Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

50 ಲಕ್ಷ ಮತದಾರರ ಕೈಬಿಡುವ ಆರೋಪ: ಸಿಎಂ ಸಾಬೀತುಪಡಿಸಲಿ, ಇಲ್ಲವೇ ರಾಜೀನಾಮೆ ನೀಡಲಿ -ವಿಜಯೇಂದ್ರ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಹಿಂದ
, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ 50 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಮುಖ್ಯಮಂತ್ರಿಗಳು ಮಾಡಿರುವ ಗಂಭೀರ ಆರೋಪವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿಗಳು ಇದನ್ನು ದಾಖಲೆ ಸಮೇತ ಸಾಬೀತುಪಡಿಸಬೇಕು, ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದಾರೆ.

 ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿಯಮಾನುಸಾರ Form-7 ಸಲ್ಲಿಸುವುದು ಕಾನೂನುಬದ್ಧ ಅವಕಾಶವೇ ಹೊರತು, ಮತದಾರರ ಹೆಸರನ್ನು ನೇರವಾಗಿ ಅಳಿಸುವ ಯಾವುದೇ ವಿಶೇಷ ಸಾಧನ ಬಿಜೆಪಿಯ ಬಳಿ ಇಲ್ಲ.

Advertisement

ಮೃತರು, ಸ್ಥಳಾಂತರಗೊಂಡವರು ಮತ್ತು ಅನರ್ಹರ ಹೆಸರುಗಳನ್ನು ತೆಗೆದು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಪ್ರಕ್ರಿಯೆ ಪ್ರಜಾಪ್ರಭುತ್ವದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದರು.

ದಾಖಲೆಗಳಿಲ್ಲದ ಆರೋಪ: ಮುಖ್ಯಮಂತ್ರಿಗಳು 50 ಲಕ್ಷ ಮತದಾರರನ್ನು ಕೈಬಿಡುವ ಸಂಚು ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರೂ, ಅದಕ್ಕೆ ಪೂರಕವಾದ ಯಾವುದೇ ನಿಖರ ದಾಖಲೆ ಅಥವಾ ಸಾಕ್ಷ್ಯವನ್ನು ಸಾರ್ವಜನಿಕವಾಗಿ ಮುಂದಿಟ್ಟಿಲ್ಲ.

Form-7 ಕೇವಲ ಬಿಜೆಪಿಯ ಹಕ್ಕಲ್ಲ: ಇದು ಬಿಜೆಪಿ ಮಾತ್ರ ಬಳಸುವ ಅಸ್ತ್ರವಲ್ಲ. ವಿವಿಧ ಪಕ್ಷಗಳ ಪ್ರತಿನಿಧಿಗಳು, ಬಿಎಲ್‌ಒ ಗಳು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗ ಕಲ್ಪಿಸಿರುವ ಕಾನೂನುಬದ್ಧ ಅವಕಾಶವಾಗಿದೆ. Form-7 ಸಲ್ಲಿಸಿದ ತಕ್ಷಣ ಯಾರ ಹೆಸರೂ ಅಳಿಸಿಹೋಗುವುದಿಲ್ಲ, ಬದಲಿಗೆ ಚುನಾವಣಾ ಆಯೋಗದ ಪರಿಶೀಲನೆ ಹಾಗೂ ವಿಚಾರಣೆಯ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ನರಸಿಂಹರಾಜ ಕ್ಷೇತ್ರದ ಮತದಾರರ ಏರಿಕೆ: ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳ ಅವಧಿಯಲ್ಲಿ ಸುಮಾರು 1.30 ಲಕ್ಷ ಮತದಾರರ ಸಂಖ್ಯೆ ಅಸಾಮಾನ್ಯವಾಗಿ ಹೆಚ್ಚಾಗಿರುವುದು ಹಾಗೂ ಬೇರೆಡೆ ವಾಸವಿರುವವರು ಬಂದು ಹೆಸರು ನೋಂದಾಯಿಸಿಕೊಳ್ಳುತ್ತಿರುವ ಕುರಿತು ಸ್ಥಳೀಯವಾಗಿ ಪ್ರಶ್ನೆಗಳು ಎದ್ದಿದ್ದು, ಇದರ ಬಗ್ಗೆಯೂ ಸಮಗ್ರ ಪರಿಶೀಲನೆ ಆಗಬೇಕು.

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ರಾಜಕೀಯ: ಕೆಪಿಎಸ್‌ಸಿ ನೇಮಕಾತಿ ಗೊಂದಲ, ಗುತ್ತಿಗೆದಾರರ ಆರೋಪಗಳು, ಬರಗಾಲ ಮತ್ತು ಹಣಕಾಸಿನ ಸಮಸ್ಯೆಗಳಂತಹ ಸರ್ಕಾರದ ಗಂಭೀರ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿಗಳು ಎಸ್‌ಐಆರ್ ವಿಚಾರ ರಾಜಕೀಯಗೊಳಿಸುತ್ತಿದ್ದಾರೆ.

ಎಫ್‌ಐಆರ್ ಬೆದರಿಕೆಗೆ ಜಗ್ಗುವುದಿಲ್ಲ: ಫಾರ್ಮ್ ಸಲ್ಲಿಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ಮೇಲೆ ರಾಜಕೀಯ ಒತ್ತಡ ಹೇರಿ ಎಫ್‌ಐಆರ್ ದಾಖಲಿಸುವ ಬೆದರಿಕೆ ಹಾಕಿದರೆ ಪಕ್ಷವು ಹೆದರುವುದಿಲ್ಲ. ಕಾನೂನುಬದ್ಧ ಹೋರಾಟವನ್ನು ಎದುರಿಸಲು ಸಿದ್ಧರಿದ್ದೇವೆ.

ಸರ್ಕಾರದ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು "ಹಿಟ್ ಅಂಡ್ ರನ್" ರಾಜಕಾರಣ ಮಾಡುವುದನ್ನು ಬಿಟ್ಟು, ಮಾಡಿರುವ ಆರೋಪವನ್ನು ಮುಖ್ಯಮಂತ್ರಿಗಳು ಸಾಬೀತುಪಡಿಸಬೇಕು. ಇಲ್ಲವಾದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಕೇಂದ್ರ ತಂಡಕ್ಕೆ ಟಿ.ಬಿ. ಜಯಚಂದ್ರ ಮನವಿರಾಹುಲ್ ಗಾಂಧಿ 'ಚೀನಾ-ಪಾಕ್ ಏಜೆಂಟ್' ಎಂದ ಶಾಸಕ; ಸಿದ್ದರಾಮಯ್ಯಗೆ ಕಾಂಗ್ರೆಸ್ ಬಿಡುವಂತೆ ಬಹಿರಂಗ ಸಲಹೆ!ಹಿರಿಯ ಚಲನಚಿತ್ರ ಮಾಂತ್ರಿಕ ಸಿಂಗೀತಂ ಶ್ರೀನಿವಾಸ ರಾವ್ ಇನ್ನಿಲ್ಲ: ಗಣ್ಯರಿಂದ ಕಂಬನಿಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಮುರಿದುಬಿದ್ದ ಎಲ್‌ಇಡಿ ಕಮಾನು; ವೃದ್ಧ ಸೇರಿ ಹಲವರಿಗೆ ಗಾಯಕರ್ನಾಟಕ, ಕೇರಳದಲ್ಲೂ 'ವೋಟ್ ಚೋರಿ' ಆಗಿದ್ರೆ ಸರ್ಕಾರಕ್ಕೆ ರಾಜೀನಾಮೆ ಕೊಡಿಸಿ: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲುಹಿರಿಯ ಐಎಎಸ್‌ಅಧಿಕಾರಿಗಳ ವರ್ಗಾವಣೆ ಮತ್ತು ಹೊಸ ಜವಾಬ್ದಾರಿ ಹಂಚಿಕೆಜಂತರ್ ಮಂತರ್ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರಿಗೆ ಲೈಂಗಿಕ ಕಿರುಕುಳ"ರಾಹುಲ್ ಗಾಂಧಿಗೆ ಅಮೇಥಿ ಬಿಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ಹೆದರಿಕೆಯಿತ್ತು": ಸಂಸದರ ವಿವಾದಾತ್ಮಕ ಹೇಳಿಕೆವೀಳ್ಯದೆಲೆ, ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿದ ನಿಖಿಲ್ ಕುಮಾರಸ್ವಾಮಿದಸರಾ ವಿಜೃಂಭಣೆಗೆ ಸಿದ್ಧತೆ: ರಾಜಕೀಯ ರಹಿತ, ವೈಭವದ ದಸರಾಗೆ ಡಿ.ಕೆ. ಶಿವಕುಮಾರ್ ಕರೆ