ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಯಿಯ ಪ್ರೀತಿ, ವಾತ್ಸಲ್ಯಕ್ಕೆ ಸಾಟಿ ಇಲ್ಲ; ಕಂದಮ್ಮಗಳ ಸಣ್ಣ ಕಷ್ಟ-ನೋವುಗಳನ್ನು ಮಾತಲ್ಲದೆ ಅರ್ಥೈಸಿಕೊಳ್ಳುವ ಕರುಳು ತಾಯಂದಿರದ್ದು ಮಾತ್ರ. ಇದೇ ಭಾವನಾತ್ಮಕ ಬೆಸುಗೆಯೊಂದಿಗೆ, ತಾಲ್ಲೂಕಿನ ಪುಟಾಣಿಗಳಿಗೆ ತಾಯಿಯ ಮಮತೆಯ ಆರೈಕೆ ಹಾಗೂ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡಲು ನಗರದಲ್ಲಿ 'ನಾರಾಯಣ ಚಿಲ್ಡ್ರನ್ಸ್ ಕ್ಲಿನಿಕ್' ದಿನಾಂಕ: 01-11-2026, ಭಾನುವಾರ ಬೆಳಿಗ್ಗೆ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ.
ಮಕ್ಕಳ ಆರೈಕೆಯಲ್ಲಿ ತಾಯ್ತನದ ಸ್ಪರ್ಶ: ಮಕ್ಕಳು ತಮ್ಮ ನೋವನ್ನು ಸ್ಪಷ್ಟವಾಗಿ ಹೇಳಿಕೊಳ್ಳಲಾರರು. ಅವರ ಪ್ರತಿ ಹಠ, ಅಳು ಹಾಗೂ ದೈಹಿಕ ಬದಲಾವಣೆಗಳ ಹಿಂದಿನ ಕಾರಣವನ್ನು ಗ್ರಹಿಸಲು ವೈದ್ಯಕೀಯ ಜ್ಞಾನದ ಜೊತೆಗೆ ತಾಯ್ತನದ ಅನುಕಂಪವೂ ಅಗಾಧವಾಗಿ ಬೇಕಾಗುತ್ತದೆ.
ಈ ನಿಟ್ಟಿನಲ್ಲಿ, ಪ್ರಸಿದ್ಧ ಮಕ್ಕಳ ಮತ್ತು ನವಜಾತ ಶಿಶುಗಳ ತಜ್ಞರಾದ ಡಾ. ಸುಪ್ರಿಯಾ ಎಂ.ಎ. (MBBS, MD Pediatrics) ಅವರು ಪ್ರತಿಯೊಂದು ಮಗುವನ್ನೂ ತಮ್ಮದೇ ಕಂದನೆಂದು ಭಾವಿಸಿ, ಭಾವನಾತ್ಮಕ ಬೆಂಬಲ ಹಾಗೂ ಅತ್ಯುತ್ತಮ ಚಿಕಿತ್ಸೆ ನೀಡಲು ಮುಂಚೂಣಿಯಲ್ಲಿದ್ದಾರೆ. ನವಜಾತ ಶಿಶುಗಳಿಂದ ಹಿಡಿದು ಬೆಳೆಯುವ ಮಕ್ಕಳವರೆಗಿನ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿದೆ ಪರಿಪೂರ್ಣ ಪರಿಹಾರ. ಆಗ ತಾನೇ ಜನಿಸಿದ ಶಿಶುವಿನಿಂದ ಹಿಡಿದು 18 ವರ್ಷಗಳ ಮಕ್ಕಳ ತನಕ ವೈದ್ಯಕೀಯ ಸೇವೆ ದೊರೆಯಲಿದೆ.
ಸುಲಭವಾಗಿ ತಲುಪಬಹುದಾದ ಕೇಂದ್ರ ಸ್ಥಳ:
ಸಾರ್ವಜನಿಕರ ಅನುಕೂಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕ್ಲಿನಿಕ್ ಅನ್ನು ಅತ್ಯಂತ ಜನನಿಬಿಡ ಹಾಗೂ ಆಯಕಟ್ಟಿನ ಜಾಗದಲ್ಲಿ ಆರಂಭಿಸಲಾಗುತ್ತಿದೆ.
ಸ್ಥಳ: ಟಿಎಪಿಸಿಎಂಎಸ್ ಕಟ್ಟಡ, ಸಂತೆಪೇಟೆ ರಸ್ತೆ, ಖಾಸಗಿ ಬಸ್ ಮತ್ತು ಸರ್ಕಾರಿ ಬಸ್ ನಿಲ್ದಾಣದ ಹತ್ತಿರ, ಹಿರಿಯೂರು.
ಸಮೀಪದ ಕುರುಹುಗಳು: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅತ್ಯಂತ ಹತ್ತಿರದಲ್ಲಿ (ಕೂಗಳತೆಯ ದೂರ) ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕೇವಲ 100 ಮೀಟರ್ ಒಳಗಡೆ, ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಸುಲಭವಾಗಿ ತಲುಪಲು ಇದು ಸೂಕ್ತ ತಾಣವಾಗಿದೆ.

ವೈದ್ಯಕೀಯ ಸೇವಾ ಸೌಲಭ್ಯಗಳು:
ಒಪಿಡಿ (OPD) 0-18 ವರ್ಷದವರೆಗೆ, ಎಲ್ಲಾ ಲಸಿಕಾ (ವ್ಯಾಕ್ಸಿನ್) ಸೌಲಭ್ಯ,
ನವಜಾತ ಶಿಶುವಿನ (ಹುಟ್ಟಿದ ಮಗುವಿನ) ತಪಾಸಣೆ, ಮಕ್ಕಳ ಬೆಳೆವಣಿಗೆಯ ಪರಿಶೀಲನೆ, ಪೌಷ್ಟಿಕಾಂಶದ ಸಲಹೆ, ಮಕ್ಕಳ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ,
ನೆಬುಲೈಜೇಷನ್ ಸೌಲಭ್ಯ, ಔಷಧ ಸೌಲಭ್ಯ.
ಅಲರ್ಜಿ ಹಾಗೂ ಇತರೆ ಸಂಬಂಧಿತ ಚಿಕಿತ್ಸೆಗಳು:
ವಿಪರೀತ ಕೆಮ್ಮು, ನೆಗಡಿ, ಅಲರ್ಜಿಯ ಕೆಮ್ಮು, ಅಸ್ತಮಾ, ಚರ್ಮದ ಅಲರ್ಜಿ
ಕಣ್ಣಿನ ಅಲರ್ಜಿ, ಆಹಾರದ ಅಲರ್ಜಿ, ಉಸಿರಾಟದ ತೊಂದರೆ ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ದೂರವಾಣಿ ಮೂಲಕ ಹೆಸರು ನೊಂದಾಯಿಸಿಕೊಳ್ಳಲು: 9180123397
ನಿಮ್ಮ ಮಗುವಿನ ಆರೋಗ್ಯಕರ ಮತ್ತು ನಗುವಿನ ಭವಿಷ್ಯಕ್ಕಾಗಿ – ನಾರಾಯಣ ಚಿಲ್ಡ್ರನ್ಸ್ ಕ್ಲಿನಿಕ್ ಗೆ ಭೇಟಿ ನೀಡಿ.
ಇಂತಿ ನಿಮ್ಮ ವೈದ್ಯರು-ಡಾ:ಎಂ.ಎ ಸುಪ್ರಿಯಾ, ಎಂ.ಬಿ.ಬಿ.ಎಸ್, ಎಂಡಿ (ಪೀಡಿಯಾಟ್ರಿಕ್ಸ್).




