ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' ಸೇವೆಯಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿದ್ದು, ಇನ್ನು ಮುಂದೆ ಆಫ್ಸೀಸನ್ನಲ್ಲಿ ಕಡಿಮೆ ದರದಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 'ಗೋಲ್ಡನ್ ಚಾರಿಯಟ್' ರೈಲಿನ 2026–27ರ ಪ್ರವಾಸಿ ಋತುವಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಐಷಾರಾಮಿ ರೈಲು ಪ್ರಯಾಣ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ರಾಜ್ಯದ ಸ್ಥಳೀಯ ಪ್ರವಾಸಿಗರೂ ಇದರ ಪ್ರಯೋಜನ ಪಡೆಯಬೇಕು ಎಂದರು.
ಹೊಸ ಪ್ರವಾಸಿ ಯೋಜನೆಗಳು: 'ಡ್ರೀಮ್ಸ್ ಆಫ್ ಕರ್ನಾಟಕ' (ನಾಲ್ಕು ದಿನಗಳ ಪ್ರವಾಸ) ಹಾಗೂ ದಕ್ಷಿಣ ಭಾರತದ ತಾಣಗಳನ್ನು ಪರಿಚಯಿಸುವ 'ಜ್ಯೂಯಲ್ಸ್ ಆಫ್ ಸೌತ್' ನೂತನ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ.
ರೈಲಿನ ಸೌಲಭ್ಯಗಳು: ಈ ರೈಲಿನಲ್ಲಿ ಎರಡು ರೆಸ್ಟೋರೆಂಟ್ಗಳು, ಸ್ಪಾ, ಜಿಮ್, ಸಸ್ಯಹಾರಿ ಹಾಗೂ ಮಾಂಸಾಹಾರಿ ಊಟದ ವ್ಯವಸ್ಥೆ ಸೇರಿದಂತೆ ಸುಮಾರು 80 ಪ್ರಯಾಣಿಕರಿಗೆ ಬೇಕಾದ ಅತ್ಯುತ್ತಮ ಐಷಾರಾಮಿ ಸೌಲಭ್ಯಗಳಿವೆ.
ಸೌದಿ ಅರೇಬಿಯಾ ಬಿಕ್ಕಟ್ಟು: ಮೆಕ್ಕಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಸಚಿವರೊಂದಿಗೆ ಸಂಪರ್ಕದಲ್ಲಿದ್ದು, ಸಹಾಯವಾಣಿ ತೆರೆಯಲಾಗಿದೆ. ಕನ್ನಡಿಗರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಸಿಎಂ ಭರವಸೆ ನೀಡಿದರು.




