Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎನ್ ಡಿಎ ಅಭ್ಯರ್ಥಿ ಕೆ.ಎಂ ಸುರೇಶ್ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆ ಆಗುವುದು ನಿಶ್ಚಿತ-ಸಂಸದ ಕಾರಜೋಳ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:​
ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೆ.ಎಂ. ಸುರೇಶ್ ರವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಈ ಚುನಾವಣೆಯಲ್ಲಿ ಅವರ ಗೆಲುವು ನಿಶ್ಚಿತ ಎಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ್ ಎಂ.ಕಾರಜೋಳ ಅವರು ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಅಕ್ಟೋಬರ್ 23 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನದ ನಡೆಯಲಿದೆ. ಎನ್ ಡಿಎ ಅಭ್ಯರ್ಥಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು. 

​ಕಳೆದ ಮೂರು ದಶಕಗಳ ಕಾಲ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಸುರೇಶ್ ಇವರು, ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲದೆ ದೀನದಲಿತರ ಹಾಗೂ ಬಡವರ ಬಗ್ಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. 

​ಸರಳ ರಾಜಕಾರಣಿ: ಮಂಡಲ ಮತ್ತು ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳಾಗಿ ಕೆಲಸ ಮಾಡಿರುವ ಇವರು, ನಡೆನುಡಿಯಲ್ಲಿ ಸಜ್ಜನ ರಾಜಕಾರಣಿಯಾಗಿದ್ದು, ಹೆಚ್ಚಾಗಿ ಮಾತನಾಡದೆ ಕೆಲಸದಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ. ​ಎಲ್ಲ ನೊಂದಾಯಿತ ಪದವೀಧರರು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ, ಕೆ.ಎಂ. ಸುರೇಶ್ ರವರಿಗೆ ಮತಹಾಕಿ ಆಶೀರ್ವಾದ ಮಾಡುವಂತೆ ಸಂಸದ ಕಾರಜೋಳ ಅವರು ಕೋರಿದರು.  ​

ಮಾಜಿ ಶಾಸಕ ವೈ.ಎನ್. ನಾರಾಯಣಸ್ವಾಮಿ ಮಾತನಾಡಿ ​​ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಮುಂದುವರೆದು ಮಾತನಾಡಿದ ಮಾಜಿ ಪರಿಷತ್ ಸದಸ್ಯ ವೈ.ಎನ್. ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿ ​ ರಾಜ್ಯದಲ್ಲಿ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರವಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 26 ಸಾವಿರ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಲು ವಿಫಲವಾಗಿದೆ ಎಂದು ವೈ.ಎನ್. ನಾರಾಯಣಸ್ವಾಮಿ ಆರೋಪಿಸಿದ್ದಾರೆ. 

​ಅಭ್ಯರ್ಥಿಗಳ ಪರ ಒಲವು: ಶಿಕ್ಷಕರು ಮತ್ತು ಪದವೀಧರರು ಬದಲಾವಣೆ ಬಯಸುತ್ತಿದ್ದು, ಈ ಬಾರಿ ಬಿಜೆಪಿ, ಜೆಡಿಎಸ್ ಹಾಗೂ ಮಿತ್ರಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲಿಸಲಿದ್ದಾರೆ ಎಂಬ ವೈಎಎನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

​ಕಾಂಗ್ರೆಸ್ ಆಡಳಿತ ಅತಿ ಶೀಘ್ರದಲ್ಲೇ ಅಂತ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುತ್ತಿದ್ದು, ಜನತೆ ಬದಲಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

​ಚುನಾವಣಾ ಇತಿಹಾಸ: ಈ ಕ್ಷೇತ್ರದಲ್ಲಿ ಕಳೆದ 10 ಚುನಾವಣೆಗಳಲ್ಲಿ 8 ಬಾರಿ ಬಿಜೆಪಿ ಹಾಗೂ 2 ಬಾರಿ ಜೆಡಿಎಸ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಪಕ್ಷವು ಇಲ್ಲಿಯವರೆಗೆ ಎಂದಿಗೂ ಗೆದ್ದಿಲ್ಲ ಮತ್ತು ಮುಂದೆಯೂ ಗೆಲ್ಲುವುದಿಲ್ಲ ಎಂದು ಅವರು ತಿಳಿಸಿದ್ದಾರೆ. 

​ರಾಜ್ಯದಲ್ಲಿ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರವಿದ್ದು, ಪ್ರಾಥಮಿಕ ಶಿಕ್ಷಣದಲ್ಲಿ ಸುಮಾರು 26,000 ಹುದ್ದೆಗಳು ಖಾಲಿ ಇವೆ. 13,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿ ಬೊಗಳೆ ಬಿಟ್ಟಿದ್ದರೂ ಇದುವರೆಗೆ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. 

​ಅತಿಥಿ ಉಪನ್ಯಾಸಕರ ಅವಲಂಬನೆ: ಉನ್ನತ ಶಿಕ್ಷಣ ಕ್ಷೇತ್ರವು ಪೂರ್ತಿ ಅತಿಥಿ ಉಪನ್ಯಾಸಕರ ಮೇಲೆಯೇ ನಡೆಯುತ್ತಿದ್ದು, ಯಾವುದೇ ಕಾಯಂ ಉಪನ್ಯಾಸಕರಿಲ್ಲ. ಸಿದ್ದರಾಮಯ್ಯನವರ ನಂತರ ಡಿ.ಕೆ. ಶಿವಕುಮಾರ್ ಅವರು ಮುಂದುವರಿಸಿದ ಈ ಆಡಳಿತದಲ್ಲಿ ಯಾರಿಗೂ ಉದ್ಯೋಗ ಸಿಗುತ್ತಿಲ್ಲ ಎಂದು ಆರೋಪಿಸಿದರು. 

​ಪದವೀಧರರಿಗೆ ಭತ್ಯೆ ನೀಡುತ್ತೇವೆ ಎಂದಿದ್ದ 'ಯುವ ನಿಧಿ' ಯೋಜನೆಯು ಎಲ್ಲೂ ಸರಿಯಾಗಿ ತಲುಪುತ್ತಿಲ್ಲ ಮತ್ತು ಎಷ್ಟು ಜನರಿಗೆ ಇದು ತಲುಪುತ್ತಿದೆ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. 

​ಶಿಕ್ಷಕರ ಮತ್ತು ಪದವೀಧರರ ಬೆಂಬಲ: ಶಿಕ್ಷಕರು ಮತ್ತು ಪದವೀಧರರು ಬದಲಾವಣೆ ಬಯಸಿದ್ದು, ಈ ಬಾರಿ ಬಿಜೆಪಿ, ಜೆಡಿಎಸ್ ಹಾಗೂ ಮಿತ್ರಪಕ್ಷದ ಅಭ್ಯರ್ಥಿ ಕೆ.ಎಂ. ಸುರೇಶ್ ಅವರಿಗೆ ನೂರಕ್ಕೆ ನೂರು ಭಾಗ ಬೆಂಬಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎನ್. ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನೂರಕ್ಕೆ ನೂರು ಭಾಗ ಕೆ.ಎಂ. ಸುರೇಶ್‌ಗೆ ಗೆಲುವಿನ ವಿಶ್ವಾಸವಿದೆ: ​ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಸೇರಿದಂತೆ ಎಲ್ಲಾ ಕಡೆಗೆ ಹೋಗಿಬಂದಿದ್ದು, ಎಲ್ಲ ಕಡೆ ವಾತಾವರಣ ಬಹಳ ಚೆನ್ನಾಗಿದೆ.  ​ಕೆ.ಎಂ. ಸುರೇಶ್ ಅವರ ಗೆಲುವಿನ ಬಗ್ಗೆ ನೂರಕ್ಕೆ ನೂರು ಭಾಗ ವಿಶ್ವಾಸವಿದೆ.  ​ಜೆಡಿಎಸ್ ಪಕ್ಷದವರು ನಮ್ಮ ಜೊತೆ ಕೈಜೋಡಿಸಿ ಬಹಳ ಗಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ.  ​ಈ ಜಿಲ್ಲೆಯಲ್ಲಿ ಎಲ್ಲರೂ ಕುಮಾರಣ್ಣರ ನಾಯಕತ್ವದಲ್ಲಿ, ವಿಶೇಷವಾಗಿ ತಿಪ್ಪಾರೆಡ್ಡಿ ನಾಯಕತ್ವದಲ್ಲಿ ಒಟ್ಟಾಗಿ ಗಟ್ಟಿಯಾಗಿ ಕೆಲಸ ಮಾಡಿ ಗೆಲ್ಲಿಸಬೇಕೆಂದು ವೈ.ಎ ನಾರಾಯಣಸ್ವಾಮಿ ಮನವಿ ಮಾಡಿದರು.

ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಮಾತನಾಡಿ ​ಭಾರತದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ (ಸುಮಾರು 2 ಲಕ್ಷ ಮತದಾರರು) ಹಾಗೂ ಸುಮಾರು 450 ಕಿಲೋಮೀಟರ್ ವ್ಯಾಪ್ತಿಯ (ಕುಪ್ಪಂ ಚಂದ್ರಬಾಬು ನಾಯ್ಡು ಕ್ಷೇತ್ರದಿಂದ ಹಾವೇರಿ ಬಾರ್ಡರ್ ತನಕ) ದೊಡ್ಡ ಕ್ಷೇತ್ರ ಇದಾಗಿದೆ.  ​ಇದು 33 ವಿಧಾನಸಭಾ ಕ್ಷೇತ್ರಗಳು, 35-36 ತಾಲೂಕುಗಳು, 5 ಪಾರ್ಲಿಮೆಂಟ್ ಕ್ಷೇತ್ರಗಳು ಹಾಗೂ 5 ಜಿಲ್ಲೆಗಳನ್ನು ಒಳಗೊಂಡ ಒಂದು ಕ್ಷೇತ್ರವಾಗಿದೆ.  ಈ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿ ಸುರೇಶ್ ಅವರು ಗೆಲ್ಲುವುದು ನಿಶ್ಚಿತ ಎಂದರು. 

​ಚುನಾವಣಾ ಪ್ರಚಾರದ ಶೈಲಿ: ಪ್ರತಿಯೊಬ್ಬ ಮತದಾರರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲದಿರುವುದರಿಂದ, ಆಯಾ ಜಿಲ್ಲೆ ಮತ್ತು ತಾಲೂಕಿನ ಕಾರ್ಯಕರ್ತರು ಹಾಗೂ ಮುಖಂಡರು ನೇರವಾಗಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ರಜಾ ಇರುವುದರಿಂದ ಶಾಲಾ-ಕಾಲೇಜ್ ಗಳಲ್ಲಿ ಮತದಾರರು ಲಭ್ಯವಾಗುತ್ತಿಲ್ಲ. ಹಾಗಾಗಿ ಕಾರ್ಯಕರ್ತರು ಬಹಳ ಶ್ರಮವಹಿಸಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ತಿಪ್ಪಾರೆಡ್ಡಿ ತಿಳಿಸಿದ್ದಾರೆ. 

​ಜೆ.ಡಿ.ಎಸ್, ಬಿಜೆಪಿ ಎನ್.ಡಿ.ಎ ಪಕ್ಷಗಳು ಒಟ್ಟಾಗಿ ಪದವೀಧರರು ಮತ್ತು ಶಿಕ್ಷಕರ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿವೆ. ಆದರೆ ಕಾಂಗ್ರೆಸ್ ಪಕ್ಷದವರು ಎಂದಿಗೂ ಗ್ರ್ಯಾಜುಯೇಟ್ಸ್ ಅಥವಾ ಟೀಚರ್ಸ್ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿಲ್ಲ ಮತ್ತು ಧರಣಿ ಕೂತಿಲ್ಲ ಎಂದು ಆರೋಪಿಸಿದರು. 

​ಚುನಾವಣಾ ಇತಿಹಾಸ: ಈ ಹಿಂದೆ ಜೆ.ಡಿ.ಎಸ್ ಎರಡು ಬಾರಿ ಗೆದ್ದಿದೆ. ಇವರನ್ನು ಹೊರತುಪಡಿಸಿ ಬಿಜೆಪಿ ಅಥವಾ ಜನಸಂಘ ಗೆದ್ದಿದೆ. ಕಾಂಗ್ರೆಸ್ ಪಕ್ಷವು 10 ಚುನಾವಣೆಗಳಲ್ಲಿ ಕೇವಲ 2 ಬಾರಿ ಮಾತ್ರ ಡಿಪಾಸಿಟ್ ಪಡೆದಿದ್ದು, ಉಳಿದ 8 ಬಾರಿ ಡಿಪಾಸಿಟ್ ಕಳೆದುಕೊಂಡಿರುವ ಇತಿಹಾಸವಿದೆ ಎಂದು ತಿಪ್ಪಾರೆಡ್ಡಿ ಅವರು ಟೀಕಿಸಿದರು. 

ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅವರು ಮಾತನಾಡಿ ​ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಕೆ.ಎಂ. ಸುರೇಶ್ ಅವರು ಅತ್ಯಂತ ಸರಳ ವ್ಯಕ್ತಿಯಾಗಿದ್ದು, ಶಿಕ್ಷಣ ಸಂಸ್ಥೆಗಳನ್ನು ನಡೆಸಿರುವ ಅನುಭವವಿರುವವರು ಹಾಗೂ ಶಿಕ್ಷಕರು ಮತ್ತು ವಿದ್ಯಾವಂತರ ಸಮಸ್ಯೆಗಳನ್ನು ಚೆನ್ನಾಗಿ ಅರಿತವರಾಗಿದ್ದಾರೆ.  ​ ಚಿತ್ರದುರ್ಗ ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಮತದಾರ ಬಂಧುಗಳು ಎನ್‌ಡಿಎ ಅಭ್ಯರ್ಥಿ ಸುರೇಶ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಬೇಕು ಎಂದು ಎಸ್.ಕೆ. ಬಸವರಾಜನ್ ಕೋರಿದ್ದಾರೆ. 

​ಕಾರ್ಯಕರ್ತರಿಗೆ ವಿಶೇಷ ಸೂಚನೆ: ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ, ಮತದಾರರನ್ನು ಕಂಡು ಎನ್‌ಡಿಎ ಪಕ್ಷದ ಬಗ್ಗೆ ಮತ್ತು ಅಭ್ಯರ್ಥಿಯ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಮಾಜಿ ಶಾಸಕ ಬಸವರಾಜನ್ ಮನವಿ ಮಾಡಿದ್ದಾರೆ. 

​ಇದು ಪಕ್ಷದ ಚುನಾವಣೆ: ಇದು ಯಾವುದೇ ವ್ಯಕ್ತಿ ಅಥವಾ ಅಭ್ಯರ್ಥಿಯ ಚುನಾವಣೆಯಲ್ಲ, ಬದಲಿಗೆ ಪಕ್ಷದ ಚುನಾವಣೆ. ಅಭ್ಯರ್ಥಿ ಯಾರಿಗೂ ಪರಿಚಯವಾಗದಿದ್ದರೂ ಪಕ್ಷದ ಹೆಸರಿನಲ್ಲಿ ಚುನಾವಣೆ ನಡೆಯುತ್ತಿರುವುದರಿಂದ, ಪಕ್ಷದ ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. 

​ರಜಾ ದಿನಗಳ ಸದುಪಯೋಗ: ರಜಾ ಅಥವಾ ಪ್ರವಾಸದ ಕಾರಣದಿಂದ ದೂರವಿರುವ ಮತದಾರರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮನವೊಲಿಸುವಂತೆ ಮತ್ತು ಪಕ್ಷದ ಗೆಲುವಿಗೆ ಶ್ರಮಿಸುವಂತೆ ಅವರು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದಾರೆ. 

​ಎನ್.ಡಿ.ಎ ಅಭ್ಯರ್ಥಿ ಗೆಲ್ಲಿಸಲು ಒಗ್ಗಟ್ಟಿನಿಂದ ಶ್ರಮಿಸಿ:
ಎನ್ ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಮಾತನಾಡಿ ಎರಡು ಪಕ್ಷಗಳ ಹಿರಿಯರ ಮಾರ್ಗದರ್ಶನ ಹಾಗೂ ಎಲ್ಲ ವೇದಿಕೆಯ ವಿಧಾನ ಪರಿಷತ್ ಮಾಜಿ ಸದಸ್ಯರು
, ಮಾಜಿ ಹಾಗೂ ಹಾಲಿ ಸದಸ್ಯರು ಮತ್ತು ಎರಡು ಪಕ್ಷಗಳ ನಾಯಕರ ಸಮ್ಮುಖದಲ್ಲಿ ಪ್ರಚಾರ ಕಾರ್ಯ ನಡೆಯುತ್ತಿದೆ. 

​ಐದು ಜಿಲ್ಲೆಗಳ ಬಿಜೆಪಿ ಮತ್ತು ಜೆಡಿಎಸ್‌ನ ಹಿರಿಯ ನಾಯಕರು ನಿರಂತರ ಪ್ರವಾಸದಲ್ಲಿದ್ದು, ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದ ಜನತೆಗೆ 2028ರಲ್ಲಿ ಎನ್‌ಡಿಎ ಸರ್ಕಾರ ಬರಲಿದೆ ಎಂಬ ಸಂದೇಶ ನೀಡಲು ಎಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ. 

​ಚಿತ್ರದುರ್ಗ ಮತ್ತು ದಾವಣಗೆರೆ ಪ್ರಾಮುಖ್ಯತೆ: ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು ಅಖಂಡವಾಗಿದ್ದು, ಸುಮಾರು 80,000 ಮತಗಳನ್ನು ಹೊಂದಿರುವ ಎರಡು ಜಿಲ್ಲೆಗಳಾಗಿವೆ. 

​ಉತ್ತಮ ಆದರ್ಶ ವಿಧಾನ ಪರಿಷತ್ ಸದಸ್ಯರಾಗಿ ಸ್ನೇಹಭಾವ ಮತ್ತು ಗೌರವಯುತವಾಗಿ ನಡೆದುಕೊಂಡು, ಶಿಕ್ಷಕರಿಗೆ ಧ್ವನಿಯಾಗಿ ಕೆಲಸ ಮಾಡಲು ಎಲ್ಲ ಮತದಾರರು ಅವಕಾಶ ಮಾಡಿಕೊಡಬೇಕು ಎಂದು ಕೆ.ಎಂ. ಸುರೇಶ್ ಮನವಿ ಮಾಡಿದ್ದಾರೆ. 

​ಕ್ಯಾಲೆಂಡರ್ ಗುರುತು: ಮತದಾನದ ಸಂದರ್ಭದಲ್ಲಿ ಒಂದು ಗೆರೆ ಹಾಕಿ ಹಾಕುವ ಮೂಲಕ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಅವರು ವಿನಂತಿಸಿದರು.

​ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಚಿತ್ರದುರ್ಗ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ದಾವಣಗೆರೆ ವಿಭಾಗದ ಸಹ ಪ್ರಭಾರಿದ ಮುರಳಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಓ.ಪ್ರತಾಪ್ ಜೋಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ಸೇರಿದಂತೆ ಸ್ಥಳೀಯ ಮಂಡಲಗಳ ಅಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ಸಚಿವ ಟಿ.ರಘುಮೂರ್ತಿ ಸೂಚನೆನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪೋಸ್ಟರ್ ಬಿಡುಗಡೆನೂತನ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿಯವರಿಗೆ ಅಭಿನಂದನೆಬೆವಿಕಂ ಉಪ ವಿಭಾಗದ ಘಟಕ -1 ಮತ್ತು 2 ರ ಕಚೇರಿ ಉದ್ಘಾಟಿಸಿದ ಸಚಿವ ರಘುಮೂರ್ತಿಹಾಸನಾಂಬೆಗೆ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ: ಹಣ್ಣು-ಹೂವಿನ ಪ್ರದರ್ಶನ, ಕ್ರೀಡಾಕೂಟಕ್ಕೆ ಚಾಲನೆಹಾಸನಾಂಬಾ ದೇವಾಲಯದ ರಸ್ತೆಗೆ 'ಅಮೀರ್ ಮೊಹಲ್ಲಾ' ಹೆಸರು: ಸರ್ಕಾರದ ಪ್ರವಾಸ ಕಾರ್ಯಕ್ರಮಕ್ಕೆ ಸಿ.ಟಿ. ರವಿ ಆಕ್ಷೇಪಶ್ರೇಯಾ ಎನ್. ಗೌಡ ಸಾಧನೆಗೆ ಡಿ.ಕೆ ಶಿವಕುಮಾರ್ ಅಭಿನಂದನೆ: ಯುಪಿಎಸ್‌ಸಿ NDA ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಶ್ರೇಯಾಂಕಅನ್ನದಾತರಿಗೆ ಮೊದಲ ಕಂತಿನ 2,500 ನೇರ ಖಾತೆಗೆ ಜಮೆ-ಸಿಎಂನವೆಂಬರ್ 13ಕ್ಕೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಬಿಜೆಪಿ ನಾಯಕರ ಪೂರ್ವಭಾವಿ ಸಭೆ ಸಿ.ಎಚ್.ಎನ್ ರಾಮು ರಚಿತ ಪುಸ್ತಕ ಬಿಡುಗಡೆ: ದಲಿತ ಸಮಾಜದ ಹಕ್ಕುಗಳಿಗಾಗಿ ಕರೆ