ಜೇನು ಕೃಷಿಯ ತಾಂತ್ರಿಕ ಕಾರ್ಯಗಾರ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಕೃಷಿ ತರಬೇತಿ ಕೇಂದ್ರ
, ಬಬ್ಬೂರು ಫಾರಂನಲ್ಲಿ ಜಿಲ್ಲೆಯ ರೈತರಿಗೆ ಉಚಿತ ಜೇನು ಕೃಷಿಯ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

- Advertisement - 

ಮೇ-26 ಮತ್ತು 27 ರಂದು ಎರಡು ದಿನಗಳ ಕಾಲದ ತರಬೇತಿ ಕಾರ್ಯಕ್ರಮದಲ್ಲಿ ಜೇನು ಕೃಷಿ ತಜ್ಞರು ಹಾಗೂ ನಿವೃತ್ತ ಸಹಾಯಕ ನಿರ್ದೇಶಕ ಮೇಟಿಕುರ್ಕೆ ಡಾ.ಶಾಂತವೀರಯ್ಯ ಇವರು ಜೇನು ಸಾಕಾಣಿಕೆಯ ಸಮಗ್ರ ಮಾಹಿತಿಯ ಬಗ್ಗೆ ವಿಷಯ ಮಂಡನೆ ಮತ್ತು ಪ್ತಾತ್ಯಕ್ಷಿಕೆ ಮಾಡಲಿದ್ದು,

- Advertisement - 

ಆಸಕ್ತ 40 ಜನ ರೈತಭಾಂದವರು ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದ್ದು ಆಸಕ್ತರು 8277931058 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಲು  ಜಿಲ್ಲಾ ಬಬ್ಬೂರು ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ. ಆರ್  ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮೊದಲು ನೋಂದಾವಣಿ ಮಾಡಿಕೊಂಡ 40 ರೈತಭಾಂದವರು ಫ್ರೂಟ್ಸ್ ಐಡಿ (ಎಫ್.ಐಡಿ) ಅಥವಾ ಆಧಾರ್ ಕಾರ್ಡನೊಂದಿಗೆ ತರಬೇತಿಗೆ ಹಾಜರಾಗಲು ಅವರು ಮನವಿ ಮಾಡಿದ್ದಾರೆ.

- Advertisement - 

 

Share This Article
error: Content is protected !!
";