Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮುಖ್ಯಮಂತ್ರಿ ಹಾಗೂ ಸಚಿವರ ಪ್ರತಿಭಟನೆ: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪಿಸಿ ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ರಾಜಕೀಯ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿರುವ ಭಾರತೀಯ ಜನತಾ ಪಕ್ಷ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಅಧಿಕೃತವಾಗಿ ದೂರು ದಾಖಲಿಸಿದೆ.

ವಿಶೇಷ ತನಿಖಾ ವರದಿ ವಿರೋಧಿಸಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿದ್ದ ಪ್ರತಿಭಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಮಲ ಪಡೆ, ರಾಜ್ಯ ಸರ್ಕಾರದ ನಾಯಕರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ದೂರಿನಲ್ಲಿ ಪ್ರಮುಖವಾಗಿ ಆರು ಆಕ್ಷೇಪಗಳನ್ನು ಮುಂದಿಟ್ಟಿದೆ.

Advertisement

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಹಿರಿಯ ಬಿಜೆಪಿ ನಿಯೋಗವು ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಕಾಂಗ್ರೆಸ್ ಮುಖಂಡರು ಚುನಾವಣಾ ಆಯೋಗದ ಕಚೇರಿ ಆವರಣದಲ್ಲಿ ಧರಣಿ ನಡೆಸಿರುವುದು ಅತ್ಯಂತ ಗಂಭೀರ ಸ್ವರೂಪದ್ದು ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪ: ಕರ್ನಾಟಕ ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿ, ಮುಖ್ಯ ನ್ಯಾಯಮೂರ್ತಿಗಳ ಪೀಠದ ಮೂಲಕ ಫ್ರೀಡಂ ಪಾರ್ಕ್ ಹೊರತಾಗಿ ನಗರದ ಬೇರೆ ಯಾವುದೇ ಸ್ಥಳದಲ್ಲಿ ಧರಣಿ ಅಥವಾ ಪ್ರತಿಭಟನೆ ನಡೆಸುವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಆದರೆ, ಈ ಆದೇಶವನ್ನು ಲೆಕ್ಕಿಸದೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಚುನಾವಣಾ ಕಚೇರಿ ಆವರಣದಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವುದು ಸ್ಪಷ್ಟ ನ್ಯಾಯಾಲಯ ನಿಂದನೆ ಹಾಗೂ ಆದೇಶದ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ದೂರಿದೆ.

ಅಲ್ಲದೆ, ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಲ್ಲ. ಇದು ಸಂವಿಧಾನಾತ್ಮಕವಾಗಿ ಸ್ವತಂತ್ರವಾಗಿರುವ ಪ್ರಮುಖ ವ್ಯವಸ್ಥೆಯಾಗಿದ್ದು, ಇಂತಹ ಸಂಸ್ಥೆಯ ಕಚೇರಿ ಆವರಣವನ್ನೇ ರಾಜಕೀಯ ಪ್ರತಿಭಟನೆಗೆ ಬಳಸಿರುವುದು ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆ ಮತ್ತು ಸಾರ್ವಜನಿಕ ನಂಬಿಕೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಎಚ್ಚರಿಸಿದೆ.

ಬಿಜೆಪಿಯ 6 ಪ್ರಮುಖ ಆಕ್ಷೇಪಗಳು ಮತ್ತು ಬೇಡಿಕೆಗಳು:
ಎಫ್‌ಐಆರ್ ಹಾಗೂ ಬಂಧನಕ್ಕೆ ಆಗ್ರಹ: ಇದು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು, ನೇರವಾಗಿ ನ್ಯಾಯಾಲಯ ನಿಂದನೆ ಪ್ರಕರಣವಾಗುತ್ತದೆ. ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ಹಾಗೂ ಭಾಗಿಯಾದ ಸಚಿವರ ಮೇಲೆ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು.

 ಅನುಮತಿ ನೀಡಿದವರು ಯಾರು?: ಸ್ವತಃ ಮುಖ್ಯಮಂತ್ರಿ ಹಾಗೂ ಸಚಿವರು ಚುನಾವಣಾ ಆಯೋಗದ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ ಅಧಿಕಾರಿಯಾರು?

ಲಿಖಿತ ಅನುಮತಿ ಪತ್ರ ಬಹಿರಂಗಕ್ಕೆ ಒತ್ತಾಯ: ಈ ಪ್ರತಿಭಟನೆಗೆ ಲಿಖಿತವಾಗಿ ಅನುಮತಿ ನೀಡಲಾಗಿದೆಯೇ? ನೀಡಿದ್ದರೆ, ಆ ಅನುಮತಿ ಪತ್ರದ ಪ್ರತಿಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು.

ಸಮಾನ ಅವಕಾಶದ ಪ್ರಶ್ನೆ: ಸಾಮಾನ್ಯ ನಾಗರಿಕರು ಅಥವಾ ವಿರೋಧ ಪಕ್ಷಗಳು ಇದೇ ರೀತಿ ಚುನಾವಣಾ ಕಚೇರಿ ಆವರಣದಲ್ಲಿ ಧರಣಿ ನಡೆಸಲು ಮುಂದಾದರೆ, ಪೊಲೀಸ್ ಇಲಾಖೆ ಇಂತಹದೇ ಮುಕ್ತ ಅವಕಾಶವನ್ನು ನೀಡುತ್ತದೆಯೇ?

ಅಧಿಕಾರಿಗಳ ಕ್ರಮದ ವರದಿ: ಮುಖ್ಯಮಂತ್ರಿ ಹಾಗೂ ಸಚಿವರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕೈಗೊಂಡ ಕ್ರಮಗಳ ಸಂಪೂರ್ಣ ವರದಿಯನ್ನು ಬಹಿರಂಗಪಡಿಸಬೇಕು.

ಸಾಕ್ಷ್ಯಗಳ ಸಲ್ಲಿಕೆ: ಇತ್ತೀಚೆಗೆ ನಡೆದ ಈ ಘಟನೆಯ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ, ಪೊಲೀಸ್ ಬಂದೋಬಸ್ತ್ ವಿವರ, ಅನುಮತಿ ಪತ್ರ ಹಾಗೂ ಸಂಬಂಧಿತ ದಾಖಲೆಗಳನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಮತ್ತು ಕೈಗೊಂಡ ಕಾನೂನು ಕ್ರಮದ ವಿವರವನ್ನು ಲಿಖಿತ ರೂಪದಲ್ಲಿ ತಿಳಿಸಬೇಕು.

ಈ ವಿವಾದವು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಪೊಲೀಸ್ ಇಲಾಖೆ ಮತ್ತು ಸರ್ಕಾರದ ಮುಂದಿನ ಹೆಜ್ಜೆ ಏನು ಎಂಬುದು ಕುತೂಹಲ ಮೂಡಿಸಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಕೇಂದ್ರ ತಂಡಕ್ಕೆ ಟಿ.ಬಿ. ಜಯಚಂದ್ರ ಮನವಿರಾಹುಲ್ ಗಾಂಧಿ 'ಚೀನಾ-ಪಾಕ್ ಏಜೆಂಟ್' ಎಂದ ಶಾಸಕ; ಸಿದ್ದರಾಮಯ್ಯಗೆ ಕಾಂಗ್ರೆಸ್ ಬಿಡುವಂತೆ ಬಹಿರಂಗ ಸಲಹೆ!ಹಿರಿಯ ಚಲನಚಿತ್ರ ಮಾಂತ್ರಿಕ ಸಿಂಗೀತಂ ಶ್ರೀನಿವಾಸ ರಾವ್ ಇನ್ನಿಲ್ಲ: ಗಣ್ಯರಿಂದ ಕಂಬನಿಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಮುರಿದುಬಿದ್ದ ಎಲ್‌ಇಡಿ ಕಮಾನು; ವೃದ್ಧ ಸೇರಿ ಹಲವರಿಗೆ ಗಾಯಕರ್ನಾಟಕ, ಕೇರಳದಲ್ಲೂ 'ವೋಟ್ ಚೋರಿ' ಆಗಿದ್ರೆ ಸರ್ಕಾರಕ್ಕೆ ರಾಜೀನಾಮೆ ಕೊಡಿಸಿ: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲುಹಿರಿಯ ಐಎಎಸ್‌ಅಧಿಕಾರಿಗಳ ವರ್ಗಾವಣೆ ಮತ್ತು ಹೊಸ ಜವಾಬ್ದಾರಿ ಹಂಚಿಕೆಜಂತರ್ ಮಂತರ್ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರಿಗೆ ಲೈಂಗಿಕ ಕಿರುಕುಳ"ರಾಹುಲ್ ಗಾಂಧಿಗೆ ಅಮೇಥಿ ಬಿಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ಹೆದರಿಕೆಯಿತ್ತು": ಸಂಸದರ ವಿವಾದಾತ್ಮಕ ಹೇಳಿಕೆವೀಳ್ಯದೆಲೆ, ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿದ ನಿಖಿಲ್ ಕುಮಾರಸ್ವಾಮಿದಸರಾ ವಿಜೃಂಭಣೆಗೆ ಸಿದ್ಧತೆ: ರಾಜಕೀಯ ರಹಿತ, ವೈಭವದ ದಸರಾಗೆ ಡಿ.ಕೆ. ಶಿವಕುಮಾರ್ ಕರೆ