ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಲೆದಂಡ ಆಗಬೇಕಾಗಿರುವುದು ಪೊಲೀಸರದ್ದಲ್ಲ ! ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ, ಗೃಹ ಸಚಿವರ ಡಾ.ಜಿ.ಪರಮೇಶ್ವರ ಅವರದ್ದು ! ಎಂದು ಜೆಡಿಎಸ್ ಆಗ್ರಹ ಮಾಡಿದೆ.
ಪೊಲೀಸರು ಕೊಟ್ಟ ಅಪಾಯದ ಮುನ್ಸೂಚನೆಯನ್ನು ಧಿಕ್ಕರಿಸಿದ್ದು ದುಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ. ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಬರೆದಿರುವ ಪತ್ರ ಸಿದ್ದರಾಮಯ್ಯ ಸರ್ಕಾರದ ಲೋಪಗಳನ್ನು ಬೆತ್ತಲೆಗೊಳಿಸಿದೆ.
ತಮ್ಮ ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಮತ್ತು ಕಾಂಗ್ರೆಸ್ ಸರ್ಕಾರದ ಪ್ರಚಾರಕ್ಕೆ ಎರೆಡು ಕಡೆ ಕಾರ್ಯಕ್ರಮ ಆಯೋಜಿಸಿ ಬೇಳೆ ಬೇಯಿಸಿಕೊಂಡಿದ್ದು ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿಕೆಶಿ ಎಂದು ಜೆಡಿಎಸ್ ಹರಿಹಾಯ್ದಿದೆ.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶವನ್ನು ಮುಚ್ಚಿಕೊಳ್ಳಲು ಕಾಲ್ತುಳಿತ ದುರಂತಕ್ಕೆ ಪೊಲೀಸರನ್ನು ಬಲಿಪಶು ಮಾಡಿದ್ದಾರೆ.
ಇಷ್ಟೆಲ್ಲ ವೈಫಲ್ಯಗಳು ಬಹಿರಂಗಗೊಂಡಿದ್ದರೂ ಸಿಎಂ, ಡಿಸಿಎಂ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಲು ಯಾವ ನೈತಿಕತೆ ಉಳಿದಿದೆ. ಭಂಡತನ ಬಿಟ್ಟು, ಮೊದಲು ರಾಜೀನಾಮೆ ಕೊಟ್ಟು, ಅಧಿಕಾರದಿಂದ ಕೆಳಗೆ ಇಳಿಯಿರಿ ಎಂದು ಜೆಡಿಎಸ್ ತಾಕೀತು ಮಾಡಿದೆ.