ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಹಿರಿಯೂರು ತಾಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಬ್ಬಿನಹೊಳೆ ಠಾಣಾ ವ್ಯಾಪ್ತಿಯ ಕಣಜನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಸುನೀತಾ ಲಿಂಗರಾಜ (25) ಮಹಿಳೆಯನ್ನು ಆಕೆಯ ಗಂಡ ಲಿಂಗರಾಜ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಶವಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಮೃತ ದೇಹವನ್ನು ಸುಟ್ಟಿದ್ದಾನೆ.
ಸೋಮವಾರ ರಾತ್ರಿ 8 ಗಂಟೆಯೊಳಗೆ ಘಟನೆ ನಡೆದಿದ್ದು , ಕೃತ್ಯ ನಡೆಸುವ ವೇಳೆ ಆರೋಪಿಗೂ ಸುಟ್ಟ ಗಾಯಗಳಾಗಿದ್ದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತಳ ತಂದೆ ಮಲ್ಲಪ್ಪ ಇವರು ನೀಡಿದ ದೂರಿನ ಮೇರೆಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಸಂ 183/25 ಕಲಂ 103(1),85,238 BNS ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

