ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಳೆ ಮಾಧ್ಯಮಿ ಶಾಲಾ ಆವರಣದಲ್ಲಿದ್ದ ಹಳೆಯ ಮದಕರಿ ವ್ಯಾಯಾಮ ಶಾಲೆಯನ್ನು ಕೆಡವಿ ಆ ಸ್ಥಳದಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಹೊರಟಿರುವುದನ್ನು ವಿರೋಧಿಸಿ ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪುಟು ಎನ್.ಡಿ.ಕುಮಾರ್ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
೧೯೪೨ ರಿಂದ ಇಲ್ಲಿದ್ದ ವ್ಯಾಯಾಮ ಶಾಲೆ ಕಟ್ಟಡಕ್ಕೆ ತನ್ನದೆ ಆದ ಖಾತೆ ಮತ್ತು ವಿದ್ಯುತ್ ಸಂಪರ್ಕವಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯಾಯಾಮ ಶಾಲೆಯನ್ನು ಕೆಡವಿದಾಗ ತಡೆಯಾಜ್ಞೆ ತಂದಿದ್ದೇವೆ.
ಶಾಸಕರ ನೇತೃತ್ವದಲ್ಲಿ ವ್ಯಾಯಾಮ ಶಾಲೆಯನ್ನು ಪುನರಾರಂಭಿಸಲು ಮುಂದಾಗಿದ್ದು, ಇದರ ನಡುವೆ ಸಿಡಿಪಿಓ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡ ಕಟ್ಟಲು ಹೊರಟಿರುವುದಕ್ಕೆ ಅವಕಾಶ ನೀಡಬಾರದೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು. ರಾಷ್ಟ್ರಮಟ್ಟದ ಬಾಡಿ ಬಿಲ್ಡರ್‌ಗಳಾದ ಅಣ್ಣಪ್ಪ, ದಿಲೀಪ್, ರುದ್ರೇಶ್, ಸೈಯದ್ ಮೊಹಿದ್ದೀನ್, ಬಸವರಾಜ್, ಗುರುರಾಜ್, ಸೈಫುಲ್ಲಾ, ವಾಸೀಂ, ನಾಗರಾಜ್, ಸಮೀವುಲ್ಲಾ ಹಾಗೂ ಜಿತೇಂದ್ರ ಇವರುಗಳು ಪತ್ರಿಭಟನೆಯಲ್ಲಿ ಪಾಲ್ಗೊಂಡಿದ್ದರು.