ಮುಖ್ಯೋಪಾಧ್ಯಾಯ ಬೋರನಕುಂಟೆ ಉಮಾಪತಿಗೆ ಬೀಳ್ಕೊಡುಗೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಯೋನಿವೃತ್ತಿ ಹೊಂದಿದ ಶಿಕ್ಷಣ ಇಲಾಖೆಯ ಮುಖ್ಯೋಪಾಧ್ಯಾಯ ಬೋರನಕುಂಟೆ ಉಮಾಪತಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.

- Advertisement - 

ಹಿರಿಯೂರು ತಾಲೂಕಿನ ಆರನಕಟ್ಟೆ ಗ್ರಾಮದ ಶ್ರೀವಾಣಿ ವಿಲಾಸ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶನಿವಾರ ಸಾರ್ವಜನಿಕರಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಬಿಳ್ಕೋಡಲಾಯಿ.

- Advertisement - 

ಆರನಕಟ್ಟೆ ಗ್ರಾಮದ ಶ್ರೀ ವಾಣಿ ವಿಲಾಸ ಗ್ರಾಮಾಂತರ ಪ್ರೌಢಶಾಲೆ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಲ್.ಜಿ ರಾಮಲಿಂಗೇಗೌಡರು ಮಾತನಾಡಿ ವಿ.ಉಮಾಪತಿ ಅವರು ನಮ್ಮ ಸಂಸ್ಥೆಗೆ ಆಗಮಿಸಿ ಸತತ 33 ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ, ಕಪ್ಪುಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿ, ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡು ಯಶಸ್ವಿಯಾಗಲು ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾರ್ವಜನಿಕ ವಲಯಗಳಲ್ಲಿ ಅತ್ಯಂತ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರು. ಮಕ್ಕಳು ಮತ್ತು ಪೋಷಕರ ಜೊತೆ ಉತ್ತಮ ಒಡನಾಟ ಹೊಂದಿದ್ದ ಮುಖ್ಯೋಪಾಧ್ಯಾಯ ಉಮಾಪತಿ ಅವರ ಸೇವೆ ಮತ್ತೊಷ್ಟು ಅಗತ್ಯವಾಗಿದೆ. ಅವರು ವಾರದಲ್ಲಿ ಎರಡು-ಮೂರು ದಿನ ಶಾಲೆಗೆ ಆಗಮಿಸಿ ಅವರಲ್ಲಿರುವ ಜ್ಞಾನವನ್ನು ಮಕ್ಕಳಿಗೆ ನೀಡಲಿ ಎಂದು ಕೋರಿದರು.

- Advertisement - 

ಸಾರ್ವಜನಿಕರ ಶಿಕ್ಷಣ ಇಲಾಖೆ, ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದರ ಜೊತೆಗೆ ಅವರು ಮಕ್ಕಳಿಗೆ ನೀಡಿರುವ ಶಿಕ್ಷಣ, ಮಾರ್ಗದರ್ಶ ಮರೆಯುವಂತಿಲ್ಲ. ಅವರ ಮಾರ್ಗದರ್ಶನ ಸದಾ ಶಾಲೆಯ ಮೇಲೆ ಇರಲಿ ಎಂಬುದು ನಮ್ಮಗಳ ಆಶಯ ಎಂದು ರಾಮಲಿಂಗೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ವಾಣಿ ವಿಲಾಸ ಗ್ರಾಮಾಂತರ ಪ್ರೌಢಶಾಲೆ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎನ್.ಶಿವಕುಮಾರ್ ಮಾತನಾಡಿ, ಶಾಲೆಯ ಸಹ ಶಿಕ್ಷಕರಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಉತ್ತಮ ಸೇವೆ ಸಲ್ಲಿಸಿದ್ದು ಇವರನ್ನು ಶಾಲೆಯಿಂದ ಬೀಳ್ಕೊಡಲು ನೋವಾಗುತ್ತಿದೆ ಎಂದು ತಿಳಿಸಿದರು.

ಇಡೀ ಹಿರಿಯೂರು ತಾಲೂಕಿನಲ್ಲಿ ಶ್ರೀ ವಾಣಿ ಗ್ರಾಮಾಂತರ ಪ್ರೌಢಶಾಲೆಗೆ ಪ್ರತಿ ವರ್ಷ ಉತ್ತಮ ಫಲಿತಾಂಶ ಬರಲು ಮುಖ್ಯಕಾರಣ ಇಂಥಹ ನಿಸ್ವಾರ್ಥ ಶಿಕ್ಷಕರ ಸೇವೆ ಎನ್ನುವುದು ಬಹಳ ಮುಖ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಬಿ.ಟಿ ಮಹೇಶ್ವರಪ್ಪ, ಕೆ.ಜಿ ಹಾಲಸ್ವಾಮಿ, ಹಿರಿಯ ಶಿಕ್ಷಕರಾದ ಕೆ.ಮಂಜುನಾಥ್, ತೀರ್ಥಪ್ಪ, ಎಸ್.ರುದ್ರಪ್ಪ, ವಿಶ್ವನಾಥ್, ವೀಣಾ, ಅತಿಥಿ ಶಿಕ್ಷಕರಾದ ತಿಪ್ಪೇಸ್ವಾಮಿ, ಅನ್ನಪೂರ್ಣ, ಚಂದ್ರಕಲಾ ಮತ್ತಿತರರು ಇದ್ದರು.
ಮಂಜುನಾಥ್ ಸ್ವಾಗಸಿದರು. ಅನ್ನಪೂರ್ಣ ವಂದಿಸಿದರು.

Share This Article
error: Content is protected !!
";