ಮುಪ್ಪಾನೆ ಲಾಂಚ್ ಸ್ಥಗಿತ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಸಾಗರ ತಾಲ್ಲೂಕು ಕರೂರು ಹೋಬಳಿಯಿಂದ ಕಾರ್ಗಲ್‌ ಹಾಗೂ ಜೋಗಕ್ಕೆ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನಲ್ಲಿ ಓಡಾಡುವ ಮುಪ್ಪಾನೆ ಲಾಂಚ್‌ ಸ್ಥಗಿತಗೊಂಡಿದೆ.

ಹಲ್ಕೆ-ಮುಪ್ಪಾನೆ ಲಾಂಚ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಲಾಂಚ್‌ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಹಿನ್ನೀರು ಹೆಚ್ಚಿದ್ದು ಲಾಂಚ್‌ ನಿಲ್ಲಿಸಲು ಸೂಕ್ತ ಪ್ಲಾಟ್‌ ಫಾರಮ್‌ ಸಿಗುತ್ತಿಲ್ಲ. ಮಣ್ಣಿನ ದಿಬ್ಬದ ಮೇಲೆ ಲಾಂಚ್‌ ನಿಲ್ಲಿಸುವ ವೇಳೆ ಲಾಂಚ್‌ನ ಮೋಟಾರ್‌ನ ಪ್ಯಾನ್‌ಗೆ ಮರದ ದಿಮ್ಮಿಗಳು ತಗುಲಿ ಸಮಸ್ಯೆಯಾಗಿದೆ ಎನ್ನಲಾಗಿದೆ.

ಲಾಂಚ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಅಧಿಕಾರಿಗಳು ಪರಿಹಾರ ಹುಡುಕುತ್ತಿದ್ದು, ಸದ್ಯಕ್ಕಂತೂ ಸಂಚಾರ ಸ್ಥಗಿತಗೊಂಡಿದೆ. ಲಾಂಚ್‌ನ ಮೋಟಾರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಯಂತ್ರವನ್ನು ಸಾಗರಕ್ಕೆ ಕಳುಹಿಸಿಕೊಡಲಾಗಿದ್ದು, ಶೀಘ್ರದಲ್ಲಿಯೇ ರಿಪೇರಿಯಾಗುವ ಸಾಧ್ಯತೆ ಇದೆ.

Share This Article
error: Content is protected !!
";