Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ವಿರುದ್ಧ ಭ್ರಷ್ಟಾಚಾರದ ಸಮಗ್ರ ತನಿಖೆಗೆ ಆಗ್ರಹ

ಚಂದ್ರವಳ್ಳಿ ನ್ಯೂಸ್, ​ಚಿತ್ರದುರ್ಗ:
ಗ್ರಾಮ ಆಡಳಿತ ಅಧಿಕಾರಿ (ವಿಎ) ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ಅವರ ಲಂಚಾವತಾರದ ಕುರಿತು ವೈರಲ್ ಆಗಿರುವ ವಿಡಿಯೋ ಹಾಗೂ ಬಂದಿರುವ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ, ಅವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ 'ಪ್ರಜಾ ಕಲ್ಯಾಣ ಸಮಿತಿ' ಸಂಘಟನೆ ಹಾಗೂ ಯುವ ಕರ್ನಾಟಕ ವೇದಿಕೆಯ ಪದಾಧಿಕಾರಿಗಳು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್, ಚಿತ್ರದುರ್ಗ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

​ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಲಾದ ಈ ಮನವಿ ಪತ್ರದಲ್ಲಿ, ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಿಂದಾಗಿ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿದೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯನಿಷ್ಠೆ ಮತ್ತು ಪಾರದರ್ಶಕತೆಯ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಲಾಗಿದೆ.

Advertisement

​​ತಕ್ಷಣದ ಅಮಾನತು: ತನಿಖೆ ಪೂರ್ಣಗೊಳ್ಳುವವರೆಗೆ ಗ್ರಾಮ ಆಡಳಿತ ಅಧಿಕಾರಿ ಮಾಲತೇಶ್ ಮುದ್ದಜ್ಜಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಬೇಕು.
​ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾ: ಅವರು ಹೊಂದಿರುವ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದಿಂದ ತಕ್ಷಣವೇ ವಜಾಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಶಿಫಾರಸು ಮಾಡಬೇಕು.

​ಆಸ್ತಿ ಮತ್ತು ಆದಾಯದ ಪರಿಶೀಲನೆ:
​ಸರ್ಕಾರಿ ಸೇವೆಗೆ ಸೇರಿದ ದಿನಾಂಕದಿಂದ ಇಲ್ಲಿಯವರೆಗಿನ ವೇತನ
, ಭತ್ಯೆ ಹಾಗೂ ಇತರೆ ಆದಾಯದ ವಿವರಗಳನ್ನು ಪರಿಶೀಲಿಸಬೇಕು.
​ಪಿತ್ರಾರ್ಜಿತ ಆಸ್ತಿಯನ್ನು ಹೊರತುಪಡಿಸಿ
, ಸೇವೆಗೆ ಸೇರಿದ ನಂತರ ಅವರ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಸ್ಥಿರ ಮತ್ತು ಚರ ಆಸ್ತಿಗಳ ಸಮಗ್ರ ತನಿಖೆಯಾಗಬೇಕು.

​ಕುಟುಂಬದ ಆದಾಯ, ಜೀವನ ನಿರ್ವಹಣೆ ವೆಚ್ಚ, ಬ್ಯಾಂಕ್ ಖಾತೆಗಳು ಹಾಗೂ ಆಸ್ತಿ ಖರೀದಿಯ ಮೂಲಗಳನ್ನು ತನಿಖೆಗೆ ಒಳಪಡಿಸಬೇಕು.
​ಅಕ್ರಮ ಆಸ್ತಿ ಮುಟ್ಟುಗೋಲು: ಆದಾಯಕ್ಕೆ ಮೀರಿದ ಅಸಮತೋಲಿತ ಆಸ್ತಿ ಕಂಡುಬಂದಲ್ಲಿ ಭ್ರಷ್ಟಾಚಾರ ನಿಗ್ರಹ ಪ್ರಾಧಿಕಾರದ ಮೂಲಕ ತನಿಖೆ ನಡೆಸಿ
, ಅಕ್ರಮ ಆಸ್ತಿಯನ್ನು ಕಾನೂನು ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು.

​ಕಠಿಣ ಕ್ರಮ ಮತ್ತು ಮಾಹಿತಿ: ಲಂಚ ಸ್ವೀಕಾರ ಹಾಗೂ ಅಧಿಕಾರ ದುರುಪಯೋಗ ಸಾಬೀತಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡಕ್ಕೆ ಒಳಗಾಗದೆ ಪಾರದರ್ಶಕ ತನಿಖೆ ನಡೆಸಿ
, ಕೈಗೊಂಡ ಕ್ರಮಗಳ ಕುರಿತು ಮನವಿದಾರರಿಗೆ ಲಿಖಿತ ಮಾಹಿತಿ ನೀಡಬೇಕು.

news_1790686354_9_998.webp

 

news_1790686359_0_257.webp

 

ಪಾರದರ್ಶಕತೆಗಾಗಿ ಆಗ್ರಹ: ಸರ್ಕಾರಿ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಕಾಪಾಡಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ವೈರಲ್ ಆಗಿರುವ ವಿಡಿಯೋದಲ್ಲಿನ ಹೇಳಿಕೆಗಳ ಸತ್ಯಾಸತ್ಯತೆ ತಿಳಿಯಲು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ​ಎಂದು ಯುವ ಕರ್ನಾಟಕ ವೇದಿಕೆಯ ಪದಾಧಿಕಾರಿಗಳು ಮತ್ತು ಪ್ರಜಾ ಕಲ್ಯಾಣ ಸಮಿತಿಯ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಹರೀಶ್ ಟಿ.ಎನ್. ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಗಿದ್ದು, ಪತ್ರದೊಂದಿಗೆ ವೈರಲ್ ವಿಡಿಯೋದ ಪ್ರತಿ ಹಾಗೂ ಮಾಧ್ಯಮ ವರದಿಗಳನ್ನು ಲಗತ್ತಿಸಲಾಗಿದೆ.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವ, ಆತ್ಮವಿಶ್ವಾಸ ಬೆಳೆಸುವುದೇ ಕ್ರೀಡೆಯ ಉದ್ದೇಶ ಪ್ರಾಮಾಣಿಕತೆಗೆ ಸ್ಟಿಂಗ್ ಆಪರೇಶನ್ ಭಯವೇಕೆ?:ಮನಸ್ಸಿನ ಆರೋಗ್ಯಕ್ಕೆ ಅರಿವೇ ಮೊದಲ ಚಿಕಿತ್ಸೆ:ಮೈಸೂರು ದಸರಾ ಸಂಸ್ಕೃತಿ, ಪರಂಪರೆ, ವೈಭವ  ದೃಷ್ಟಿಕೋನ ಚಿಂತನೆ ಕಾರ್ಯಕ್ರಮ ಆಯೋಜನೆವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಗೆ ಸರ್ಕಾರದಿಂದ ಆಹ್ವಾನಚಿತ್ರದುರ್ಗ ಜಿಲ್ಲೆಯ ರೈತರಿಗೆ ವಿಮಾ ಮೊತ್ತ ಶೀಘ್ರ ಬಿಡುಗಡೆಗೆ ಕೃಷಿ ಆಯುಕ್ತರಿಗೆ ಮನವಿ ಸಲ್ಲಿಸಿದ ಶಿವಲಿಂಗಪ್ಪಎನ್ ಡಿಎ ಅಭ್ಯರ್ಥಿ ಕೆ.ಎಂ ಸುರೇಶ್ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆ ಆಗುವುದು ನಿಶ್ಚಿತ-ಸಂಸದ ಕಾರಜೋಳದೇಶದ ಯುವಕರನ್ನು ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿರಾಹುಲ್ ಗಾಂಧಿ ಪ್ರಧಾನಿಯಾಗಲು ಹುಚ್ಚರಂತೆ ಓಡಾಡುತ್ತಿದ್ದಾರೆ: ಸಂಸದ ಗೋವಿಂದ್ ಕಾರಜೋಳ ವಾಗ್ದಾಳಿಅನುಭವ ಮತ್ತು ಜ್ಞಾನ ಎರಡೂ ನನ್ನಲ್ಲಿಲ್ಲ- ಸಂಸದ ಗೋವಿಂದ್ ಕಾರಜೋಳ