ಮಿಡಿಗೇಶಿ ಆಳ್ವಿಕೆಯ ರಾಣಿ ಅಜ್ಜಮ್ಮನ ಇತಿಹಾಸ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಮಕೂರು ಜಿಲ್ಲಾ ಪ್ರಾಂತ್ಯದ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ರಾಜ ಮನೆತನದ ರಾಣಿ ಅಜ್ಜಮ್ಮ ಬಿಜಾವರ ಸೀಮೆಯ ಮಹಾರಾಜರಾದ ಕರಿತಿಮ್ಮ ಚಿಕ್ಕಪ್ಪ ಗೌಡರ ಸೊಸೆ. ಮಿಡಿಗೇಶಿ  ಪ್ರಾಂತ್ಯದಲ್ಲಿ ಆಡಳಿತ ನಡೆಸುತ್ತಿದ್ದ ರಾಜ ತೋಂಟದಪ್ಪ ಅಜ್ಜಮ್ಮನ ಗಂಡ. ರಾಜ ಆಳ್ವವೀಕೆಯಲ್ಲಿ ಇರುವಂತಹ ತೋಂಟದಪ್ಪ ಮರಣ ಹೊಂದಿದ ನಂತರ ಮಿಡಿಗೇಶಿ ಪ್ರದೇಶದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಅಜ್ಜಮ್ಮ  ಬಹಳ ಕಟ್ಟುನಿಟ್ಟಿನಲ್ಲಿ ಆಡಳಿತ ನಡೆಸಿದ್ದಾರೆ.

ಅಜ್ಜಮ್ಮನ ಆಳ್ವಿಕೆಯಲ್ಲಿ ಮಿಡಿಗೇಶಿ ಸುಭಿಕ್ಷವಾಗಿತ್ತು. ತುಮಕೂರು ಸೇರಿದಂತೆ ಸುತ್ತಮುತ್ತಲಿನ ಪ್ರಾಂತ್ಯದಲ್ಲಿಯೇ  ಅತ್ಯಂತ ಶ್ರೀಮಂತ ಪಟ್ಟಣವಾಗಿತ್ತು  ಎಂದು ಇತಿಹಾಸ ಪುಟಗಳು ತಿಳಿಸುತ್ತಿವೆ.

ಶ್ರೀಮಂತ ಮಿಡಿಗೇಶಿ ಪಟ್ಟಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ ರಾಜರುಗಳಾದ ನಂಜರಾಜಯ್ಯ ಹಾಗೂ ದೇವರಾಜಯ್ಯ ಇವರುಗಳು ಮೈಸೂರು ಪ್ರಾಂತ್ಯದ ಒಡೆಯರ್ ಸಂಸ್ಥಾನದ ದಳವಾಯಿಗಳು. ಇವರಿಬ್ಬರ ವಿರುದ್ಧ ರಾಣಿ ಅಜ್ಜಮ್ಮ  ಕೆಚ್ಚೆದೆಯ ಯುದ್ಧ ಮಾಡಿದರು.  ಆ ಯುದ್ದದಲ್ಲಿ ಮೈಸೂರು ಸಂಸ್ಥಾನದ ದಳವಾಯಿಗಳು ಸೋಲನ್ನು ಅನುಭವಿಸಿದ್ದರು.

ಮೈಸೂರಿನ ದಳವಾಯಿಗಳನ್ನು ಸೋಲಿಸಿದ ಅಜ್ಜಮ್ಮನಿಗೆ ಮಹಾರಾಣಿ ಬಿರುದು ಜೊತೆಗೆ ಗೌಡ್ತೀ ಎಂಬ ಹೆಸರು ಬಂತು. ಒಕ್ಕಲಿಗರ ಕುಲತಿಲಕರಾಗಿ ಉತ್ತಮ ಆಡಳಿತ ನಡೆಸುತ್ತಿದ್ದ ಮಹಾರಾಣಿ ಅಜ್ಜಮ್ಮ ಗೌಡ್ತೀ ವಯೋಸಹಜ ಅನಾರೋಗ್ಯದಿಂದ ಮರಣ ಹೊಂದಿದರು. ತದನಂತರ ಅವರ ಮಗ ದೊಡ್ಡ ಕಣ್ಣಯ್ಯ ಮಿಡಿಗೇಶಿ ಪ್ರಾಂತ್ಯದ ಆಡಳಿತ ವಹಿಸಿಕೊಂಡರು. ಮರಾಠ ಲೂಟಿಕೋರರು ಮುರಾಠಿ ಘೋರ್ಪಡೆ ವಿರುದ್ಧದ ಯುದ್ಧದಲ್ಲಿ ದೊಡ್ಡ ಕಣ್ಣಯ್ಯ  ನಿಧನರಾದರು. ಮಿಡಿಗೇಶಿ ಪಟ್ಟಣವನ್ನು ಮರಾಠ ಲೂಟಿಕೋರರು ಕ್ರೂರವಾಗಿ ಹಾನಿಗೊಳಿಸೀ ನಗನಾಣ್ಯಗಳನ್ನು ಲೂಟಿ ಮಾಡಿದರು.

ಮಹಾರಾಣಿ ಅಜ್ಜಮ್ಮ ಗೌಡ್ತಿಯ ಮತ್ತೊಬ್ಬ ಮಗ ಚನ್ನಬಸವಯ್ಯ ಗೌಡರು ಮಿಡಿಗೇಶಿಯನ್ನು ಆಳಲು ಆರಂಭಿಸಿದರು. ಆ ಸಮಯದಲ್ಲಿ ಮೈಸೂರು ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿತ್ತು. 3 ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಟಿಪ್ಪು ಸುಲ್ತಾನ್ ಅನ್ನು ಸೋಲಿಸಿದರು ಮತ್ತು ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ ಹಣವನ್ನು ಕೇಳಿದರು.

ಆ ಸಮಯದಲ್ಲಿ ಟಿಪ್ಪು ಸುಲ್ತಾನ್ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಮಿಡಿಗೇಶಿ ಸಾಮ್ರಾಜ್ಯದಿಂದ ಅವರು ಹೆಚ್ಚು ಹಣವನ್ನು ಪಡೆದರು.‌ಮಧುಗಿರಿ, ಪಾವಗಡ ಮಡಕಸಿರಾ, ಸಿರಾ, ಹಿರಿಯೂರು ಪ್ರಾಂತ್ಯದ ಒಕ್ಕಲಿಗ ಗೌಡರ ಮನೆತನದವರು ಟಿಪ್ಪು ಸುಲ್ತಾನರ ಕಷ್ಟದ ಪರಿಸ್ಥಿತಿ ಅರಿತು ಸಹಾಯ ಹಸ್ತವನ್ನು ಚಾಚಿದ್ದಾರೆ ಎಂಬ ವಿಚಾರವು ಇತಿಹಾಸ ಪುಟಗಳಲ್ಲಿ ದಾಖಲಾಗಿವೆ. 4 ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನ ಮರಣದ ನಂತರ ಎಲ್ಲಾ 80 ಪಾಳೆಪಟ್ಟುಗಳನ್ನು ಮೈಸೂರು ಒಡೆಯರ್ ಆಳ್ವಿಕೆಗೆ ನೀಡಲಾಯಿತು.

ಆ ಸಮಯದಲ್ಲಿ ರಾಜಾ ಚನ್ನಬಸವಯ್ಯ ಹಾಗೂ ಇನ್ನಿತರೆ 80 ಪಾಳೆಪಟ್ಟು ರಾಜರು ದಿವಾನ್ ಪುರಾಣಯ್ಯನವರ  ಬಳಿಗೆ ಹೋಗಿ ತಮ್ಮ ರಾಜ್ಯಗಳನ್ನು ಹಿಂದಿರುಗಿಸಲು ಕೇಳಿದರು ಆದರೆ ಮೈಸೂರು ಸಂಸ್ಥಾನದ ಒಡೆಯರು  ರಾಜ್ಯಾಡಳಿತವನ್ನು ಹಿಂದಿರುಗಿಸುವುದಿಲ್ಲ. ಬದಲಾಗಿ ರಾಜಾಳ್ವಿಕೆಯಲಿದ ರಾಜಮನೆತನದವರಿಗೆ ಪಿಂಚಣಿ ಸೌಲಭ್ಯ ನೀಡಿ ನಿವೃತ್ತಿಗೊಳಿಸಿದರು.

ಮಿಡಿಗೇಶಿ ಪ್ರಾಂತ್ಯದ ಭವ್ಯವಾದ ಒಕ್ಕಲಿಗ ಸಾಮ್ರಾಜ್ಯದ ಅಡಳಿತ ಈ ಹಿನ್ನೆಲೆಯಲ್ಲಿ ಕೊನೆಗೊಂಡಿತು. ಇದು ಕಥೆಯಲ್ಲ ಒಕ್ಕಲಿಗರ ಆಳ್ವಿಕೆಯ ಇತಿಹಾಸ. ಲೇಖನ-ರಘು ಗೌಡ 9916101265.

 

- Advertisement -  - Advertisement -  - Advertisement - 
Share This Article
error: Content is protected !!
";