Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನೈಸ್ ವಿವಾದ: ಡಿಕೆಶಿ - ಎಚ್ಡಿಕೆ ನಡುವೆ ತಾರಕಕ್ಕೇರಿದ ವಾಕ್ಸಮರ; ವಿಧಾನಸಭೆಯಲ್ಲೇ ಚರ್ಚೆಗೆ ಪ್ರತಿ ಸವಾಲು!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ಯೋಜನೆಯ ವಿವಾದ ಹಾಗೂ ಆಸ್ತಿ ವಿವರಗಳ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ರಾಜಕೀಯ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಬ್ಬರೂ ನಾಯಕರು ಪರಸ್ಪರ ಗಂಭೀರ ಆರೋಪ-ಪ್ರತ್ಯಾರೋಪಗಳ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನೈಸ್ ಹಗರಣವು ದೇಶದ 2ಜಿ ಹಾಗೂ ಕಲ್ಲಿದ್ದಲು (ಕೋಲ್) ಹಗರಣಗಳಿಗಿಂತಲೂ ದೊಡ್ಡದು ಎಂದು ವಾಗ್ದಾಳಿ ನಡೆಸಿದ್ದರು.

Advertisement

ಆಸ್ತಿ ಬಗ್ಗೆ ಪ್ರಶ್ನೆ: 2003ರಲ್ಲಿ ಡಿ.ಕೆ. ಶಿವಕುಮಾರ್ ಅವರ ಒಟ್ಟು ಆಸ್ತಿ ಕೇವಲ 4 ಕೋಟಿ ರೂಪಾಯಿ ಇತ್ತು. ಆದರೆ 2023ರ ವೇಳೆಗೆ ಅದು ಬರೋಬ್ಬರಿ 1,413 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಕೃಷಿ ಮತ್ತು ಆಸ್ತಿ ಬೆಳವಣಿಗೆಯ ಬಗ್ಗೆ ಗುಡುಗಿದ್ದರು. ಈ ನಡುವೆ ಸಾಕಷ್ಟು ಬೇನಾಮಿ ಹಗರಣಗಳು ನಡೆದಿವೆ ಎಂದು ಆರೋಪಿಸಿದ್ದರು.

ಡಿಕೆ ಶಿವಕುಮಾರ್ ತಿರುಗೇಟು ಮತ್ತು ಸವಾಲು:
ದೆಹಲಿಯಲ್ಲಿ ಕುಮಾರಸ್ವಾಮಿ ಅವರ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್
, ಎಚ್ಡಿಕೆ ಹೇಳಿಕೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ವ್ಯಾಪಾರ ಮಾಡುವ ಶಕ್ತಿ ನಮಗಿದೆ: "ಅವರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡಬಾರದಾ? ನನಗೆ ವ್ಯವಹಾರ ಮತ್ತು ವ್ಯಾಪಾರ ಮಾಡುವ ಶಕ್ತಿ ಇದೆ. ಹಾಗಾಗಿ ಅಧಿಕೃತವಾಗಿಯೇ ಆಸ್ತಿ ಘೋಷಿಸಿದ್ದೇನೆ. ಅವರ ಗೊಡ್ಡು ಬೆದರಿಕೆಗಳಿಗೆಲ್ಲಾ ನಾನು ಹೆದರುವುದಿಲ್ಲ" ಎಂದು ಗುಡುಗಿದರು.

ಬ್ಲ್ಯಾಕ್‌ಮೇಲ್ ರಾಜಕೀಯ: "ಕುಮಾರಸ್ವಾಮಿ ಆರೋಪಗಳಿಗೆ ಉತ್ತರ ಕೊಡುವುದಿಲ್ಲ. ಅವರಿಗೆ ಸಂಸ್ಕಾರ-ಸಂಸ್ಕೃತಿ ಯಾವುದೂ ಇಲ್ಲ. ನನ್ನನ್ನು ಬ್ಲ್ಯಾಕ್​ಮೇಲ್ ಮಾಡಿದರೆ ಹೆದರುತ್ತೇನೆ ಅಂದುಕೊಂಡಿದ್ದಾರೆ. ಆದರೆ ಹೆದರುವ ಜಾಯಮಾನ ನಂದಲ್ಲ. ಐಟಿ, ಇಡಿ ಎಲ್ಲ ದಾಳಿಗಳೂ ಆಗಿಹೋಯಿತು. ಇನ್ನೇನು ಮಾಡುತ್ತಾರೋ ಮಾಡಲಿ, ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ" ಎಂದರು.

ಮಾಜಿ ಸಿಎಂ ಹಾಗೂ ತಂದೆಯ ಮೇಲೆಯೇ ವಾಗ್ದಾಳಿ: "ಇಷ್ಟು ದಿನ ಅವರು ಯಾಕೆ ಸುಮ್ಮನಿದ್ದರು? ಅವರ ತಂದೆ ಹೆಚ್.ಡಿ. ದೇವೇಗೌಡರೇ ಈ ಯೋಜನೆಗೆ ಸಹಿ ಹಾಕಿದ್ದಾರೆ, ಅವರೂ ಮುಖ್ಯಮಂತ್ರಿಯಾಗಿದ್ದರು. ಸ್ವಾಮೀಜಿಗಳ ಫೋನ್ ಟ್ರ್ಯಾಪ್ ಮಾಡಿಸಿದವರು ಯಾರನ್ನು ತಾನೇ ಬಿಟ್ಟಿದ್ದಾರೆ? ಕೊನೆಗೆ ತಮ್ಮ ತಂದೆಯನ್ನೇ ಬಿಡದವರು ನನ್ನನ್ನು ಬಿಡ್ತಾರಾ?" ಎಂದು ಚಾಟಿ ಬೀಸಿದರು.

ಸುಳ್ಳಿನ ಕಂತೆ & ವಿಧಾನಸಭೆಗೆ ಆಹ್ವಾನ: "ಕುಮಾರಸ್ವಾಮಿ ಹೇಳುವುದೆಲ್ಲಾ ಸುಳ್ಳಿನ ಕಂತೆ. ಎಷ್ಟೇ ಆದರೂ ಅವರು ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ ಎಲ್ಲವೂ ಹೌದು. ಕುಮಾರಸ್ವಾಮಿ ಹಾಗೂ ಅವರ ಅಣ್ಣ-ತಮ್ಮನ ಆಸ್ತಿ ಎಷ್ಟಿದೆ, ಎಲ್ಲಿದೆ ಎಂಬುದು ನಮಗೆ ಗೊತ್ತಿಲ್ಲವೇ? ತಾಕತ್ತಿದ್ದರೆ ವಿಧಾನಸೌಧದ ಮುಂದೆ ಅಲ್ಲ, ವಿಧಾನಸಭೆಯಲ್ಲೇ ಚರ್ಚೆಗೆ ಬರಲಿ" ಎಂದು ಸವಾಲು ಹಾಕಿದರು.

ಒಟ್ಟಾರೆಯಾಗಿ, ನೈಸ್ ಯೋಜನೆ ಮತ್ತು ಆಸ್ತಿ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮಾತಿನ ಯುದ್ಧ ಜೋರಾಗಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ಹಂತಕ್ಕೆ ತಿರುಗಲಿದೆ ಎಂಬುದನ್ನು ಕಾದುನೋಡಬೇಕಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಇಮ್ರಾನ್-ಆಶಾ ಆತ್ಮಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ: 11 ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ FIRಹಿರಿಯೂರು ತಾಲೂಕಿನ ಮೇಟಿಕುರ್ಕೆಯಲ್ಲಿ ಇಂದು ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮಕೊಡಗಿನ ದಸರಾ; ಕರಗೋತ್ಸವದಿಂದ ಜನೋತ್ಸವದವರೆಗೆ:….ಹನಿಟ್ರ್ಯಾಪ್ ಸಂಚು ಪ್ರಶ್ನಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸರ್ಕಾರದ ದೌರ್ಜನ್ಯ: ಕುಮಾರಸ್ವಾಮಿಜೆಡಿ(ಎಸ್) ಕಾರ್ಯಕರ್ತರ ಗುರಿ: ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನೆಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಪಾಲು: ಪ್ರಸ್ತಾವನೆ ಸಲ್ಲಿಸಲು ಸಿಎಂ ನಿರ್ಧಾರಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನಧಾರ್ಮಿಕ ಮತಾಂತರಕ್ಕೆ ಸಿಗಲ್ಲ ಜಾತಿ ಮೀಸಲಾತಿ: ಸುಪ್ರೀಂ ಕೋರ್ಟ್ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಸ್ಫೋಟಕ ಆರೋಪ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದಿಂದ ಹಣಕಾಸು ನೆರವು!ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಎಚ್ಚರಿಕೆ