ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ನೀಡಲಾಗುವ ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇಂದ್ರ ವಲಯದ ವಿದ್ಯಾರ್ಥಿವೇತನ ಯೋಜನೆಯಡಿ ಪ್ರತಿ ವರ್ಷದಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು ಶೇಕಡ 80% ಗಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪಿಯುಸಿ ಪರೀಕ್ಷೆಯಲ್ಲಿ ಶೇಕಡ 80% ಗಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಕಡ್ಡಾಯವಾಗಿ ಯಾವುದೇ ಪದವಿ / ಉನ್ನತ ಶಿಕ್ಷಣದಲ್ಲಿ ಮುಂದುವರೆಸಲು ಇಚ್ಛಿಸುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ ವೆಬ್‍ಸೈಟ್ https://scholarships.gov.in/Students  ನ ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡು ಒಟಿಆರ್ ನಂಬರ್ ಪಡೆದುಕೊಂಡ ನಂತರ ಆನ್‍ಲೈನ್ ನಲ್ಲಿ  2025-26ನೇ ಸಾಲಿನ ಹೊಸ ಬ್ಯಾಚ್ ಹಾಗೂ ಎಲ್ಲಾ ಹಂತದ ನವೀಕರಣ ಅರ್ಜಿಗಳನ್ನು ಸಲ್ಲಿಸಲು 2025 ರ ಅಕ್ಟೋಬರ್ 31 ರವರೆಗೆ ದಿನಾಂಕ ನಿಗಧಿಪಡಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

- Advertisement - 

ಆಸಕ್ತ ವಿದ್ಯಾರ್ಥಿಗಳು https://scholarships.gov.in/public/schemeGuidelines/CSSS_ GUIDLINES_07022024_updated.pdf  ಈ ಜಾಲತಾಣದಲ್ಲಿ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕೂಲಂಕುಶವಾಗಿ ಓದಿ ಅರ್ಜಿ ಸಲ್ಲಿಸುವುದು ಹಾಗೂ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ನೋಂದಣಿ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಕೊಳ್ಳತಕ್ಕದ್ದು.

ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಎಲ್ಲಾ ದಾಖಲೆಗಳನ್ನು ಎಲ್1 ಪರಿಶೀಲನೆಗಾಗಿ ತಾವು ಅಧ್ಯಯನ ಮಾಡುತ್ತಿರುವ ಪದವಿ ಕಾಲೇಜುಗಳಲ್ಲಿ ನೇಮಕವಾಗಿರುವ ಸಂಸ್ಥೆಯ ನೋಡಲ್ ಆಫೀಸರ್ ಗಳಿಗೆ ನಿಗಧಿತ ದಿನಾಂಕದೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು. ನಂತರ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳನ್ನು ಆಯಾ ಕಾಲೇಜುಗಳ ಸಂಸ್ಥೆಯ ನೋಡಲ್ ಆಫೀಸರ್‍ಗಳು ಕೂಲಂಕುಷವಾಗಿ ಪರಿಶೀಲಿಸಿ,

- Advertisement - 

ಸದರಿ ವಿದ್ಯಾರ್ಥಿಯು ತಮ್ಮ ಕಾಲೇಜಿನಲ್ಲಿ ದಾಖಲಾಗಿ ವಿದ್ಯಾಭ್ಯಾಸ ಮುಂದುವರೆಸಿರುವ ಬಗ್ಗೆ, ಹಾಗೂ ವಿದ್ಯಾರ್ಥಿಯು ಸಲ್ಲಿಸಿರುವ ವಿವರಗಳನ್ನು ಖಚಿತಪಡಿಸಿಕೊಂಡು https://scholarships.gov.in/Institute   ಆನ್‍ಲೈನ್ ಮೂಲಕವೇ ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಪರಿಶೀಲಿಸುವುದು.
ರಾಜ್ಯದ ಎಲ್ಲಾ ಪದವಿ ಕಾಲೇಜುಗಳು ತಮ್ಮ ಹಂತದಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸತಕ್ಕದ್ದು.

ಕಾಲಕಾಲಕ್ಕೆ ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಸುತ್ತೋಲೆಗಳನ್ನು ನಿಗಧಿತ ದಿನಾಂಕದೊಳಗೆ ಹೊಸ ಬ್ಯಾಚ್ ಹಾಗೂ ಎಲ್ಲಾ ಹಂತದ ನವೀಕರಣ ಅರ್ಜಿಗಳನ್ನು ತಪ್ಪದೇ ಎಲ್1 ಹಂತದಲ್ಲಿ ಪರಿಶೀಲಿಸಿ, ತಮ್ಮ ಲಾಗಿನ್ ನಲ್ಲಿ ಯಾವುದೇ ಅರ್ಜಿಗಳು ಪರಿಶೀಲನೆಯಾಗದೇ ಬಾಕಿ ಉಳಿಯದಂತೆ ನಿಗಾ ವಹಿಸಬೇಕು ಹಾಗೂ ರಾಜ್ಯ ನೋಡಲ್ ಅಧಿಕಾರಿ ಯವರಿಂದ ವಿದ್ಯಾರ್ಥಿವೇತನದ ಸಲುವಾಗಿ ಬರುವ ಕರೆಗಳು / ಮೇಲ್ ಗಳು / ಸುತ್ತೋಲೆಗಳು / ಮಾರ್ಗದರ್ಶನಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಅರ್ಹ ವಿದ್ಯಾರ್ಥಿಗಳಿಗಾಗಿ ಸಹಕರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಇಮೇಲ್ : mhrdscholarship302@gmail.com ಗೆ ಸಂಪರ್ಕಿಸಬಹುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";