ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ನಾನು ನಿಮಗೆ ಒಂದೇ ದಿನ ಸಮಾಧಾನ ಹೇಳಿ ಹೋಗಲು ಬಂದಿಲ್ಲ, ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವವರೆಗೆ ಜನರೊಂದಿಗೆ ನಿಂತು ಹೋರಾಟ ನಡೆಸುತ್ತೇನೆ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ.
ಮುಂಬರುವ ಅಕ್ಟೋಬರ್ 2ರ ಮಹಾತ್ಮ ಗಾಂಧಿ ಜಯಂತಿಯ ಶುಭ ದಿನದಿಂದಲೇ ತಮ್ಮ ಹೋರಾಟಕ್ಕೆ ಚಾಲನೆ ನೀಡಲಿದ್ದು, ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿಯವರೆಗಿನ ಎಲ್ಲಾ ಹಳ್ಳಿಗಳು ಹಾಗೂ ಸ್ಥಳೀಯ ಪ್ರದೇಶಗಳಿಗೆ ನೇರವಾಗಿ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸುವುದಾಗಿ ತಿಳಿಸಿದ್ದಾರೆ.
ಜನರ ಸಂಕಷ್ಟಗಳಿಗೆ ಕೇವಲ ಭರವಸೆ ನೀಡುವುದು ತಮ್ಮ ಉದ್ದೇಶವಲ್ಲ; ಬದಲಿಗೆ, ಸಾರ್ವಜನಿಕರ ಪರವಾಗಿ ನಿಂತು ಹೋರಾಟವನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುವುದೇ ತಮ್ಮ ಗುರಿ ಎಂದು ಅವರು ಶಪಥ ಮಾಡಿದ್ದಾರೆ. ಈ ಹೋರಾಟದ ಮೂಲಕ ಕ್ಷೇತ್ರದ ತಳಮಟ್ಟದ ಜನರನ್ನು ತಲುಪಿ, ಅವರ ಪರವಾಗಿ ಧ್ವನಿ ಎತ್ತುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.




