ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1972–74 ಈ ವರ್ಷಗಳ ಅವಧಿಯಲ್ಲಿಯೇ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟರಾಗಿ ಪ್ರವೇಶ ಪಡೆದು ವಂಶವೃಕ್ಷ , ನಾಗರಹಾವು, ಬೂತಯ್ಯನ ಮಗ ಅಯ್ಯು ಈ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಈ ಮೂರು ಚಿತ್ರಗಳು ರಾಜ್ಯ ಸರ್ಕಾರದಿಂದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿವೆ.
1972 – ವಂಶವೃಕ್ಷ ಈ ಸಿನಿಮಾ ನಾನು ನೋಡಿಲ್ಲ. 1973 – ನಾಗರಹಾವು ಈ ಸಿನಿಮಾವನ್ನು ಬಹಳಷ್ಟು ಇಷ್ಟಪಟ್ಟು ಹಲವಾರು ಬಾರಿ ನೋಡಿದ್ದೇನೆ. ಯುವಕರ ಪ್ರಬಲ ವ್ಯಕ್ತಿತ್ವವಾದ ಕಿಚ್ಚು ಈ ಸಿನಿಮಾವನ್ನು ಎತ್ತಿಹಿಡಿಯಲು ಬಹಳಷ್ಟು ಪ್ರಭಾವ ಬೀರುತ್ತದೆ. ಮಕ್ಕಳಿಲ್ಲದ ದಂಪತಿಗಳಿಗೆ ಮಗನಾಗಿ, ಮೇಷ್ಟ್ರುಗೆ ತಕ್ಕ ಶಿಷ್ಯನಾಗಿ, ಪ್ರೀತಿಯ ಭಾಂದವ್ಯವದಲ್ಲಿ ರಾಮಾಚಾರಿ ಪಾತ್ರ ಕೌಟುಂಬಿಕ ಹಿನ್ನೆಲೆಯಲ್ಲಿ ಮೂಡಿಬಂದಿದೆ.
ಈ ಸಿನಿಮಾದ ಪ್ರತಿಯೊಂದು ಹಾಡುಗಳು ಸಿನಿಮಾಕ್ಕೆ ನ್ಯಾಯ ಒದಗಿಸಿವೆ. ಈ ಸಿನಿಮಾದ ಒಂದು ಹಾಡು ಚಿತ್ರದುರ್ಗದ ಐತಿಹಾಸಿಕ ಪರಂಪರೆಯನ್ನು ಸಾರುತ್ತದೆ. ಈ ಸಿನಿಮಾ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದೇ ಆ ಕಾರಣಕ್ಕೆ. ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅನ್ಯ ಭಾಷೆಯಲ್ಲಿ ಬಂದಿರುವ ಈ ಎಲ್ಲಾ ಸಿನಿಮಾಗಳು ಚಿತ್ರದುರ್ಗದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಆ ಕಾರಣಕ್ಕೆ ಚಿತ್ರದುರ್ಗದ ಇತಿಹಾಸ ದೇಶಕ್ಕೆ ಪರಿಚಯವಾಗಿದೆ.
1974 – ಭೂತಯ್ಯನ ಮಗ ಅಯ್ಯು ಈ ಸಿನಿಮಾ ಗ್ರಾಮೀಣ ಪ್ರಾಂತ್ಯದಲ್ಲಿ ಮೌಲ್ಯಗಳ ಆಧಾರದಲ್ಲಿ ನ್ಯಾಯ ಸಮ್ಮತವಾಗಿ ಕೂಡಿ ಬಾಳುವ ನೀತಿಯನ್ನು ಸಮಾಜಕ್ಕೆ ಸಾರುತ್ತದೆ.
ಈ ಸಿನಿಮಾದ ಕಥೆ ನನಗೆ ಬಹಳಷ್ಟು ಪ್ರಭಾವ ಬೀರಿದ್ದೆ ಈ ಸಿನಿಮಾವನ್ನು ಇಷ್ಟಪಟ್ಟು ಹಲವಾರು ಬಾರಿ ನೋಡಿದ್ದೇನೆ. ಈ ಚಿತ್ರದ ಪ್ರತಿಯೊಂದು ಸನ್ನಿವೇಶಗಳು ಅರ್ಥಗರ್ಭಿತವಾಗಿದೆ. ಈ ಸಿನಿಮಾದ ಹಾಡುಗಳು ಚೆನ್ನಾಗಿವೆ. ಊರು ಹಬ್ಬದ ಮಾರಮ್ಮ ದೇವಿ ಹಾಡಿನ ಸನ್ನಿವೇಶ ಚೆನ್ನಾಗಿ ಮೂಡಿಬಂದಿದೆ. ನನಗೆ ಬಹಳಷ್ಟು ಇಷ್ಟವಾದ ಹಾಡು ಇದಾಗಿದೆ.
ಕಿರು ಮಾಹಿತಿ:ರಘು ಗೌಡ