ರೇಷ್ಠ ಕನಕದಾಸರ
538ನೇ ಜಯಂತೋತ್ಸವ ಆಚರಣೆ ಮಾಡಲಾಯಿತು.

ಕನಕದಾಸರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ತೂಬಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರವಿ ಸಿದ್ದಪ್ಪ ಮಾತನಾಡಿ   15 ನೇ ಶತಮಾನದಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದ ಇವರ ಮೂಲ ಹೆಸರು ತಿಮ್ಮಪ್ಪ ನಾಯಕ. ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಮಾಜದ ನಡೆಯುತ್ತಿದ್ದ ಜಾತಿಗಳ ನಡುವಿನ ಬಡಿದಾಟ ಕಂಡು   ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಸಮಾಜಕ್ಕೆ ಸಂದೇಶ ನೀಡಿದ್ದಾರೆ.

- Advertisement - 

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಮತ್ತು ಕರ್ನಾಟಕ ಸಂಗೀತಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಕಾಗಿನೆಲೆ ಆದಿ ಕೇಶವರಾಯ ಎಂಬ ಅಂಕಿತ ನಾಮದಲ್ಲಿ ಸುಮಾರು 316 ಕೀರ್ತನೆಗಳನ್ನು ರಚಿಸಿದ ಮೋಹನತರಂಗಿಣಿ,ನಳಚರಿತ್ರೆರಾಮಧಾನ್ಯ ಚರಿತೆ, ಹರಿಭಕ್ತಿಸಾರ, ಮತ್ತು ನೃಸಿಂಹಸ್ತವ ಇವರ ಪ್ರಮುಖ ಕಾವ್ಯ ಕೃತಿಗಳು.

- Advertisement - 

ಸಾಮಾಜಿಕ ಹೋರಾಟ:
ಆ ಕಾಲದ ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸಿದರು. 

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಹೋಗಿದ್ದಾಗ ಕೆಳಜಾತಿಯವರು ಎಂಬ ಕಾರಣಕ್ಕೆ ಅವರಿಗೆ ದೇವಾಲಯದೊಳಗೆ  ಪ್ರವೇಶ  ಸಿಗಲಿಲ್ಲ. ಅದಕ್ಕೆ ಪ್ರತಿಕ್ರಿಯೆಯಾಗಿ, ಅವರು ದೇವಾಲಯದ ಹಿಂದು ಗಡೆ ನಿಂತು ಭಕ್ತಿಯಿಂದ ಪ್ರಾರ್ಥನೆ ಮಾಡಿದರು. 

ಆಗ ಶ್ರೀಕೃಷ್ಣನು ದೇವಾಲಯದ ಗೋಡೆಯನ್ನು ಒಡೆದು ಅವರಿಗೆ ದರ್ಶನ ನೀಡಿದನು. ಈ ಸ್ಥಳವನ್ನು ಇಂದು “ಕನಕನ ಕಿಂಡಿ” ಎಂಬುದು ಭಕ್ತಿಯ ಸಂದೇಶ ನೀಡಿದ್ದಾರೆ ಕನಕದಾಸರ ಕೀರ್ತನೆಗಳು ಮತ್ತು ಬೋಧನೆಗಳು ಇಂದಿಗೂ ನಮಗೆ  ಪ್ರಸ್ತುತವಾಗಿವೆಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ಖಜಾಂಚಿ ಕೆ ಎಂ ಕೃಷ್ಣಮೂರ್ತಿ, ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ಗುಂಜೂರು ಚಿಕ್ಕಣ್ಣ,

ನಗರಸಭಾ ಉಪಾಧ್ಯಕ್ಷ  ರೈಲ್ವೇ ಸ್ಟೇಷನ್ ಮಲ್ಲೇಶ, ಹಾಡೋನಹಳ್ಳಿ ನಾಗರಾಜ್, ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ರವಿ, ಹಾಡೋನಹಳ್ಳಿ ಸಂತ ದಾಸ ಶ್ರೇಷ್ಠ ಕನಕದಾಸ ಕುರುಬ ಸಂಘದ ಅಧ್ಯಕ್ಷ ತಮ್ಮಣ ರಾಜು, ರಾಜಣ್ಣ,ಹರೀಶ, ಮಂಜುನಾಥ,ಶ್ರೀಧರ ಮುಂತಾದವರು  ಹಾಜರಿದ್ದರು.

 

 

Share This Article
error: Content is protected !!
";