ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಬಿಜಿ ರಾಮ್ ಜಿಗೆ ಕಾಂಗ್ರೆಸ್ ವಿರೋಧ ಮಾಡುತ್ತಿದ್ದುದ್ದಕ್ಕೆ ಇದೇ ಕಾರಣವೇ? ಮನರೇಗಾ ಪರವಾಗಿ ಕಾಂಗ್ರೆಸ್ ಪಕ್ಷದ ವಕಾಲತ್ತಿನ ಅಸಲಿಯತ್ತು ಇದೆ ಏನು? ಮುಖಚಹರೆ ಬಯೋಮೆಟ್ರಿಕ್ ಪದ್ಧತಿಯಿಂದ ರಾಜ್ಯವೊಂದರಲ್ಲೇ ಬರೋಬ್ಬರಿ 33,972 ನಕಲಿ ಜಾಬ್ ಕಾರ್ಡ್‌ಗಳು ಪತ್ತೆಯಾಗಿರುವುದು ಹಿಂದಿನ ವ್ಯವಸ್ಥೆಯ ಲೂಟಿ ಕೋಟೆಗೆ ಬಿದ್ದ ದೊಡ್ಡ ಹೊಡೆತ.
ಸತ್ತವರ ಹೆಸರಲ್ಲಿ, ಊರಲ್ಲಿಲ್ಲದವರ ಹೆಸರಲ್ಲಿ ಹಣ ಗುಳುಂ ಮಾಡುತ್ತಿದ್ದವರ ಕಳ್ಳಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬ್ರೇಕ್ ಹಾಕಿದೆ. ಬಡವರ ಹೊಟ್ಟೆ ಸೇರಬೇಕಿದ್ದ ಹಣವನ್ನು ಮಧ್ಯವರ್ತಿಗಳ ಪಾಲಾಗುವುದನ್ನು ತಡೆದದ್ದಕ್ಕೆ ಕಾಂಗ್ರೆಸ್ ಇಷ್ಟು ಬೊಬ್ಬೆ ಹೊಡೆದಿತ್ತೆ ಎಂದು ದೇಶದ ಜನ ಕೇಳುತ್ತಿದ್ದಾರೆ! ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ತಂತ್ರಜ್ಞಾನದ ಮೂಲಕ ಪಾರದರ್ಶಕತೆ ತರುವುದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ಇಂತಹ ಕ್ರಾಂತಿಕಾರಿ ಹೆಜ್ಜೆಗಳಿಂದ ನೈಜ ಶ್ರಮಿಕ ಕಾರ್ಮಿಕರಿಗೆ ನ್ಯಾಯ ಸಿಗುತ್ತಿದೆ. ಭ್ರಷ್ಟಾಚಾರದ ಬೇರುಗಳನ್ನು ಸೀಳುತ್ತಿರುವ ಈ ಬಯೋಮೆಟ್ರಿಕ್ ವ್ಯವಸ್ಥೆ “ಪಾರದರ್ಶಕ ಭಾರತ” ನಿರ್ಮಾಣದ ದ್ಯೋತಕ. ಲೂಟಿ ಹೊಡೆಯುವವರಿಗೆ ಸಿಂಹಸ್ವಪ್ನವಾಗಿರುವ ವ್ಯವಸ್ಥೆ ಬಿಜೆಪಿ ಸರ್ಕಾರದ ಜನಪರ ಆಡಳಿತಕ್ಕೆ ಸಾಕ್ಷಿ. ಮೋದಿ ಸರ್ಕಾರದ ಪರಿವರ್ತನಾ ಕ್ರಮಗಳ ವಿರುದ್ಧ ಕಾಂಗ್ರೆಸ್ ಏಕೆ ಯಾವಾಗಲೂ ಪ್ರತಿಭಟಿಸುತ್ತದೆ ಎಂಬ ಸತ್ಯ ಜನತೆಗೆ ಮನವರಿಕೆಯಾಗಿದೆ; ಲೂಟಿಕೋರರ ಸ್ವಾರ್ಥದ ಪ್ರತಿಭಟನೆಗಳಿಗೆ ಜನಸಾಮಾನ್ಯರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

