ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದ ದಿವಂಗತ ಸಣ್ಣ ಚೌಡಪ್ಪ ನವರ ಪತ್ನಿ ಚೌಡಮ್ಮ(96) ಮಂಗಳವಾರ ಸಂಜೆ ನಿಧನ ಹೊಂದಿದ್ದಾರೆ.
ಮೃತ ಚೌಡಮ್ಮ ಇವರು ಕಕ್ಕರಗೊಳ್ಳ ನ್ಯಾಯಬೆಲೆ ಅಂಗಡಿ ಮಾಲೀಕರಾದ ಜಯಣ್ಣ ಇವರನ್ನು ಸೇರಿದಂತೆ ಒಂಬತ್ತು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳು, ಅಳಿಯಂದರು, ಸೊಸೆಯದಿರು ಮತ್ತು ಅಪಾರ ಬಂದು ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಕಕ್ಕರಗೊಳ್ಳ ಗ್ರಾಮದ ಸಮೀಪ ಇರುವ ಕೋಡಿಹಳ್ಳಿ ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಜಯಣ್ಣ ತಿಳಿಸಿದ್ದಾರೆ.

