ಕಾಂಗ್ರೆಸ್ ಸರ್ಕಾರದಿಂದ ಕನ್ನಡದ ಕಗ್ಗೊಲೆ !

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಕನ್ನಡದ ಕಗ್ಗೊಲೆ ! ಆಗಿದೆ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಎಡವಟ್ಟು ಕಾಂಗ್ರೆಸ್ ” ಸರ್ಕಾರ ಕನ್ನಡದ ವಿಚಾರದಲ್ಲಿ ಮತ್ತೆ ಎಡವಟ್ಟುಗಳನ್ನು ಮುಂದುವರಿಸಿದೆ.

GBA ಹೊರಡಿಸಿರುವ ಅಧಿಸೂಚನೆಯಲ್ಲಿ 5 ಪಾಲಿಕೆಗಳ ವಾರ್ಡ್‌ಗಳ ಹೆಸರು ಹಾಗೂ ಪ್ರದೇಶಗಳ ವಿವರಣೆಯಲ್ಲಿ ಕನ್ನಡದ ಕಗ್ಗೊಲೆಯಾಗಿದೆ.

- Advertisement - 

ರಾಜ್ಯದ ಆಡಳಿತ ಭಾಷೆ ಕನ್ನಡಕ್ಕೆ ಕೊಡುತ್ತಿರುವ ಗೌರವ ಇದೇನಾ  ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಎಂದು ಜೆಡಿಎಸ್ ಪ್ರಶ್ನಿಸಿದೆ. 

ಹಿಂದೆ ಕೆಪಿಎಸ್‌ಸಿ ನಡೆಸಿದ್ದ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯ ಭಾಷಾಂತರ ವೇಳೆಯೂ ಹತ್ತಾರು ತಪ್ಪುಗಳು ಆಗಿತ್ತು. ಆದರೂ ಕಾಂಗ್ರೆಸ್ ಸರ್ಕಾರ ಇನ್ನೂ ಬುದ್ಧಿ ಕಲಿತಿಲ್ಲ. 

- Advertisement - 

ಸರ್ಕಾರ  ಪ್ರಕಟಿಸಿರುವ  ಹೊಸ ವಾರ್ಡ್‌ಗಳ ಅಧಿಸೂಚನೆಯನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತರ್ಜುಮೆ ಮಾಡುವ ವೇಳೆ ತಪ್ಪು ತಪ್ಪಾಗಿ ಕನ್ನಡ ಪದಗಳನ್ನು ಬಳಸಿರುವುದು ಅಕ್ಷಮ್ಯ. 

ಈ ರೀತಿ ಕನ್ನಡಕ್ಕೆ ಅಪಮಾನ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಜೆಡಿಎಸ್ ಪಕ್ಷವು ಆಗ್ರಹಿಸುತ್ತದೆ.

 

 

Share This Article
error: Content is protected !!
";