ಮೆಟ್ರೋ ರೈಲು ದರ ಕಡಿಮೆಗೊಳಿಸಲು ಸಿಎಂ ಮನವಿ

News Desk

ಮೆಟ್ರೋ ರೈಲು ದರ ಕಡಿಮೆಗೊಳಿಸಲು ಸಿಎಂ ಮನವಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಃಒಖಅಐ) ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯನ್ನು ಜಾರಿಗೆ ತಂದಿರುವುದರಲ್ಲಿ ಕೆಲವು

ಮಾರ್ಗಗಳಲ್ಲಿ ದರಗಳು ದ್ವಿಗುಣಗೊಂಡಿರುವುದು ಹಲವು ಅನಾನುಕೂಲತೆಗಳಿಗೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದರಿಂದ ಪ್ರಯಾಣಿಕರಿಗೆ ಭಾರೀ ಆರ್ಥಿಕ ಹೊರೆ ಉಂಟಾಗಿದೆ. ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು, ಈ ತೊಂದರೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಹಾಗೂ ದುಪ್ಪಟ್ಟು ಹೆಚ್ಚಾದ ದರಗಳನ್ನು ಕಡಿಮೆ ಮಾಡುವಂತೆ,

ಸಾರ್ವಜನಿಕರ ಮೇಲೆ ಆರ್ಥಿಕ ಒತ್ತಡ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಃಒಖಅಐನ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

Share This Article
error: Content is protected !!
";