ಚಂದ್ರವಳ್ಳಿ ನ್ಯೂಸ್ ಹಿರಿಯೂರು :
ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮವಾಗಿ ನಿವೇಶನ ಪಡೆದು ಮಾರಾಟ ಮಾಡಿರುತ್ತೇನೆ ಎಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ, ಅವರ ಮೇಲೆ ಕಾನೂನು ಹೋರಾಟ ಮಾಡುವುದಾಗಿ ಹೊಸ ಯಳನಾಡು ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹಮೂರ್ತಿ ಎಚ್ಚರಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಹೊಸ ಯಳನಾಡು ಗ್ರಾಮ ಪಂಚಾಯ್ತಿಯ ಸ.ನo.66 ರಲ್ಲಿ ನನ್ನ ತಾಯಿ ಮತ್ತು ಪತ್ನಿಯ ಹೆಸರಿನಲ್ಲಿ ನಿವೇಶನ ಪಡೆದು ಮಾರಾಟ ಮಾಡಿದ್ದೇನೆ ಎಂದು ಕರ್ನಾಟಕ ರೈತ ಕಾರ್ಮಿಕ ಯುವ ಒಕ್ಕೂಟದ ವತಿಯಿಂದ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದು ಅವರು ಮಾಡಿರುವ ಆರೋಪಗಳೆಲ್ಲವೂ ನಿರಾಧಾರವಾಗಿವೆ. ನನ್ನ ಮೇಲೆ ಉದ್ದೇಶ ಪೂರ್ವಕವಾಗಿ ಇಲ್ಲಸಲ್ಲದ ಆರೋಪಗಳನ್ನು ಸಂಘಟನೆಯವರು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ನಾನು ಗ್ರಾಮ ಪಂಚಾಯ್ತಿಯ ಯಾವುದೇ ಆಕ್ಟ್ ಗಳನ್ನು ಉಲ್ಲಂಘಿಸಿಲ್ಲ ಹಾಗೂ ಪಂಚಾಯ್ತಿಯ ಅಧಿಕಾರಿಗಳೊಂದಿಗೆ ಶಾಮೀಲಾಗಿಲ್ಲ. ಇದು ನನ್ನ ತೇಜೋವಧೆ ಮಾಡಿವ ಉದ್ದೇಶದಿಂದ ಸುಳ್ಳು ಆರೋಪ ಮಾಡಲಾಗಿದ್ದು ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಗ್ರಾಮ ಎಂದು ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹಮೂರ್ತಿ ಎಚ್ಚರಿಸಿದ್ದಾರೆ.