Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಐಜಿಪಿ ಎನ್. ಶಶಿಕುಮಾರ್ ನೇತೃತ್ವದ ಎಸ್‌ಐಟಿಯಿಂದ ಅಧಿಕೃತ ತನಿಖೆ ಆರಂಭ

ಚಂದ್ರವಳ್ಳಿ ನ್ಯೂಸ್, ಮಂಗಳೂರು:
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬೆಳ್ತಂಗಡಿಯ 17 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಪ್ರಮುಖ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ತನಿಖೆಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.ಎಸ್​ಐಟಿ ತನಿಖಾ ತಂಡದ ಮುಖ್ಯಸ್ಥರಾದ ಐಜಿಪಿ ಎನ್. ಶಶಿಕುಮಾರ್, ಸದಸ್ಯರಾದ ಐಪಿಎಸ್ ಅಧಿಕಾರಿ ನಿಸಾ ಜೇಮ್ಸ್ ಹಾಗೂ ಲೋಕೇಶ್ ಜಗಲಸಾರ್ ಅವರು ಮಂಗಳೂರಿಗೆ ಭೇಟಿ ನೀಡಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದಾರೆ.

 ಹಳೆ ಡಿಸಿ ಕಚೇರಿ ಹಾಗೂ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ   ಮಂಗಳೂರಿಗೆ ಆಗಮಿಸಿದ ಅಧಿಕಾರಿಗಳ ತಂಡವು ಮೊದಲಿಗೆ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಬಳಿಕ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ, ಎಸ್‌ಐಟಿ ತಂಡದ ಮತ್ತೋರ್ವ ಸದಸ್ಯರಾಗಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸಿದರು.  

ಪ್ರಕರಣಕ್ಕೆ ಸಂಬಂಧಿಸಿದ ಹಳೆಯ ಕಡತಗಳ ಪರಿಶೀಲನೆ, ದಾಖಲೆಗಳ ಮರುಪರಿಶೀಲನೆ ಹಾಗೂ ಮುಂದಿನ ಹಂತದ ತನಿಖಾ ರೂಪುರೇಷೆಗಳ ಕುರಿತು ಅಧಿಕಾರಿಗಳ ತಂಡ ಮಹತ್ವದ ಚರ್ಚೆ ನಡೆಸಿದೆ. ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಆರಂಭವಾಗಿರುವ ಈ ಮರುತನಿಖೆಯು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರ್ಣಾಯಕ ತಿರುವು ಪಡೆದುಕೊಂಡಿದೆ. 

ಬಲಗೊಂಡ ವಿಶೇಷ ತನಿಖಾ ತಂಡ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೆಪ್ಟಂಬರ್ 24ರಂದು ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡವನ್ನು ರಚಿಸಿತ್ತು.

ತಂಡದ ಮುಖ್ಯಸ್ಥರು: ಎನ್. ಶಶಿಕುಮಾರ್ (ಐಜಿಪಿ),  ಸದಸ್ಯರು: ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ (ಮಂಗಳೂರು ಪೊಲೀಸ್ ಆಯುಕ್ತ), ನಿಸಾ ಜೇಮ್ಸ್ (ರಾಜ್ಯ ಗುಪ್ತವಾರ್ತೆ), ಲೋಕೇಶ್ ಜಗಲಸಾರ್ (ಸಿಐಡಿ ಎಸ್‌ಪಿ), ಮತ್ತು ವೆಂಕಟೇಶ್ ಪ್ರಸನ್ನ (ಹೆಚ್ಚುವರಿ ಎಸ್‌ಪಿ). 

ಈ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಮಂಗಳೂರು ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ ಬಿ., ಸಿಐಡಿ ಇನ್ಸ್‌ಪೆಕ್ಟರ್‌ಗಳು ಹಾಗೂ ವಿವಿಧ ಠಾಣೆಗಳ ಪಿಎಸ್‌ಐಗಳು, ಎಎಸ್ಐಗಳು ಸೇರಿದಂತೆ ಒಟ್ಟು 16 ಮಂದಿ ಸಹಾಯಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಜೊತೆಗೆ ಅಗತ್ಯ ಸಿಬ್ಬಂದಿಗಳನ್ನು ಸಹ ನಿಯೋಜಿಸಿ ಡಿಜಿ & ಐಜಿಪಿ ಡಾ.ಎಂ.ಎ. ಸಲೀಂ ಅವರು ಸೆಪ್ಟಂಬರ್ 29ರಂದು ಆದೇಶ ಹೊರಡಿಸಿದ್ದಾರೆ.

ನೇಮಕಗೊಂಡಿರುವ ಎಲ್ಲಾ ಅಧಿಕಾರಿಗಳು ತಕ್ಷಣವೇ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದ್ದು, ತನಿಖೆಯು ಅತ್ಯಂತ ಪಾರದರ್ಶಕವಾಗಿ ಹಾಗೂ ತ್ವರಿತ ಗತಿಯಲ್ಲಿ ಮುಂದುವರಿಯಲಿದೆ.  

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಇಮ್ರಾನ್-ಆಶಾ ಆತ್ಮಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ: 11 ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ FIRಹಿರಿಯೂರು ತಾಲೂಕಿನ ಮೇಟಿಕುರ್ಕೆಯಲ್ಲಿ ಇಂದು ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮಕೊಡಗಿನ ದಸರಾ; ಕರಗೋತ್ಸವದಿಂದ ಜನೋತ್ಸವದವರೆಗೆ:….ಹನಿಟ್ರ್ಯಾಪ್ ಸಂಚು ಪ್ರಶ್ನಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸರ್ಕಾರದ ದೌರ್ಜನ್ಯ: ಕುಮಾರಸ್ವಾಮಿಜೆಡಿ(ಎಸ್) ಕಾರ್ಯಕರ್ತರ ಗುರಿ: ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನೆಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಪಾಲು: ಪ್ರಸ್ತಾವನೆ ಸಲ್ಲಿಸಲು ಸಿಎಂ ನಿರ್ಧಾರಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನಧಾರ್ಮಿಕ ಮತಾಂತರಕ್ಕೆ ಸಿಗಲ್ಲ ಜಾತಿ ಮೀಸಲಾತಿ: ಸುಪ್ರೀಂ ಕೋರ್ಟ್ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಸ್ಫೋಟಕ ಆರೋಪ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದಿಂದ ಹಣಕಾಸು ನೆರವು!ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಎಚ್ಚರಿಕೆ