ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
BJP ಮತ್ತು RSS ಸಂವಿಧಾನ ವಿರೋಧಿಗಳು. ಅವರ ನರನಾಡಿಗಳಲ್ಲಿ ಸಂವಿಧಾನದ ವಿರೋಧಿ ದ್ವೇಷವೇ ತುಂಬಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ.
ಈ ಸಂದರ್ಶನವನ್ನು ನೋಡಿ, ಇದರಲ್ಲಿ ಆರ್‌ಎಸ್‌ಎಸ್‌ನ ಮಾಜಿ ಸರಸಂಘಚಾಲಕ ಕೆ.ಎಸ್ ಸುದರ್ಶನ್ ಹೇಳಿದ್ದಿಷ್ಟು.. “ನಾವು ಭಾರತದ ಸಂವಿಧಾನವನ್ನು ಒಪ್ಪುವುದಿಲ್ಲ. ಅದನ್ನು ಪರಿಶೀಲಿಸಬೇಕು”.
ಇದೇ ಮೊದಲಲ್ಲ, ಸಂವಿಧಾನ ಜಾರಿಯಾದಾಗಿನಿಂದ RSS ನವರು ಅದನ್ನು ವಿರೋಧಿಸುತ್ತಲೇ ಬಂದಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಲೋಕಸಭೆ ಚುನಾವಣೆಯಲ್ಲೂ BJP ನಾಯಕರು ಇದೇ ಮಾತನ್ನು ಪುನರುಚ್ಚರಿಸಿರುವುದು ಕಂಡುಬಂದಿದೆ. “400 ಸ್ಥಾನ ಬಂದ ತಕ್ಷಣ ಸಂವಿಧಾನ ಬದಲಿಸುತ್ತೇವೆ”. ಆದರೆ, ದೇಶದ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.
ಸಂವಿಧಾನದ ಅಡಿಯಲ್ಲಿ ನಡೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಭಾರತದ ಆತ್ಮ. ನಾವು ಅದನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುತ್ತೇವೆ ಎಂದು ಕಾಂಗ್ರೆಸ್ ವಾಗ್ದಾನ ಮಾಡಿದೆ.