Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಮಿಥ್ಯ'ಗೆ 3, 'ಇಂಬು'ಗೆ 1 ಗೌರವ - ಸ್ಯಾಂಡಲ್​ವುಡ್ ಸಾಧಕರಿಗೆ ರಾಷ್ಟ್ರಪತಿಗಳಿಂದ ಪುರಸ್ಕಾರ

ಚಂದ್ರವಳ್ಳಿ ನ್ಯೂಸ್ ಏಕ್ತಾ ನಗರ (ಗುಜರಾತ್): ಪ್ರತಿಷ್ಠಿತ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಗುಜರಾತ್‌ನ ಏಕ್ತಾ ನಗರದಲ್ಲಿ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 92 ಮಂದಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದು, ಕನ್ನಡ ಹಾಗೂ ತುಳು ಚಿತ್ರರಂಗದ ಸಾಧಕರು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ.

​2024ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸಿಬಿಎಫ್‌ಸಿ (CBFC) ಪ್ರಮಾಣೀಕರಿಸಿದ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದ್ದು, ಫಿಲ್ಮ್ ಮೇಕರ್ ಜಯರಾಜ್ ನೇತೃತ್ವದ 11 ಸದಸ್ಯರ ತೀರ್ಪುಗಾರರ ಮಂಡಳಿಯು ವಿಜೇತರನ್ನು ಆಯ್ಕೆ ಮಾಡಿತ್ತು.
​ಕನ್ನಡ ಹಾಗೂ ತುಳು ಸಿನಿಮಾಗಳಿಗೆ ಸಂದ ಪ್ರಶಸ್ತಿಗಳ ವಿವರ:

Advertisement

​ಅತ್ಯುತ್ತಮ ಕನ್ನಡ ಸಿನಿಮಾ: 'ಮಿಥ್ಯ' (ನಿರ್ದೇಶನ: ಸುಮಂತ್ ಭಟ್ | ನಿರ್ಮಾಣ: ಪರಂವಃ ಪಿಕ್ಚರ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್)
​ಅತ್ಯುತ್ತಮ ಬಾಲ ಕಲಾವಿದ: ಅತೀಶ್ ಎಸ್. ಶೆಟ್ಟಿ ('ಮಿಥ್ಯ' ಚಿತ್ರದ ನಟನೆಗಾಗಿ - ಬಹುಭಾಷಾ ಪ್ರತಿಭೆಗಳೊಂದಿಗೆ ಹಂಚಿಕೆ)
​ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ರೂಪಶ್ರೀ ವರ್ಕಾಡಿ ('ಮಿಥ್ಯ' ಚಿತ್ರಕ್ಕಾಗಿ)

​ಅತ್ಯುತ್ತಮ ತುಳು ಸಿನಿಮಾ: 'ಇಂಬು' (ನಿರ್ದೇಶನ: ಶಿವಧ್ವಜ್ ಶೆಟ್ಟಿ | ನಿರ್ಮಾಣ: ಪಿಚ್ಚರ್ ಸ್ಟುಡಿಯೋ)
​ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ: 'ನಾನಿರುವುದೇ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ' (ಲೇಖಕ: ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ | ಪ್ರಕಾಶನ: ಮಿರರ್ ಬುಕ್ಸ್)
​ಮಿಥ್ಯ ಸಿನಿಮಾದ ಕಥಾಹಂದರ:
ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಪಿಕ್ಚರ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ 'ಮಿಥ್ಯ' ಚಿತ್ರದ ಮೂಲಕ ಸುಮಂತ್ ಭಟ್ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. 

11 ವರ್ಷದ ಬಾಲಕನೊಬ್ಬ ಪೋಷಕರ ನಿಧನದ ನಂತರ ಆ ದುಃಖದಿಂದ ಹೊರಬಂದು, ಹೊಸ ಸಂಬಂಧ ಹಾಗೂ ಸ್ನೇಹವನ್ನು ಹುಡುಕುತ್ತಾ ಸಾಗುವ ಭಾವುಕ ಪಯಣವೇ ಈ ಚಿತ್ರದ ಮುಖ್ಯ ಕಥಾವಸ್ತು. ಉದಿತ್ ಖುರಾನ ಅವರ ಛಾಯಾಗ್ರಹಣ ಹಾಗೂ ಮಿಥುನ್ ಮುಕುಂದನ್ ಅವರ ಸಂಗೀತ ಚಿತ್ರಕ್ಕಿದೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಇಮ್ರಾನ್-ಆಶಾ ಆತ್ಮಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ: 11 ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ FIRಹಿರಿಯೂರು ತಾಲೂಕಿನ ಮೇಟಿಕುರ್ಕೆಯಲ್ಲಿ ಇಂದು ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮಕೊಡಗಿನ ದಸರಾ; ಕರಗೋತ್ಸವದಿಂದ ಜನೋತ್ಸವದವರೆಗೆ:….ಹನಿಟ್ರ್ಯಾಪ್ ಸಂಚು ಪ್ರಶ್ನಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸರ್ಕಾರದ ದೌರ್ಜನ್ಯ: ಕುಮಾರಸ್ವಾಮಿಜೆಡಿ(ಎಸ್) ಕಾರ್ಯಕರ್ತರ ಗುರಿ: ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನೆಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಪಾಲು: ಪ್ರಸ್ತಾವನೆ ಸಲ್ಲಿಸಲು ಸಿಎಂ ನಿರ್ಧಾರಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನಧಾರ್ಮಿಕ ಮತಾಂತರಕ್ಕೆ ಸಿಗಲ್ಲ ಜಾತಿ ಮೀಸಲಾತಿ: ಸುಪ್ರೀಂ ಕೋರ್ಟ್ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಸ್ಫೋಟಕ ಆರೋಪ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದಿಂದ ಹಣಕಾಸು ನೆರವು!ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಎಚ್ಚರಿಕೆ