ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂಥ್ ಕ್ಲಬ್, ಕನ್ನಡ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯದಲ್ಲಿ ಮೈಸೂರು ದಸರಾ ಸಂಸ್ಕೃತಿ, ಪರಂಪರೆ, ವೈಭವ ದೃಷ್ಟಿಕೋನ ಚಿಂತನೆ ಕಾರ್ಯಕ್ರಮವು ಅಕ್ಟೋಬರ್ 11ರ ಭಾನುವಾರ ಸಂಜೆ 5:00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದ ಮುಂಭಾಗದಲ್ಲಿ ನಡೆಯಲಿದೆ.
13ರ ಮಂಗಳವಾರ ಸಂಜೆ 5 ಗಂಟೆಗೆ ನವರಾತ್ರಿಯ ಸಂದರ್ಭದಲ್ಲಿ ಪ್ರತಿ ಮನೆಮನೆಯಲ್ಲೂ ಸಂಸ್ಕೃತಿಯ ಪ್ರತೀಕವಾಗಿ ಗೊಂಬೆ ಕೂರಿಸುವ ಪದ್ಧತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಗೊಂಬೆ ಮನೆ ಖ್ಯಾತಿಯ ಟಿ ಕೆ ನಂಜುಂಡಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯ ನಡೆಯಲಿದೆ.
14ರ ಸಂಜೆ 5 ಗಂಟೆಗೆ ಯುವಕರು, ವಿದ್ಯಾರ್ಥಿಗಳು, ಮಕ್ಕಳಿಗೆ ಸಂಸ್ಕೃತಿ ಅರಿಯೋಣ, ದೇವಾಲಯ ನೋಡೋಣ,ಇತಿಹಾಸ ತಿಳಿಯೋಣ ಎಂಬ ಕಾರ್ಯಕ್ರಮವನ್ನ ರೂಪಿಸಲಾಗಿದೆ.
15 ಗುರುವಾರ ಸಂಜೆ ಗಂಟೆಗೆ ನವ ದುರ್ಗೆಯ ಮಹತ್ವ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ ತಿಳಿಸಿದ್ದಾರೆ .




