ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿ ಸೇರಿ ಹಲವು ತೀರ್ಮಾನ ಮಾಡಿದ ಸಂಪುಟಸಭೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಅನುಮೋದಿಸಲಾಗಿದೆ.
ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು ಎಂದಿದೆ. ಮುಸ್ಲಿಂ ಅಷ್ಟೇ ಅಲ್ಲ, ಕ್ರಿಶ್ಚಿಯನ್ ಇನ್ಸ್ಸ್ಟಿಟ್ಯೂಷನ್ಗೆ ಷರತ್ತುಗಳು ಅನ್ವಯವಾಗಲಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮಕ್ತ ಅವಕಾಶವಿರಲಿದೆ. ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆಯಲ್ಲಿ ಮೊದಲು ನಿರ್ಬಂಧಗಳಿದ್ದವು ಎಂದು ತಿಳಿಸಿದ್ದಾರೆ.
ವಿಶ್ವಬ್ಯಾಂಕ್ ನೆರವಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಉನ್ನತೀಕರಣಕ್ಕೆ 1500 ಕೋಟಿ ರೂ. ಕಾರ್ಯಕ್ರಮ ಯೋಜನೆ ರೂಪಿಸಲಾಗಿದೆ. ವಿಶ್ವಬ್ಯಾಂಕ್ನಿಂದ 1,750 ಕೋಟಿ ರೂ. ಹಣ ಸಾಲ ಪಡೆಯುವುದು. ಒಟ್ಟು ಉನ್ನತ ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ 2,500 ಕೋಟಿ ರೂ. ಅನುದಾನಕ್ಕೆ ಅಸ್ತು ಎನ್ನಲಾಗಿದೆ. 19.70 ಕೋಟಿ ರೂ. ವೆಚ್ಚದಲ್ಲಿ ಲ್ಯಾಬ್ಗಳು ಡಯಾಗ್ನಸ್ಟಿಕ್ ಕಿಟ್ ಖರೀದಿಸಲು ಅನುಮೋದನೆ ನೀಡಲಾಗಿದೆ.
ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ ತಿದ್ದುಪಡಿಗೆ ಸಂಪುಟ ಅಸ್ತು ಕಾರ್ಪೊರೇಷನ್ ಸಂಸ್ಥೆಗಳಿಗೆ ಅಂತರ್ ಉದ್ಯಮ ಠೇವಣಿ ಇಡುವುದಕ್ಕೆ ಸಂಪುಟ ಸಮ್ಮತಿ ಸೂಚಿಸಿದೆ. ಒಂದರಿಂದ ಮತ್ತೊಂದು ಉದ್ಯಮದಲ್ಲಿ ಹಣ ಠೇವಣಿ ಇಡುವುದು. ಸೇವೆ ಎಲ್ಲಿದೆ ಅಲ್ಲಿಂದ ಬೇರೆಯದಕ್ಕೆ ಠೇವಣಿ ಇಡಬಹುದಾಗಿದೆ. ಆ ಮೂಲಕ ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ ತಿದ್ದುಪಡಿಗೆ ಸಂಪುಟ ಅಸ್ತು ಎಂದಿದೆ. ಠೇವಣಿದಾರರ ಹಿತ ಕಾಯುವುದು, ರಕ್ಷಣೆ, ಹೊಣೆಗಾರಿಕೆಯಿದೆ.
ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆಗಳನ್ನು ವಿಲೀನಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಪರಿಣಾಮಕಾರಿಯಾಗಿ ಕೆಲಸ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ರಸ್ತೆಗಳಅಭಿವೃದ್ಧಿ 694 ಕೋಟಿ-ರಸ್ತೆ ಗುಂಡಿಗಳಿಂದ ಸರ್ಕಾರ ಟೀಕೆಗೊಳಗಾಗಿತ್ತು. ಹಾಗಾಗಿ ರಸ್ತೆ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆ ಮಾಡಿದೆ. 694 ಕೋಟಿ ರೂ. ಅನುದಾನದಲ್ಲಿ 1681 ಕಿ.ಮೀ ಬಿಬಿಎಂಪಿ ವ್ಯಾಪ್ತಿಯ ಉಪಮುಖ್ಯ ರಸ್ತೆಗಳಅಭಿವೃದ್ಧಿ ಮಾಡುವುದು. ಸಂಪಂಗಿರಾಮ ನಗರದಲ್ಲಿ ಸಮಾಜಕಲ್ಯಾಣ ಭವನ ನಿರ್ಮಾಣಕ್ಕೆ 40.50 ಕೋಟಿ ರೂ. ಅನುದಾನಕ್ಕೆ ಸಮ್ಮತಿಸಲಾಗಿದೆ.
ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವನ್ನು 43.95 ಕೋಟಿ ರೂ. ವೆಚ್ಚದಲ್ಲಿ ಒದಗಿಸಲು ತೀರ್ಮಾನಿಸಲಾಗಿದೆ. ಆಹಾರ ಗುಣಮಟ್ಟ ಮತ್ತು ಔಷಧ ನಿಯಂತ್ರಣ ಇಲಾಖೆಯನ್ನು ಒಂದು ಮಾಡಲು ಒಪ್ಪಿಗೆ ನೀಡಲಾಗಿದೆ. ಆ ಮೂಲಕ ಮತ್ತಷ್ಟು ಗುಣಮಟ್ಟ ಕಾಯ್ದುಕೊಳ್ಳಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಯುಪಿ, ಬಿಹಾರ ಬೇರೆಡೆ ಇದೇ ರೀತಿ ಮರ್ಜ್ ಮಾಡಲಾಗಿದೆ. ಇದೀಗ ಮರ್ಜ್ ಮಾಡೋದ್ರಿಂದ ಒಳ್ಳೆಯ ರಿಸಲ್ಟ್ ಸಿಗಲಿದೆ ಎಂದಿದ್ದಾರೆ.
ಸಚಿವ ಸಂಪುಟ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದ ಬಗ್ಗೆ ಚರ್ಚೆಯಾಗಿದೆ. ರಾಯಲ್ಟಿ ಪರಿಷ್ಕರಣೆ ಮಾಡಲು ಸಂಪುಟ ಸಭೆ ಸಮ್ಮತಿಸಿದೆ. ಸರ್ಕಾರದ ಆದಾಯ ಹೆಚ್ಚಳಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಗ್ಯಾರೆಂಟಿಗಳಿಗೇನು ಹಣದ ಕೊರತೆಯಿಲ್ಲ ಆದರೆ ಅಭಿವೃದ್ಧಿ ಕೆಲಸಗಳು ಆಗಬೇಕಲ್ಲ ಹಾಗಾಗಿ ರಾಯಲ್ಟಿ, ತೆರಿಗೆ ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.ಕಟ್ಟಡ ಕಲ್ಲು, ಮೈನಿಂಗ್ ಕಲ್ಲು ಪ್ರತಿ ಟನ್ಗೆ 80 ರೂ. ರಾಯಲ್ಟಿ ನಿಗದಿಯಿಂದ 311.55 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಮೊದಲು ಮೆಟ್ರಿಕ್ ಟನ್ಗೆ 20 ರೂ. ರಾಯಲ್ಟಿ ನಿಗದಿಯಾಗಿತ್ತು. ಈಗ ಪ್ರತಿ ಮೆಟ್ರಿಕ್ ಕಲ್ಲಿಗೆ 10 ರೂ. ರಾಯಲ್ಟಿ ಹೆಚ್ಚಿಸಲಾಗಿದೆ. ರಾಯಲ್ಟಿ ಪಾವತಿಸದೆ ಖನಿಜ ಸಾಗಣೆ ಮಾಡಿದರೆ ದಂಡ ವಸೂಲಿಗೆ ನಿರ್ಧರಿಸಲಾಗಿದೆ. 6,105 ರೂಪಾಯಿ ದಂಡ ವಿಧಿಸಲಾಗಿತ್ತು. ಕಳೆದ 6-7 ವರ್ಷಗಳಿಂದ ದಂಡ ವಸೂಲಿಯಾಗಿಲ್ಲ, ಬಾಕಿಯಿದೆ. ಹಾಗಾಗಿ ಒನ್ಟೈಮ್ ಸೆಟ್ಲ್ಮೆಂಟ್ಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಗಣಿಗಾರಿಕೆನಡೆಸುವವರು ಕಳೆದ ಐದು ವರ್ಷಗಳಿಂದ ದಂಡ ಕಟ್ಟಿಲ್ಲ. ಅದನ್ನ ವಸೂಲಿಮಾಡಲು ಈ ತೀರ್ಮಾನ ಮಾಡಲಾಗಿದೆ. ಡಿಜಿಟಲ್ ಮಾಡಿದ ಮೇಲೆ ಎನ್ ಕ್ರೋಚ್ ಸಾಧ್ಯವಾಗುತ್ತಿಲ್ಲ. ಒಟಿಎಸ್ ಮೂಲಕ ದಂಡ ವಸೂಲಿಗೆ ಕ್ರಮಕೈಗೊಳ್ಳಲಾಗುತ್ತಿದೆ.1221 ಕೋಟಿ ರೂ. ರಾಯಲ್ಟಿ ಅಂತ ಪರಿಗಣಿಸಿದ್ದೇವೆ. 6105 ಕೋಟಿ ರೂ. ದಂಡ ಬಾಕಿ ಉಳಿದಿದೆ. ಒಟಿಎಸ್ ನಿಂದ ಇದರಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಸರ್ಕಾರಕ್ಕೆ ಆದಾಯಬೇಕು. ಅದನ್ನ ವಸೂಲಿಮಾಡಲು ಹೊರಟಿದ್ದೇವೆ ಎಂದಿದ್ದಾರೆ.
ಖನಿಜಗಳನ್ನಹೊಂದಿರುವ ಭೂಮಿಗೆ ತೆರಿಗೆ ಹಾಕಲು ಸರ್ಕಾರ ನಿರ್ಧರಿಸಿದೆ. ಯಾವುದೇ ಖನಿಜಗಳನ್ನಹೊಂದಿರಬಹುದು, ಅಂತಹ ಭೂಮಾಲಿಕರು ತೆರಿಗೆ ಪಾವತಿಸಬೇಕಾಗುತ್ತದೆ. ಬಾಕ್ಸೈಟ್, ಕ್ರೋಮ್ ಇನ್ನಿತರ ಖನಿಜ ಇರುವ ಭೂಮಿ ಒಂದು ಟನ್ಗೆ 100 ರೂ. ರಾಯಲ್ಟಿ ಹಾಕಲಾಗುವುದು. ಈ ತೆರಿಗೆಯನ್ನು ಭೂಮಾಲಿಕರು ಕಟ್ಟಬೇಕಿದೆ. ಆ ಖನಿಜದ ಹಕ್ಕುಗಳು ಭೂಮಾಲಿಕರಿಗೆ ಸೇರುತ್ತದೆ.