ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಒಕ್ಕಲಿಗ ಸಂಘದ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಅಧ್ಯಕ್ಷರಾಗಿ ಜೆ ರಾಜು ಬೇತೂರು ಪಾಳ್ಯ ಇವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾದ ಬಿ.ಕೆಂಚಪ್ಪ ಗೌಡ ತಿಳಿಸಿದ್ದಾರೆ.
ತಮ್ಮ ಅಧಿಕಾರ ಅವಧಿಯಲ್ಲಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸೇರಿದಂತೆ ಸಂಘದ ಸರ್ವತೋಮು ಅಭಿವೃದ್ಧಿಗೆ ಶ್ರಮಿಸುವಂತೆ ಅವರು ಜೆ.ರಾಜು ಅವರಿಗೆ ಕಿವಿ ಮಾತು ಹೇಳಿದ್ದಾರೆ.
ಹ್ಯಾಟ್ರಿಕ್ ಅಧ್ಯಕ್ಷ-
ಚಿತ್ರದುರ್ಗ, ದಾವಣಗೆರೆ ಹಾಗೂ ಉತ್ತರ ಕರ್ನಾಟಕಗಳ ವಿವಿಧ ಜಿಲ್ಲೆಗಳಿಂದ ರಾಜ್ಯ ಒಕ್ಕಲಿಗ ಸಂಘಕ್ಕೆ ನಿರ್ದೇಶಕರಾಗಿ ಕಳೆದ ಮೂರು ವರ್ಷಗಳಿಂದೆ ಐದು ವರ್ಷದ ಅವಧಿಗೆ ಆಯ್ಕೆಯಾದ ಜೆ ರಾಜು ಬೇತೂರು ಪಾಳ್ಯ ಇವರು ಹ್ಯಾಟ್ರಿಕ್ (ಮೂರು ಬಾರಿ) ರಾಜ್ಯ ಒಕ್ಕಲಿಗ ಸಂಘದ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಜೆ ರಾಜು ಬೇತೂರು ಪಾಳ್ಯ ಇವರ ಆಯ್ಕೆ ರಾಜ್ಯ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸಂದ ಗೌರವ ಆಗಿದೆ. ಪ್ರಸ್ತುತ ರಾಜು ಅವರು ಬಿಬಿಎಂಪಿ ಪೂರ್ವ ವಲಯದ ಡೆಪ್ಯೂಟಿ ಕಮಿಷನರ್ ಆಗಿ ಕರ್ವತ್ಯ ನಿರ್ವಹಿಸುತ್ತಿದ್ದಾರೆ.
ಇವರ ಆಯ್ಕೆ ಚಿತ್ರದುರ್ಗ, ದಾವಣಗೆರೆ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಒಕ್ಕಲಿಗ ಸಂಘದ ಸದಸ್ಯರು ಮತ್ತು ಅಭಿಮಾನಿ ಹಿತೈಷಿಗಳು, ಜೆ.ರಾಜು ಅಭಿಮಾನಿಗಳ ಬಳಗ ಚಿತ್ರದುರ್ಗ ಇವರುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.