ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ,ಕೊನಘಟ್ಟ ಪ್ರೌಡಶಾಲೆ ಇಂಗ್ಲಿಷ್ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಿದ್ದಾರೆ ಹಾಗು 2017ರಲ್ಲಿ ಪ್ರೌಡಶಾಲೆ ಕಟ್ಟಡ ಉದ್ಘಾಟನೆ ಯಾಗಿ ಗೋಡೆಗಳು ಶಿಥಿಲ ವಾಗಿದ್ದು ನೆಲಕ್ಕೆ ಹಾಕಲಾದ ಸಿಮೆಂಟ್ ಕಿತ್ತು ಬರುತ್ತಿರುವುದರಿಂದ ಮಕ್ಕಳ ಕುಳಿತು ವಿದ್ಯೆ ಕಲಿಯಲು ಸಾಧ್ಯವಾಗಿಲ್ಲ ಹಾಗು ಮೂಲಭೂತ ಸೌಕರ್ಯ ವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.
ತರಗತಿಯ ಒಳಗಡೆ ರಸ್ತೆ ಗುಂಡಿ ಬಿದ್ದಿದ್ದು ಮಕ್ಕಳು ಅ ಸ್ಥಳದಲ್ಲಿಯೇ ಪಾಠ ಪ್ರವಚನ ನೆಡೆಯುತ್ತಿವೆ ಹಾಗು ಶಾಲೆ ಪ್ರಾರಂಭವಾಗಿ ಆರು ತಿಂಗಳು ಕಳೆದರು ಇಲ್ಲಿಯವರೆವಿಗೂ ಇಂಗ್ಲೀಷ್ ಶಿಕ್ಷಕರಿಲ್ಲದ ವಿಷಯವಾರು ಭೋದನೆ ಇಲ್ಲದಿದ್ದರೆ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗು ಶಾಲೆಗೆ
ಉತ್ತಮ ಫಲಿತಾಂಶ ಬರುವುದೂ ಹೇಗೆ ಅದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿ ಕೂಡಲೆ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಬೇಕು ಹಾಗು ಶಿಥಿಲವಾಗಿರುವ ನೆಲ ಹಾಗು ಗೋಡೆಗಳನ್ನು ದುರಸ್ತಿಗೊಳಿಸಿ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗು ಸದಸ್ಯರು ಇದರ ಬಗ್ಗೆ ಕ್ರಮ ವಹಿಸಿ ಶಾಲೆ ಸರ್ಕಾರಿ ಶಾಲೆ ಉಳಿವಿಗೆ ಶ್ರಮಿಸಬೇಕು.
ಜನಪ್ರತಿ ನಿಧಿಗಳು ಹಾಗು ರಾಜಕಾರಣಿಗಳು ಕನ್ನಡ ಭಾಷೆ ಉಳಿವಿಗೆ ಸರ್ಕಾರಿ ಶಾಲೆಗಳಲ್ಲಿ ನಮ್ಮ ಮಕ್ಕಳನ್ನು ಹಾಜರಾತಿ ಮಾಡಿ ಎಂದು ಹೇಳುವ ಜನಪ್ರತಿ ನಿಧಿಗಳು ತಿಂಗಳಿಗೋಮ್ಮೆಯಾದರು ಇಂತಹ ಶಾಲೆಗಳಿಗೆ ಬೇಟಿ ನೀಡಿ ಶಾಲೆಯಲ್ಲಿ ಇರುವ ಸಮಸ್ಯೆಗಳನ್ನು ತಿಳಿದು ಬಗೆಹರಿಸಿದ್ದರೆ ಸರ್ಕಾರಿ ಉಳಿಸಬಹುದು ಹಾಗು ಸಾರ್ವಜನಿಕರು ಖಾಸಗಿ ಶಾಲೆಗಳ ಕಡೆ ಮುಖ ಮಾಡುವುದಿಲ್ಲ .ಇದರ ಸಾಕ್ಷಿಯಾಗಿ ಬಾಶೆಟ್ಟಹಳ್ಳಿಯ ಅಜಾಕ್ಸ್ ಸಹಯೋಗದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ಬಡ ಹಾಗು ಶ್ರೀಮಂತರು ಈ ಶಾಲೆ ದಾಖಲಾತಿ ಮುಂದಾಗಿರುವುದು ತಾಲ್ಲೂಕಿಗೆ ಮಾದರಿಯಾಗಿದೆ.