Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಶೋಕನ ಮೂರು ಶಾಸನಗಳನ್ನು ಹೊಂದಿರುವ ಚಿತ್ರದುರ್ಗ ಜಿಲ್ಲೆಗೆ ರಾಜ್ಯದ ಯಾವ ಜಿಲ್ಲೆಗೂ ಇಲ್ಲದಂತ ವೈಶಿಷ್ಠ್ಯತೆಯಿದೆ

ಚಂದ್ರವಳ್ಳಿ ನ್ಯೂಸ್, ​ಚಿತ್ರದುರ್ಗ : 
ಅಶೋಕನ ಮೂರು ಶಾಸನಗಳನ್ನು ಹೊಂದಿರುವ ಚಿತ್ರದುರ್ಗ ಜಿಲ್ಲೆಗೆ ರಾಜ್ಯದ ಯಾವ ಜಿಲ್ಲೆಗೂ ಇಲ್ಲದಂತ ವೈಶಿಷ್ಠ್ಯತೆಯಿದೆ ಎಂದು ಸಂಸ್ಕೃತಿ ಸಂಶೋಧಕ ಬೆಂಗಳೂರಿನ ಎಸ್.ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನ ಇವುಗಳ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‌ನಲ್ಲಿ ಭಾನುವಾರ ನಡೆದ ೫೫ ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪ್ರದೇಶದ ಪ್ರಾಚೀನ ಕನ್ನಡ ಕವಿಗಳು ೧೦ ನೇ ಶತಮಾನದಿಂದ ೧೯೦೦ ರ ಅವಧಿ ವಿಷಯ ಕುರಿತು ಉಪನ್ಯಾಸ ನೀಡಿದರು.

Advertisement

ಕನ್ನಡದ ಮೊದಲ ಪದ ಸಿಕ್ಕ ಶಾಸನ ಕೂಡ ಜಿಲ್ಲೆಯಲ್ಲಿದೆ. ಕನ್ನಡ ಭಾಷೆಯ ಪ್ರಪ್ರಥಮ ಕೃತಿ ಚಿತ್ರದುರ್ಗ ಜಿಲ್ಲೆಗೆ ಸೇರಿದ್ದು, ಮುರುಘಿಶಾಂತವೀರರ ಕಾಲದವರೆಗೂ ಯಾವುದೇ ಕೃತಿ ಲಭ್ಯವಾಗಿಲ್ಲ ಎನ್ನುವುದಾದರೆ ಸರಿಯಾಗಿ ಶೋಧನೆಯಾಗಿಲ್ಲ ಎನ್ನಬಹುದು. ಅವಿಭಾಜಿತ ಚಿತ್ರದುರ್ಗ ಜಿಲ್ಲೆಗೆ ಸೇರಿದ ಹರಿಹರದಲ್ಲಿ ಪೊಲ್ವಾಲದಂಡನಾಥನ ಹರಿಚಾರಿತ್ರ ಕೃತಿ ಸಿಕ್ಕಿದೆ. ಅದಾದ ನಂತರ ಕಾವ್ಯ ಕೃತಿ ರಚಿತವಾಗಿರುವುದು ಸಿಕ್ಕಿಲ್ಲ ಎಂದು ತಿಳಿಸಿದರು.

ಹಿರಿಯೂರಿನ ರಂಗ ಅವರ ತಂದೆ ರಂಗ ಇವರಿಬ್ಬರು ಕವಿಗಳಾಗಿದ್ದರು. ಬಬ್ಬೂರಿನ ರಂಗ ಹಾಗೂ ಹಿರಿಯೂರಿನ ಪ್ರಭು ಮಾದವ ಕವಿಗಳಿದ್ದರೆನ್ನುವುದನ್ನು ಗಮನಿಸಿದರೆ ಹಿರಿಯೂರಿನಲ್ಲಿ ಪಾಳೆಯ ಪಟ್ಟು ಇತ್ತು ಎನ್ನುವುದು ಗೊತ್ತಾಗುತ್ತದೆ. ಚಿತ್ರದುರ್ಗದ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಚಿತ್ರದುರ್ಗ ಜಿಲ್ಲೆಯ ಪರಿಸರದ ಪ್ರಾಚೀನ ಕನ್ನಡ ಕವಿಗಳ ಬಗ್ಗೆ ಸಂಶೋಧನಾ ಕೃತಿ ಪ್ರಕಟವಾಗಬೇಕಾದ ಅಗತ್ಯವಿದೆ. ಅದಕ್ಕಾಗಿ ವಿಸ್ತಾರವಾದ ಅಧ್ಯಯನವಾಗಬೇಕು. ಸಂಕ್ಷಿಪ್ತ ಪಕ್ಷಿನೋಟ ಒದಗಿಸಿದ್ದೇನೆ. ಜಿಲ್ಲೆಯ ಸಾಹಿತ್ಯ ಪರಂಪರೆ ದೊಡ್ಡದು. ಹಾಗಾಗಿ ಸಾಹಿತ್ಯ ಪರಂಪರೆಯ ವಿಸ್ತಾರವಾದ ಗ್ರಂಥ ಸಿದ್ದಪಡಿಸಬೇಕಿದೆ ಎಂದು ಹೇಳಿದರು.

ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ ಹೆಚ್ಚು ಶಾಸನಗಳಿವೆ ಎಂದು ಹೇಳುವುದು ಸರಿಯಲ್ಲ. ೪೦ ಸಾವಿರ ಶಾಸನಗಳು ಕರ್ನಾಟಕದಲ್ಲಿ ಪ್ರಕಟಗೊಂಡಿವೆ. ಭಾರತದಲ್ಲಿಯೇ ಹೆಚ್ಚು ಶಾಸನಗಳಿರುವ ರಾಜ್ಯ ಯಾವುದಾದರೂ ಇದ್ದರೆ ಅದು ಕರ್ನಾಟಕ. ಪ್ರಾಥಮಿಕ ಹಂತದ ಸಮಸ್ಯೆಗಳ ಬಗ್ಗೆ ಹೆಚ್ಚು ಕೆಲಸವಾಗಬೇಕಿದೆ. ಚಿತ್ರದುರ್ಗದ ಮೇಲೆ ಕೆಲಸ ಮಾಡಿದ ವಿದ್ವಾಂಸರುಗಳ ಪೈಕಿ ಮೊದಲನೆಯವರು ಹುಲ್ಲೂರು ಶ್ರೀನಿವಾಸ ಜೋಯಿಸರು. ಇನ್ನು ಎಷ್ಟೊ ಕೃತಿಗಳು ಪ್ರಕಟಿತ. ಅಪ್ರಕಟಿತ, ಲಭ್ಯ, ಅಲಭ್ಯವಾಗಿವೆ. ಬೃಹನ್ಮಠದ ಹಸ್ತಪ್ರತಿ ಭಂಡಾರದಲ್ಲಿ ಅನೇಕ ಕೃತಿಗಳಿವೆ. ಚಿತ್ರದುರ್ಗ ಪರಿಸರ, ಕನ್ನಡ ಕವಿಗಳ ಬಗ್ಗೆ ಹೆಚ್ಚು ಅಧ್ಯಯನವಾಗಬೇಕೆಂದರು.

ಸಾಹಿತ್ಯ ಅಧ್ಯಯನ ಮಾಡಲು ಹೊರಟಾಗ ಕವಿಗಳ ಬಗ್ಗೆ ಕೃತಿ ಸಿದ್ದಪಡಿಸಬೇಕಿದೆ. ಎಷ್ಟೊ ಸಾಹಿತ್ಯ ಕೈಬಿಟ್ಟು ಹೋಗಿರಬಹುದು. ಲಭ್ಯವಿರುವುದನ್ನಾದರೂ ಅಧ್ಯಯನ ಮಾಡಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂದು ನುಡಿದರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಸಂಶೋಧಕರುಗಳ ಪೈಕಿ ಎಸ್.ಕಾರ್ತಿಕ್ ತುಂಬಾ ವಿಶಿಷ್ಟವಾದವರು. ನೇರ, ನಿಷ್ಠುರ, ವಸ್ತು ನಿಷ್ಠ ಸಂಶೋಧಕರೆನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಾಚೀನ ಸಾಹಿತ್ಯ ಶಾಸನಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರು. ಜಿಲ್ಲೆಯ ಪ್ರಾಚೀನ ಕನ್ನಡ ಕವಿಗಳ ಬಗ್ಗೆ ಮೊದಲ ಬಾರಿ ವಸ್ತುನಿಷ್ಟವಾಗಿ ಅಧ್ಯಯನ ನಡೆಸಿದ್ದಾರೆಂದು ಪರಿಚಯಿಸಿದರು.

ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕರಾದ ಪ್ರೊ.ಲಕ್ಷ್ಮಣ್ ತೆಲಗಾವಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್, ಪ್ರೊ.ಟಿ.ವಿ.ಸುರೇಶ್‌ಗುಪ್ತ ಡಿ.ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ, ಮಲ್ಲಿಕಾರ್ಜುನಪ್ಪ, ಮುದ್ದರಂಗಪ್ಪ, ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಬಿ.ಆರ್.ಸುಬ್ರಮಣ್ಯ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಇಮ್ರಾನ್-ಆಶಾ ಆತ್ಮಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ: 11 ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ FIRಹಿರಿಯೂರು ತಾಲೂಕಿನ ಮೇಟಿಕುರ್ಕೆಯಲ್ಲಿ ಇಂದು ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮಕೊಡಗಿನ ದಸರಾ; ಕರಗೋತ್ಸವದಿಂದ ಜನೋತ್ಸವದವರೆಗೆ:….ಹನಿಟ್ರ್ಯಾಪ್ ಸಂಚು ಪ್ರಶ್ನಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸರ್ಕಾರದ ದೌರ್ಜನ್ಯ: ಕುಮಾರಸ್ವಾಮಿಜೆಡಿ(ಎಸ್) ಕಾರ್ಯಕರ್ತರ ಗುರಿ: ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನೆಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಪಾಲು: ಪ್ರಸ್ತಾವನೆ ಸಲ್ಲಿಸಲು ಸಿಎಂ ನಿರ್ಧಾರಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನಧಾರ್ಮಿಕ ಮತಾಂತರಕ್ಕೆ ಸಿಗಲ್ಲ ಜಾತಿ ಮೀಸಲಾತಿ: ಸುಪ್ರೀಂ ಕೋರ್ಟ್ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಸ್ಫೋಟಕ ಆರೋಪ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದಿಂದ ಹಣಕಾಸು ನೆರವು!ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಎಚ್ಚರಿಕೆ