ನುಡಿದಂತೆ ನಡೆದ ಸಚಿವರು!

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದಿದ್ದ ಸಚಿವರು ಲಕ್ಕವ್ವನಹಳ್ಳಿ ರಸ್ತೆಯನ್ನು ಗಮನಿಸಿ, ನಾನು ಈ ಸಲ ಚುನಾವಣೆಯಲ್ಲಿ ಗೆದ್ದಾಗ  ರಸ್ತೆ ಅಭಿವೃದ್ದಿ ಪಡಿಸುವುದಾಗಿ ಮಾತು ಕೊಟ್ಟಿದ್ದರು.

ಅದರಂತೆ ಸದರಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದು ಮಾತ್ರವಲ್ಲದೆ, ಇದನ್ನು ನಗರ ವ್ಯಾಪ್ತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯವರೆಗೂ ಮುಂದುವರೆಸಿದ್ದಾರೆಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಸುಂದರ್ ಹರ್ಷ ವ್ಯಕ್ತ ಪಡಿಸಿದ್ದಾರೆ.

- Advertisement - 

ಸಚಿವರ ಕಾರ್ಯವೈಖರಿ ಬಗ್ಗೆ ಪತ್ರಿಕೆಯವರೊಂದಿಗೆ ಮಾತನಾಡುತ್ತಾ ಅಭಿವೃದ್ಧಿಯ ಹರಿಕಾರ ಸಚಿವರು ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದಾರೆ.  

ನಮ್ಮ ಹೆಮ್ಮೆಯ ನಾಯಕರು ಇದೇ ರೀತಿ ಅಭಿವೃದ್ಧಿ ಕಾರ್ಯ ಮುಂದುವರಿಸಲು ಸದಾ ನಾವು ಅವರೊಂದಿಗೆ ಕೈಜೋಡಿಸುತ್ತೇವೆ. ದೇವರು ಇಂತಹ ಅಬಿವೃದ್ಧಿ ಕಾರ್ಯ ಮಾಡಲು ಅವರಿಗೆ ಹೆಚ್ಚಿನ ಅನುಗ್ರಹ ನೀಡಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್,

- Advertisement - 

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಕೆಡಿಪಿ ಸದಸ್ಯರಾದ ಶಿವಕುಮಾರ್, ನಗರಸಭೆ ನಾಮನಿರ್ದೇಶಿತ ಸದಸ್ಯ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜ್ಞಾನೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾಗೇಂದ್ರ ನಾಯ್ಕ, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ಕೂನಿಕೆರೆ ಗ್ರಾಮ ಪಂಚಾಯಿತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮರಾಜು, ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
error: Content is protected !!
";