ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕಿನ ಕೆಎಂಇಆರ್ಸಿ ವತಿಯಿಂದ ಗಣಿಭಾದಿತ ಪ್ರದೇಶದಡಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗಾಗಿ ಇದೇ ಮೇ.27 ರಿಂದ 30 ರವರೆಗೆ ಗ್ರಾಮ ಸಭೆ ಆಯೋಜಿಸಲಾಗಿದೆ.
ಮೊದಲನೇ ಆದ್ಯತೆಯಾಗಿ ಹೊಳಲ್ಕೆರೆ ತಾಲ್ಲೂಕಿನ 5 ಕಿ.ಮೀ ವ್ಯಾಪ್ತಿಗೆ ಬರುವ ಗಣಿಭಾದಿತ ಪ್ರದೇಶದ ಗ್ರಾಮ ಪಂಚಾಯಿತಿಗಳ ಹಳ್ಳಿಗಳ ಅರ್ಹ ವಸತಿ, ನಿವೇಶನ ರಹಿತರನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಲ್ಲಿಸಲು ಬಿ.ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣಿಗೇಹಳ್ಳಿಯಲ್ಲಿ ಮೇ.27ರಂದು ಗ್ರಾಮ ಸಭೆ ನಡೆಯಲಿದೆ.
ಬಿ.ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಕಂದವಾಡಿ ಹಾಗೂ ಹಿರೇಕಂದವಾಡಿ ಗೊಲ್ಲರಹಟ್ಟಿಯಲ್ಲಿ ಮೇ.28ರಂದು ಗ್ರಾಮ ಸಭೆ ನಡೆಯಲಿದೆ. ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಮೇ.29ರಂದು ಗ್ರಾಮ ಸಭೆ ನಡೆಯಲಿದೆ.
ಟಿ.ನುಲೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಾಪುರದಲ್ಲಿ ಮೇ.30ರಂದು ಗ್ರಾಮ ಸಭೆ ನಡೆಯಲಿದೆ.
ಈ ಗ್ರಾಮ ಪಂಚಾಯಿತಿಗಳ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಅರ್ಹ ಫಲಾನುಭವಿಗಳು ನಿಗಧಿಪಡಿಸಿದ ಗ್ರಾಮಸಭೆಗಳ ದಿನಾಂಕದಂದು ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.