Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭದ್ರೆಗಾಗಿ ಕ್ಯಾದಿಗೆರೆ, ಜೆ.ಎನ್.ಕೋಟೆ ರೈತರ ಹಕ್ಕೊತ್ತಾಯ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಾಥ್. ಮುಖ್ಯ ಇಂಜಿನಿಯರ್ ಜೊತೆ ಮಾತುಕತೆ

ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ
       ಭದ್ರಾ ಮೇಲ್ದಂಡೆ ಯೋಜನೆಯಡಿ ನಮ್ಮೂರ ಕೆರೆಗಳಿಗೂ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ  ಕ್ಯಾದಿಗೆರೆ ಹಾಗೂ ಜೆ.ಎನ್.ಕೋಟೆ ರೈತರು ಮಂಗಳವಾರ ಮುಖ್ಯ ಇಂಜಿನಿಯರ್ ಕಚೇರಿಗೆ ಧಾವಿಸಿ ಹಕ್ಕೊತ್ತಾಯ ಮಂಡಿಸಿದರು. 

     ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹಾಗೂ ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ನೇತೃತ್ವದಲ್ಲಿ ಕಚೇರಿಗೆ ಆಗಮಿಸಿದ ಮುನ್ನೂರಕ್ಕ ಹೆಚ್ಚು ರೈತರು ಪ್ರಾಯೋಗಿಕ ಪರೀಕ್ಷಾರ್ಥ ವೇಳೆಯೇ ನಮ್ಮೂರ ಕೆರೆಗಳಿಗೆ ನೀರು ಹಾಯಿಸಬೇಕು. ತಕ್ಷಣವೇ ಮಾರ್ಗಗಳ ಹುಡುಕಬೇಕೆಂದು ಒತ್ತಾಯಿಸಿದರು. 

Advertisement

         ಕ್ಯಾದಿಗೆರೆ ಗ್ರಾಮದ ಹೆದ್ದಾರಿ ಪಕ್ಕದಲ್ಲಿ ಆಳವಾದ ಗುಂಡಿಯಿದ್ದು ಮಳೆಗಾಲದಲ್ಲಿ ಇದು ಸದಾ ತುಂಬಿರುತ್ತಿತ್ತು. ಇದರಿಂದಾಗಿ ಸುತ್ತ ಮುತ್ತಲ ಜಮೀನುಗಳ ಅಂತರ್ಜಲ ಹೆಚ್ಚಳವಾಗಿ ರೈತರು ನೆಮ್ಮದಿಯಿಂದ ಇದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಮಳೆ ಬಾರದೆ ಗುಂಡಿಯಲ್ಲಿ ನೀರು ನಿಲ್ಲದೆ ತೊಂದರೆಯಾಗಿದೆ. ಅನತಿ ದೂರದಲ್ಲಿ ಭದ್ರಾ ಮೇಲ್ದಂಡೆ ಚಿತ್ರದುರ್ಗ ಶಾಖಾ ಕಾಲುವೆ ಹಾದು ಹೋಗಿದ್ದು ಅಲ್ಲಿಂದ ನೀರು ಹಾಯಿಸಿ  ಇಲ್ಲಿನ ಗುಂಡಿ ತುಂಬಿಸಬಹುದಾಗಿದೆ. ನಾವು ನೂರಾರು ಕೋಟಿ ರೂಪಾಯಿ ವೆಚ್ಚದ ಯೋಜನೆ ಕೇಳುತ್ತಿಲ್ಲ. ಕೆಲವು ಲಕ್ಷ ರು ವೆಚ್ಚದಲ್ಲಿ ಹೆದ್ದಾರಿ ಪಕ್ಕದ ಗುಂಡಿ ತುಂಬಿಸಬಹುದಾಗಿದೆ. ಸಣ್ಣ ಪುಟ್ಟ ಆಸೆಗಳ ಈಡೇರಿಸುವುದು ಸರ್ಕಾರ ಹಾಗೂ ಅಧಿಕಾರಿಗಳ ಕರ್ತವ್ಯವೆಂದರು. 

    ಜೆ.ಎನ್. ಕೋಟೆ ಕೆರೆಗೆ ಭದ್ರೆ ನೀರು ಲಿಂಕ್ ಇದ್ದರೂ ಹರಿದು ಬರುತ್ತಿಲ್ಲ. ಗ್ರಾಮಸ್ಥರೇ ಜೆಸಿಬಿ ಯಂತ್ರದ ಸಹಾಯದಿಂದ ಕಾಲುವೆ ತೋಡಿದ್ದಾರೆ. ಅಧಿಕಾರಿಗಳು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇದೂ ಕೂಡಾ ಸರ್ಕಾರಕ್ಕೆ ಅಧಿಕ ವೆಚ್ಚವಾಗುವುದಿಲ್ಲವೆಂದು ರೈತರು  ಮನವಿ ಮಾಡಿದರು. 

       ಈ ವೇಳೆ ಮಾತನಾಡಿದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, 30 ವರ್ಷಗಳಿಂದೆ ಜಿಲ್ಲೆಯ ಜನ ಸಮುದಾಯಗಳು  ಹೋರಾಟ ಮಾಡಿ ನೀರು ತಂದಿದ್ದಾರೆ.

 ತಮ್ಮೂರ ಪಕ್ಕದಲ್ಲಿ ನೀರು ಹರಿದು ಹೋಗುವುದ  ಆಸೆ ಕಣ್ಗಳಿಂದ ನೋಡಿ ಸಂತಸ ಪಟ್ಟಿದ್ದಾರೆ. ಆದರೆ ನಮಗೆ ನೀರು ಇಲ್ಲವೆಂಬ ಕೊರಗು ಅವರದ್ದಾಗಿದೆ. ಶಾಖಾ ಕಾಲುವೆ ಸಮೀಪದ  ಹಳ್ಳಗಳಿಗೆ ಭದ್ರೆ ನೀರು ಹರಿಯುವಂತೆ ಮಾಡಿದರೆ ಅಂತರ್ಜಲ ಹೆಚ್ಚಳವಾಗುತ್ತದೆ. ಹಾಗಾಗಿ ಅಧಿಕಾರಿಗಳು ಕಾರ್ಯಸಾಧ್ಯತೆ ಬಗ್ಗೆ ಗಂಭೀರವಾಗಿ ದೃಷ್ಟಿ ಹಾಯಿಸಬೇಕೆಂದು ಮನವಿ ಮಾಡಿದರು.

    ಮನವಿ ಆಲಿಸಿದ ಮುಖ್ಯ ಇಂಜಿನಿಯರ್ ರವಿಶಂಕರ್ ಮಾತನಾಡಿ, ಸೆಪ್ಟಂಬರ್ 24 ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗಕ್ಕೆ ಆಗಮಿಸಿ ಗೋನೂರು ಕೆರೆಗೆ ಪೂಜೆ ಸಲ್ಲಿಸಲಿದ್ದಾರೆ. ಅವರು ಬಂದು ಹೋದ ನಂತರ ಇಲಾಖೆಯ ಇಂಜಿನಿಯರ್ ತಂಡದೊಂದಿಗೆ ನಾನೇ ಸ್ಥಳಕ್ಕೆ ಖುದ್ದು ಆಗಮಿಸಿ ಜೆ.ಎನ್.ಕೋಟೆ ಹಾಗೂ ಕ್ಯಾದಿಗೆರೆ ಗೆ ನೀರು ಹರಿಸುವುದರ ಕುರಿತು ಪರಿಶೀಲಿಸುವೆ ಎಂದರು.

      ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹಾಯಿಸಲು ಮೂರು ಟಿಎಂಸಿ ಹಂಚಿಕೆ ಮಾಡಿ ಸರ್ಕಾರ ಆದೇಶಿಸಿದೆ. ಇದುವರೆಗೂ ಒಂದು ಟಿಎಂಸಿ ಯಷ್ಟು ನೀರನ್ನು ಮಾತ್ರ ಲಿಪ್ಟ್ ಮಾಡಿ ಕಾಲುವೆಗೆ ಹರಿಸಲಾಗಿದೆ. ಇನ್ನೂ ಎರಡು ಟಿಎಂಸಿ ಬಾಕಿ ಇದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

      ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಅಧಿಕಾರಿಗಳು ಹಾಗೂ ರೈತರು ಕಾಲುವೆ ಸಮೀಪ ಕುಳಿತು  ನೀರು ಹರಿಸುವ ಸಾಧ್ಯತೆ ಬಗ್ಗೆ ಚರ್ಚಿಸೋಣ. ಗ್ರಾವಿಟಿ ಲೆವೆಲ್ ನಲ್ಲಿ ನೀರು ಹರಿಯುವುದಿದ್ದರೆ ತಕ್ಷಣ ತೀರ್ಮಾನ ಕೈಗೊಳ್ಳಬೇಕು. ಎಲ್ಲವೂ ಸರ್ಕಾರದ ಮಟ್ಟದಲ್ಲಿ ಆಗಬೇಕು ಎಂದೇನಿಲ್ಲ. ಆದರೆ ರೈತರು  ಕಾನೂನು ಮೀರಿ ನಡೆದುಕೊಳ್ಳಬಾರದು. ಕಾಲುವೆಗೆ ಹಾನಿ ಮಾಡುವಂತಹ ದೃಷ್ಕೃತ್ಯಗಳ ನಡೆಸಬಾರದೆಂದು ವಿನಂತಿಸಿದರು.

    ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇವಲ ಅರ್ಧದಷ್ಟು ಮಾತ್ರ ಮುಗಿದಿದೆ. ಪೂರ್ಣ ಪ್ರಮಾಣದ ಅನುಷ್ಠಾನಕ್ಕಾಗಿ ಮತ್ತಷ್ಟು ಹೋರಾಟದ ಹಾದಿ ಸವೆಸಬೇಕಿದೆ. ಚಾಕೋಲೇಟ್, ಸಿಹಿ ಹಂಚಿ ಸಂಭ್ರಮಿಸುವಂತಹ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ. ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆಗೆ ನೀರು ಹಾಯಿಸಬೇಕಿದೆ. ಸಿಹಿ ಹಂಚಿ ಮೈಮರೆತರೆ ಸರ್ಕಾರ, ಅಧಿಕಾರಿಗಳು ಎಚ್ಚರ ತಪ್ಪುವ ಸಾಧ್ಯತೆ ಇರುತ್ತದೆ ಎಂದರು.

      ಕ್ಯಾದಿಗೆರೆಯ ಗ್ರಾಪಂ ಸದಸ್ಯ ಮಂಜುನಾಥ್, ಸತೀಶ್, ಸೀತಾರೆಡ್ಡಿ, ಹೂವಿನ ಕಲ್ಲೇಶಿ, ಮಾರ್ಕಂಡಪ್ಪ, ಬಸವರಾಜಪ್ಪ, ದೇವರಾಜು,ಹಟ್ಟಿ  ತಿಪ್ಪೇಸ್ವಾಮಿ, ರಾಜಪ್ಪ, ರಾಮಣ್ಣ, ಜೆ.ಎನ್.ಕೋಟೆ ತಾಪಂ ಮಾಜಿ ಸದಸ್ಯ ಮಂಜುನಾಥ್, ಸಿದ್ದೇಶ್ ನಾಯಕ, ಪ್ರಸನ್ನ ಕುಮಾರ್, ಸಿರಿಗಿ ನಿಂಗಪ್ಪ ಈ ವೇಳೆ ಉಪಸ್ಥಿತರಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಇಮ್ರಾನ್-ಆಶಾ ಆತ್ಮಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ: 11 ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ FIRಹಿರಿಯೂರು ತಾಲೂಕಿನ ಮೇಟಿಕುರ್ಕೆಯಲ್ಲಿ ಇಂದು ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮಕೊಡಗಿನ ದಸರಾ; ಕರಗೋತ್ಸವದಿಂದ ಜನೋತ್ಸವದವರೆಗೆ:….ಹನಿಟ್ರ್ಯಾಪ್ ಸಂಚು ಪ್ರಶ್ನಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸರ್ಕಾರದ ದೌರ್ಜನ್ಯ: ಕುಮಾರಸ್ವಾಮಿಜೆಡಿ(ಎಸ್) ಕಾರ್ಯಕರ್ತರ ಗುರಿ: ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನೆಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಪಾಲು: ಪ್ರಸ್ತಾವನೆ ಸಲ್ಲಿಸಲು ಸಿಎಂ ನಿರ್ಧಾರಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನಧಾರ್ಮಿಕ ಮತಾಂತರಕ್ಕೆ ಸಿಗಲ್ಲ ಜಾತಿ ಮೀಸಲಾತಿ: ಸುಪ್ರೀಂ ಕೋರ್ಟ್ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಸ್ಫೋಟಕ ಆರೋಪ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದಿಂದ ಹಣಕಾಸು ನೆರವು!ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಎಚ್ಚರಿಕೆ