ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ೪೪ನೇ ಪ್ರಾಂತ ಸಮ್ಮೇಳನ ೨೦೨೫ನೇ ಜನವರಿ ೩೧ ಫೆಬ್ರವರಿ ೧, ೨ ರಂದು ಶಿವಮೊಗ್ಗದಲ್ಲಿ ಜರುಗಲಿದ್ದು, ಇದರ ಪೋಸ್ಟರ್‌ನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಚಿತ್ರದುರ್ಗವತಿಯಿಂದ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಮಠದ ಆವರಣದಲ್ಲಿ ಬಿಡುಗಡೆ ಮಾಡಿದರು.
ಕಳೆದ ಭಾರಿ ೪೩ನೇ ಪ್ರಾಂತ ಸಮ್ಮೇಳನ ನವದೆಹಲಿಯಲ್ಲಿ ನಡೆದಿತ್ತು. ೨೦೧೬ ರಲ್ಲಿ ನಡೆದ ೩೫ನೇ ರಾಜ್ಯ ಸಮ್ಮೇಳನದ ಉದ್ಘಾಟನೆಯನ್ನು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ನೆರವೇರಿಸಿದ್ದರು.
೪೪ನೇ ಪ್ರಾಂತ ಸಮ್ಮೇಳನ ಶಿವಮೊಗ್ಗದಲ್ಲಿ ನಡೆಯಲಿರುವ ಪೋಸ್ಟರ್‌ನ್ನು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಬಿಡುಗಡೆ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶೀರ್ವಾದಿಸಿದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ನಗರದ ವಿವಿಧ ಕಾಲೇಜಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕ ಡಾ.ಸ.ರಾ. ಲೇಪಾಕ್ಷ, ಎಬಿವಿಪಿಯ ವಿಭಾಗ ಸಹ ಸಂಚಾಲರು ಗೋಪಿ, ಚಿತ್ರದುರ್ಗ ಜಿಲ್ಲಾ ಸಂಚಾಲಕ ಕನಕರಾಜ್ ಕೋಡಿಹಳ್ಳಿ, ನಗರ ಸಹ ಕಾರ್ಯದರ್ಶಿ ಸಂಜಯ್, ಕಾರ್ಯಕರ್ತರಾದ ತಿಪ್ಪೇಶ್, ಚರಣ್, ವಿಕಾಸ್, ಮಧು, ಮನೋಜ್, ಜೀವನ್ ಭಾಗವಹಿಸಿದ್ದರು.