ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಳವಂಗಲ ಹೋಬಳಿ ಕೆಸ್ತೂರು ಗ್ರಾಮಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹುಸ್ಕೂರು ಬಿ. ಮಂಜುನಾಥ್ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಕೆಸ್ತೂರು ರಮೇಶ್ ರವರ ರಾಜೀನಾಮೆಯಿಂದ ತೆರವಾದ ಗ್ರಾಮಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಫೆ. 10ರಂದು ಚುನಾವಣೆ ನಡೆಸಲಾಯ್ತು. ಅಧ್ಯಕ್ಷ ಸ್ಥಾನಕ್ಕೆ ಹುಸ್ಕೂರ್ ಮಂಜುನಾಥ್ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಮಂಜುನಾಥ್ ರವರು ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುನಾಥ್ ಕೆಸ್ತೂರು ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ ಸೌಲಭ್ಯ ಸೇರಿದಂತೆ ಸ್ವಚ್ಛತೆ ಕಾಪಾಡುವುದರ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು.
ಮುಖ್ಯವಾಗಿ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಹೈಮಾಸ್ಕ್ ದೀಪಗಳನ್ನು ಇನ್ನೂ ಕೆಲವೇ ದಿನಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಮಂಜುನಾಥ್ ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋದವಾಗಿ ಆಯ್ಕೆ ಮಾಡಲು ಸಹಕರಿಸಿದ ಶಾಸಕರಾದ ಧೀರಜ್ ಮುನಿರಾಜು, ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ಹುಸ್ಕೂರ್ ಆನಂದ್, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಬಿ. ಮುನೇಗೌಡ ಹಾಗೂ ಪಂಚಾಯ್ತಿಯ ಎಲ್ಲಾ ಗೌರವಾನ್ವಿತ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಪಕ್ಷತೀತವಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯ್ತಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಮಂಜುನಾಥ್ ಹೇಳಿದರು. ಈ ಸಂದರ್ಭದಲ್ಲಿ ಹುಸ್ಕೂರ್ ಆನಂದ್, ಉಪಾಧ್ಯಕ್ಷರಾದ ಅಂಜಿನಮ್ಮ, ಸದಸ್ಯರಾದ ಮುರುಳಿ, ಗಾಯತ್ರಿ, ಅಶ್ವಥ್ ನಾರಾಯಣ್, ಮುನಿರಾಜು, ರಾಜಮ್ಮ, ಕೃಷ್ಣಪ್ಪ, ಶೃತಿ, ಲಕ್ಷ್ಮಮ್ಮ, ಮದುಮಾಲತಿ, ರಾಜಣ್ಣ, ವಿಜಯ್ ಕುಮಾರ್, ಯಾಸ್ಮಿನ್ ತಾಜ್, ಪಂಕಜ, ಶ್ರವಣೂರು ರಾಜಮ್ಮ, ಮುಖಂಡರಾದ ಪುಟ್ಟ ಬಸವರಾಜು, ವಿಜಯ್ ಕುಮಾರ್, ಕುಮಾರ್, ಲಕ್ಷ್ಮಿ ನಾರಾಯಣ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದು ನೂತನ ಅಧ್ಯಕ್ಷ ಹುಸ್ಕೂರ್ ಮಂಜುನಾಥ್ ರವರಿಗೆ ಅಭಿನಂದನೆ ಸಲ್ಲಿಸಿದರು.