ಸಾವಯವ ಮತ್ತು ಸಿರಿಧಾನ್ಯಗಳ ತಿಂಡಿ, ಪಾನೀಯ ಬಳಸಲು ಸೂಚನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರವು ಸುಮಾರು 2 ದಶಕಗಳಿಂದ ಸಾವಯವ ಕೃಷಿಯನ್ನು ಉತ್ತಮ ಪರ್ಯಾಯ ಪದ್ದತಿಯಾಗಿ ಉತ್ತೇಜಿಸಲು ಪ್ರಾರಂಭಿಸಿದೆ. ಸ್ವಾವಲಂಬನೆ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಲು 2004 ರಲ್ಲಿ ಪ್ರತ್ಯೇಕ ಸಾವಯವ ಕೃಷಿ ನೀತಿಯನ್ನು ಹೊರತರಲಾಗಿರುತ್ತದೆ.

- Advertisement - 

ನೀತಿಯಡಿಯಲ್ಲಿ ರಾಜ್ಯಾದ್ಯಂತ ವಿವಿಧ ಸಾವಯವ ಕೃಷಿ ಉತ್ತೇಜನಾ ಕಾರ್ಯಕ್ರಮಗಳಾದ ಸಾವಯವ ಗ್ರಾಮ, ಪ್ರಮಾಣೀಕರಣ, ಸಂಸ್ಮರಣೆ ಮುಂತಾದ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ.

- Advertisement - 

ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ 2017ರಲ್ಲಿ ಪರಿಷ್ಕø ಸಾವಯವ ನೀತಿಯನ್ನು ಹೊರತರಲಾಗಿದ್ದು, ಅಂದಿನಿಂದ, ರಾಜ್ಯ ಸರ್ಕಾರವು ಸಾಂಪ್ರದಾಯಿಕ ಮತ್ತು ಸಾವಯವ ಸಿರಿಧಾನ್ಯಗಳನ್ನು ಪ್ರಜ್ಞಾವಂತ ಆಹಾರವನ್ನಾಗಿ ಉತ್ತೇಜಿಸಲಾಗುತ್ತಿದೆ.

ರೈತ ಸಿರಿ ಯೋಜನೆಯಡಿ ಬೆಳೆ ಸಮೀಕ್ಷೆ ಆಧರಿಸಿ ಸಿರಿಧಾನ್ಯ ಬೆಳೆದ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ. 10,000 /- ದಂತೆ ಗರಿಷ್ಟ 2.00 ಹೆಕ್ಟೇರ್ ವರೆಗೆ ಪೆÇ್ರೀತ್ಸಾಹಧನ ನೀಡಲಾಗುತ್ತಿದೆ. ಸಿರಿಧಾನ್ಮಗಳ ಸಂಸ್ಮರಣೆಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಯಂತ್ರೋಪಕರಣಗಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ.

- Advertisement - 

ರೈತರು ಉತ್ಪಾದಿಸಿದಂತಹ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಂಪರ್ಕವನ್ನು ಕಲ್ಪಿಸಲು ಮತ್ತು ರೈತರು, ಖರೀದಿದಾರರು, ಮಾರಾಟಗಾರರು, ರಫ್ತುದಾರರಿಗೆ ವಿಪುಲ ಅವಕಾಶಗಳನ್ನು ಒದಗಿಸಲು ಸಾವಯವ ಮತ್ತು ಸಿರಿಧಾನ್ಯ ರಾಷ್ಟ್ರೀಯ / ಅಂತರರಾಷ್ಟ್ರೀಯ ವಾಣಿಜ್ಯ ಮೇಳಗಳನ್ನು ಆಯೋಜಿಸಲಾಗಿರುತ್ತದೆ.

ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರಿಗೆ, ಮಾರುಕಟ್ಟೆದಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ಸಾವಯವ ಮತ್ತು ಸಿರಿಧಾನ್ಯ ಹಬ್ ಅನ್ನು ಹೆಬ್ಬಾಳ, ಬೆಂಗಳೂರು ಇಲ್ಲಿ ಸ್ಥಾಪಿಸಲಾಗುತ್ತಿದೆ. ರಾಜ್ಯದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಬಳಕೆಗೆ ಒತ್ತು ನೀಡುವ ಅವಶ್ಯಕತೆ ಇರುತ್ತದೆ.

ಸಾವಯವ ಮತ್ತು ಸಿರಿಧಾನ್ಯಗಳಿಗೆ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಸೃಷ್ಟಿಸಲು ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರದ ಬಗ್ಗೆ ಅರಿವು ಮೂಡಿಸಿ ಒದಗಿಸುವ ಸಲುವಾಗಿ ಎಲ್ಲಾ ಕಚೇರಿಗಳ ತಾವು ಹಮ್ಮಿಕೊಳ್ಳುವ ಸಭೆಯ ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಗಳಿಂದ ತಯಾರಿಸಲಾದ ಮಿಲೆಟ್ ಮಸಾಲ ಕ್ರಂಚಿಸ್, ಮಿಲೆಟ್ ಕುಕೀಸ್, ಮಿಲೆಟ್ ಕ್ರಂಚ್ ಬಾರ್, ಸೀಡ್ ಕ್ಲಸ್ಟರ್ಸ್, ರಾಗಿ ಬೆಲ್ಲದ ಬಿಸ್ಕೆಟ್ಸ್, ಮಿಲೆಟ್ ಪಪ್, ಕ್ರಂಚಿ ಮಿಲೆಟ್ ಮುಸೇಲಿ, ಸ್ಪೋರ್ಟೆಡ್ ಮಿಲೆಟ್ ಬಿಸ್ಕೆಟ್ಸ್, ಬೂಂದಿ ಬ್ಲಾಸ್ಟ್, ಜೋಳ ಪಪ್ಸ್, ಎನರ್ಜಿ ಬಾರ್, ರಿಬ್ಬನ್ ಪಕೋಡ, ಕೋಡುಬಲೆ ಮತ್ತು ಮುರುಕು ಬಳಸಬಹುದಾದ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸುಗಳ ಬಳಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Share This Article
error: Content is protected !!
";