ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ ಹೈಕಮಾಂಡ್ ಸ್ಪಷ್ಟವಾಗಿ ಹೇಳಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ಹೈಕಮಾಂಡ್​ ನಾಯಕರೇ ಗೊಂದಲವನ್ನುಂಟು ಮಾಡಿದ್ದು
ಅವರೇ​ ಗೊಂದಲ ನಿವಾರಿಸಲಿ ಸಹಕಾರ ಸಚಿವ ಕೆಎನ್​ ರಾಜಣ್ಣ ಆಗ್ರಹ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ ಪ್ರಸ್ತಾಪಗೊಂಡಾಗ ಲೋಕಸಭಾ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದಾಗಿ ಹೈಕಮಾಂಡ್​ ತಿಳಿಸಿತ್ತು.

ಲೋಕಸಭಾ ಚುನಾವಣೆ ನಡೆದು 6 ತಿಂಗಳು ಕಳೆದಿದೆ. ಮುಂಬರುವ ವಿಧಾನಸಭಾ ಚುನಾವಣೆವರೆಗೂ ಡಿಕೆ ಶಿವಕುಮಾರ್​ ಅವರೇ, ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಮುಂದುವರೆಯಲಿ. ಆದರೆ, ಈ ಬಗ್ಗೆ ಸ್ಪಷ್ಟವಾಗಿ ಹೈ ಕಮಾಂಡ್​ ತಿಳಿಸಬೇಕು ಎಂದು ರಾಜಣ್ಣ ಮನವಿ ಮಾಡಿದರು.

ಒಂದು ವೇಳೆ ಹೈ ಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲು ಮುಂದಾದರೆ ಜಾರಕಿಹೊಳಿ ಅವರು ನಮ್ಮ ಪಕ್ಷದ ಹಿರಿಯ ಪ್ರಭಾವಿ ನಾಯಕರು. ಅವರು ಹೇಳಿದ್ದರಲ್ಲಿ ತಪ್ಪು ಹುಡುಕಬಾರದು. ಸತೀಶ್​ ಜಾರಕಿಹೊಳಿ ಅಧ್ಯಕ್ಷರಾದರೆ, ಸಂತೋಷ ಪಡುವವರಲ್ಲಿ ನಾನು ಮೊದಲಿಗ. ಅವರು ಜನಪರ ಕೆಲಸ ಮಾಡಿದ್ದಾರೆ.

ಎಲ್ಲರಿಗೂ ಸಿಗುತ್ತಾರೆ. ಎಲ್ಲರಿಗೂ ಗೌರವ ಕೊಡ್ತಾರೆ. ಅವರು ಅಧ್ಯಕ್ಷ ಆದರೆ ನಾನು ಸ್ವಾಗತ ಮಾಡುತ್ತೇನೆ ಎಂದು ರಾಜಣ್ಣ ತಿಳಿಸಿದರು.

 

- Advertisement -  - Advertisement -  - Advertisement - 
Share This Article
error: Content is protected !!
";