ಚಂದ್ರವಳ್ಳಿ ನ್ಯೂಸ್, ತುಮಕೂರು:
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ರುಡ್‌ಸೆಟ್ ಸಂಸ್ಥೆಯಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಮನೋವಿಜ್ಞಾನ, ಪತ್ರಿಕೋದ್ಯಮ, ಗ್ರಾಮೀಣಾಭಿವೃದ್ಧಿ, ಸಮಾಜಶಾಸ್ತ್ರ, ಸಮಾಜ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ/ ಎಂ.ಕಾಂ/ಬಿಎಸ್ಸಿ(ಕೃಷಿ), ಬಿಬಿಎಂ/ಬಿ.ಎ./ಬಿಎಸ್ಸಿ ಪದವಿಯೊಂದಿಗೆ ಬಿ.ಎಡ್ ಅಥವಾ ಎಂ.ಎಡ್ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಬಲ್ಲವರಾಗಿದ್ದು, ಟೈಪಿಂಗ್ ಹಾಗೂ ಗಣಕಯಂತ್ರದಲ್ಲಿ ಎಂ.ಎಸ್ ವರ್ಡ್, ಎಂ.ಎಸ್ ಎಕ್ಸೆಲ್, ಎಂ.ಎಸ್. ಪವರ್ ಪಾಯಿಂಟ್‌ನಲ್ಲಿ ಪರಿಣಿತಿ ಹೊಂದಿದ್ದು, ೨೨ ರಿಂದ ೩೦ ವಯೋಮಾನದೊಳಗಿನವರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವಯಂ ವಿವರವನ್ನು ಇ-ಮೇಲ್: [email protected]ಗೆ ಡಿಸೆಂಬರ್ ೨೮ರೊಳಗೆ ಸಲ್ಲಿಸಬೇಕು. ಆಯ್ಕೆಯಾದವರಿಗೆ ಮಾಸಿಕ ೩೦,೦೦೦ ರೂ. ಗಳ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : ೯೧೧೩೮೮೦೩೨೪ ಅಥವಾ ೯೬೮೬೧೭೨೪೪೪ನ್ನು ಸಂಪರ್ಕಿಸಬೇಕೆಂದು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ರವಿಕುಮಾರ್ ತಿಳಿಸಿದ್ದಾರೆ.