ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ವಿಚಾರಕ್ಕೆ ಸಂಬಂದಿಸಿದಂತೆ ದಿನಾಂಕ.19.01.2025ರಂದು ಚುನಾವಣೆ ನೆಡೆಯಲಿದೆ.
ಚುನಾವಣಾ ಪ್ರಕ್ರಿಯೆಯಂತೇ ನಾಮಪತ್ರ ವಾಪಾಸು ತೆಗೆಯಲು ಇಂದು ಜ.15 ಅಂತಿಮ ದಿನವಾಗಿತ್ತು. ಇಂದು ಬಹಳಷ್ಟು ನಾಮಪತ್ರಗಳು ವಾಪಾಸಾತಿ ನಂತರ 11 ನಿರ್ದೇಶಕರ ಆಯ್ಕೆಯ ನಿಟ್ಟಿನಲ್ಲಿ ಅಂತಿಮವಾಗಿ ಕಣದಲ್ಲಿ 31 ಅಭ್ಯರ್ಥಿಗಳು ಚುನಾವಣೆ ಎದುರಿಸಲು ಸಿದ್ದರಾಗಿದ್ದಾರೆ.
ಸುಮಾರು ಆಜುಬಾಜು 238 ಮತದಾರರು ಅಭ್ಯರ್ಥಿಗಳ ಹಣೆಪಟ್ಟಿ ಬರೆಯಲು ಸಿದ್ದರಾಗಿದ್ದಾರೆ. ಅದಕ್ಕೂ ಮುಂಚೆ ಬಹಳಷ್ಟು ರಾಜಕೀಯ ಮುಖಂಡರು ಬಹಳಷ್ಟು ರೀತಿಯಲ್ಲಿ ಅವಿರೋಧ ಆಯ್ಕೆ ಮಾಡಲು ಪ್ರಯತ್ನಿಸಿದ್ದರು ಆದರೂ ಅದು ಯಶಸ್ವಿಯಾಗದ ಹಿನ್ನಲೆಯಲ್ಲಿ ಅಂತಿಮವಾಗಿ ಚುನಾವಣೆ ಎದುರಿಸಲು ಅಭ್ಯರ್ಥಿಗಳು ಸಿದ್ದರಾಗುವ ಪ್ರಸಂಗ ಎದುರಾಯಿತು.