E-PAPER
15 Nov 2026, 12:22:37 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕರ್ನಾಟಕ, ಕೇರಳದಲ್ಲೂ 'ವೋಟ್ ಚೋರಿ' ಆಗಿದ್ರೆ ಸರ್ಕಾರಕ್ಕೆ ರಾಜೀನಾಮೆ ಕೊಡಿಸಿ: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮತ್ತು ಕೇರಳದಲ್ಲೂ ಮತ ಕಳವು (
'ವೋಟ್ ಚೋರಿ') ಆಗಿರಬೇಕು ಅಲ್ಲವೇ? ಹಾಗಿದ್ದರೆ ಆ ಎರಡೂ ರಾಜ್ಯಗಳಲ್ಲೂ ನಿಮ್ಮದೇ ಸರ್ಕಾರ ವಿರುವುದರಿಂದ, ಅಲ್ಲಿನ ಸರ್ಕಾರಗಳಿಗೆ ರಾಜೀನಾಮೆ ಕೊಡಿಸಿ ನೋಡೋಣ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ನಂತರದ ಚುನಾವಣೆಗಳನ್ನು ರದ್ದುಪಡಿಸಬೇಕು ಹಾಗೂ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ವಿಚಾರವಾಗಿ ತೀವ್ರವಾಗಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ಗೆ ಸವಾಲು: "ಕರ್ನಾಟಕ ಮತ್ತು ಕೇರಳದಲ್ಲೂ ವೋಟ್ ಚೋರಿ ಆಗಿರಬೇಕು ಅಲ್ಲವೇ? ಹಾಗಾದರೆ ಎರಡೂ ಕಡೆಯೂ ನಿಮ್ಮದೇ ಸರ್ಕಾರದವರಿದ್ದಾರೆ, ದಮ್ಮ ಇದ್ದರೆ ರಾಜೀನಾಮೆ ಕೊಡಿಸಿ ನೋಡೋಣ" ಎಂದು ಸವಾಲು ಹಾಕಿದರು. ಯುಪಿಎ ಸರ್ಕಾರದ ಅವಧಿಯಲ್ಲೂ ಚುನಾವಣಾ ಆಯೋಗದ ದುರ್ಬಳಕೆ ಆಗಿತ್ತೆಂದು ಟೀಕಿಸಿದರು.

ಎಸ್ಐಆರ್ ಸಮರ್ಥನೆ: ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣವಾಗಿ ಸಂವಿಧಾನದ ಚೌಕಟ್ಟಿನಲ್ಲೇ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಎಸ್‌ಐಆರ್ ನಡೆದಿದೆ, ಅಂದು ನಾವ್ಯಾರೂ ವಿರೋಧಿಸಿರಲಿಲ್ಲ. ಹೀಗಾಗಿ ಇದನ್ನು ವಿರೋಧಿಸುವ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ವಿರುದ್ಧ ಟೂಲ್ ಕಿಟ್ ಆರೋಪ: ಕಾಂಗ್ರೆಸ್ ಪಕ್ಷವು 'ಟೂಲ್ ಕಿಟ್' ಮೂಲಕ ಎಸ್‌ಐಆರ್ ಅನ್ನು ವಿರೋಧಿಸುತ್ತಿದೆ. ಫಾರ್ಮ್ 7 ಅರ್ಜಿಗಳ ಮೂಲಕ ಮೃತರ ಹಾಗೂ ನಕಲಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಿದೆ. ಆದರೆ ಬಾಂಗ್ಲಾ ನಿವಾಸಿಗಳು, ಮೃತರು ಮತ್ತು ಎರಡು ಕಡೆ ವೋಟರ್ ಕಾರ್ಡ್ ಹೊಂದಿರುವವರು ಪಟ್ಟಿಯಲ್ಲಿ ಮುಂದುವರಿಯಬೇಕೆಂದು ಕಾಂಗ್ರೆಸ್ ಬಯಸುತ್ತಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗಕ್ಕೆ ದೂರು: ಫಾರ್ಮ್ 7 ಪ್ರತಿಗಳನ್ನು ಯಾರೂ ಪ್ರಿಂಟ್ ಮಾಡುತ್ತಿಲ್ಲ, ಅವು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲೇ ಲಭ್ಯವಿವೆ. ಕಾಂಗ್ರೆಸ್ ಮುಖಂಡರು ಫಾರ್ಮ್ 7 ಬಗ್ಗೆ ಸುಳ್ಳು ಹೇಳುತ್ತಿದ್ದು, ಇದರ ವಿರುದ್ಧ ಸೋಮವಾರ ಬಿಜೆಪಿ ಪರವಾಗಿ ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಿಎಂ ಆರೋಪಕ್ಕೆ ತಿರುಗೇಟು: ಸಿಎಂ ಅವರು 40-50 ಲಕ್ಷ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಫಾರ್ಮ್ 7 ಮೂಲಕ ಇದುವರೆಗೆ ಯಾರ ಹೆಸರನ್ನೂ ಡಿಲೀಟ್ ಮಾಡಿಲ್ಲ. ಕಾಂಗ್ರೆಸ್‌ನವರ ಈ ಆರೋಪ ಸಂಪೂರ್ಣ ಸುಳ್ಳು ಹಾಗೂ ಗಾಳಿಯಲ್ಲಿ ಗುಂಡು ಹೊಡೆದಂತೆ ಎಂದು ವಾಗ್ದಾಳಿ ನಡೆಸಿದರು.

ಪೊಲೀಸ್ ಇಲಾಖೆಗೆ ಎಚ್ಚರಿಕೆ: ಬಬಲೇಶ್ವರದಲ್ಲಿ ಐದಾರು ಸಾವಿರ ಮತದಾರರ ಹೆಸರು ತೆಗೆದಿದ್ದಾರೆ ಎಂಬ ಆರೋಪವಿದೆ. ಆದರೆ ಪ್ರತೀ ಬೂತ್‌ನಲ್ಲಿ ಕೇವಲ ಐದಾರು ಅನರ್ಹ ಮತಗಳಷ್ಟೇ ಇರುತ್ತವೆ. ಕಾಂಗ್ರೆಸ್ ನವರು ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿದ್ದು, ನಮ್ಮವರಿಗೆ ಅನ್ಯಾಯವಾದರೆ ನಾವು ಬೀದಿಗಿಳಿದು ಹೋರಾಡುತ್ತೇವೆ. ಪೊಲೀಸರು ಸರ್ಕಾರದ ಮಾತು ಕೇಳಿ ಅನ್ಯಾಯವೆಸಗಿದರೆ, ಮುಂದೊಂದು ದಿನ ನ್ಯಾಯಾಲಯದಲ್ಲಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲ್ಯದ ಹೂಗಳಿಗೆ ಪ್ರೀತಿಯ ನೀರೆರೆದು, ಭವಿಷ್ಯದ ಕನಸುಗಳಿಗೆ ರೆಕ್ಕೆ ನೀಡಿ!ವಿಶ್ವ ಮಧುಮೇಹ ದಿನ – ಅರಿವಿನ ಬೆಳಕೇ ಆರೋಗ್ಯದ ರಕ್ಷಾಕವಚಎಲ್ಲಾ ನನ್ನ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆ ಹಾರ್ದಿಕ ಶುಭಾಶಯಗಳುಸಹಕಾರ ಕ್ಷೇತ್ರದ ಅನುಪಮ ಸೇವೆಗೆ ಎಚ್.ಎಂ. ಮಂಜುನಾಥಪ್ಪ ಅವರಿಗೆ ‘ಸಹಕಾರ ರತ್ನ’ ಪ್ರಶಸ್ತಿಕರ್ನಾಟಕ ಏಕೀಕರಣ ಚಳುವಳಿ ಕನ್ನಡಿಗರ ಸ್ವಾಭಿಮಾನ ಒಗ್ಗಟ್ಟಿನ ಸಂಕೇತ: ತ. ನ ಪ್ರಭುದೇವ್ಡಾ. ವೆಂಕಟರೆಡ್ಡಿ ಪ್ರಶಸ್ತಿ ಪುರಸ್ಕೃತ ಮಹಾಬಲೇಶ್ವರ್ ರವರಿಗೆ ಕರವೇ ಅಭಿನಂದನೆಗೂಳ್ಯ ರಸ್ತೆ ಡಾಂಬರಿಕರಣಕ್ಕೆ ಚಾಲನೆಕರ್ನಾಟಕಕ್ಕೆ 15,600 ಕೋಟಿ ಅಭಿವೃದ್ಧಿ ಕೊಡುಗೆ: ಪ್ರಧಾನಿ ಮೋದಿರಾಜ್ಯದ ಪ್ರಗತಿ ಮತ್ತು ಮೆಟ್ರೋ ವಿಸ್ತರಣೆಗೆ ಪ್ರಧಾನಿ ಮೋದಿ ಸಹಕಾರ ಕೋರಿದ ಸಿಎಂ ಡಿ.ಕೆ. ಶಿವಕುಮಾರ್ಬರ ಪರಿಹಾರ, ಕಬ್ಬು ಬೆಳೆಗಾರರ ನೆರವು ಮತ್ತು ಮೆಟ್ರೋ ಯೋಜನೆಗಳಿಗೆ ಅನುದಾನಕ್ಕಾಗಿ ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಮನವಿ