ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ನಿರಾಸೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯನಿಂದ ಶಿವಲಿಂಗ ಸ್ಪರ್ಶದ ಕೌತುಕ ಕಣ್ತುಂಬಿಕೊಳ್ಳಲು ಬಂದ ಭಕ್ತರಿಗೆ ನಿರಾಸೆಯಾಗಿದೆ. ಮೋಡ ಕವಿದಿದ್ದರಿಂದ ಇತಿಹಾಸದಲ್ಲೇ
2ನೇ ಬಾರಿಗೆ ಸೂರ್ಯ ರಶ್ಮಿ ಶಿವಲಿಂಗದ ಸ್ಪರ್ಶ ಮಾಡಿಲ್ಲ ಎನ್ನಲಾಗಿದೆ.

ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗದ ಮೇಲೆ ಪ್ರತಿ ಮಕರ ಸಂಕ್ರಾಂತಿ ದಿನ ಸೂರ್ಯ ರಶ್ಮಿ‌ಯ ಸ್ಪರ್ಶವಾಗುತ್ತದೆ. ಆದರೆ, ಈ ಬಾರಿ ಮೋಡ ಮುಚ್ಚಿದ ವಾತಾರವರಣ ಇದ್ದ ಪ್ರಯುಕ್ತ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಿಲ್ಲ.

ಗವಿಗಾಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಪ್ರತಿಕ್ರಿಯಿಸಿ, 5:20 ರಿಂದ 5:23ರ ಸುಮಾರಿಗೆ ದೇಗುಲ ಬಲಭಾಗದ ಕಮಾನಿನಿಂದ ಕಿಟಕಿಯ ಮೂಲಕ ಪ್ರವೇಶಿಸಬೇಕಿದ್ದ ಸೂರ್ಯ ರಶ್ಮಿ ಮೋಡ ಕವಿದಿದ್ದರಿಂದ ಗೋಚರವಾಗಿಲ್ಲ. ಇದರಿಂದ ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.

ಶಿವಲಿಂಗಕ್ಕೆ ಸೂರ್ಯನ ಪೂಜೆ ನಡೆದಿದೆ. ಈಶ್ವರನ ಅನುಗ್ರಹ ನಾಳೆಯಿಂದ ಎಲ್ಲರಿಗೂ ಲಭ್ಯವಾಗುತ್ತದೆ. ಸೂರ್ಯ ರಶ್ಮಿಯು ಖಂಡಿತವಾಗಿ ಶಿವಲಿಂಗವನ್ನ ಸ್ಪರ್ಶಿಸಿದೆ. ಆದರೆ, ಎಷ್ಟು ನಿಮಿಷಗಳ ಕಾಲ ಸೂರ್ಯ ರಶ್ಮಿಯ ಸ್ಪರ್ಶವಾಗಿದೆ ಎಂದು ತಿಳಿದಿಲ್ಲ. ಪ್ರಸಕ್ತ ವರ್ಷದಲ್ಲಿ ಯಾವುದೇ ಕೆಡುಕುಗಳು ಉಂಟಾಗುವುದಿಲ್ಲ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";