Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

NICE ಯೋಜನೆ ಅಕ್ರಮ ಆರೋಪ: ಡಿಕೆಶಿ ಸಮರ್ಥಿಸುತ್ತಿರುವ ಸಚಿವರ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನೈಸ್ ಯೋಜನೆಯ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸಚಿವರ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಕ್ರಮ ಎಸಗಿರುವ ದಾಖಲೆಗಳು ಸ್ಪಷ್ಟವಾಗಿದ್ದರೂ ಸಚಿವರು ವಿನಾಕಾರಣ ಸಮರ್ಥನೆಗೆ ಮುಂದಾಗಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಠಿಯ ವಿಡಿಯೋ ತುಣುಕಿನೊಂದಿಗೆ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಸ್ವತಃ ಆರೋಪಿತ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ತಮ್ಮ ಇಡೀ ಕುಟುಂಬವನ್ನು ಆ ಅಕ್ರಮಗಳಲ್ಲಿ ಭಾಗಿದಾರರನ್ನಾಗಿ ಮಾಡಿರುವುದು ದಾಖಲೆಗಳಿಂದ ರುಜುವಾತಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Advertisement

ಸಚಿವರ ವಿರುದ್ಧ ವಾಗ್ದಾಳಿ: ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಸಚಿವರ ವಿರುದ್ಧ ಕಟುವಾಗಿ ಟೀಕಿಸಿರುವ ಅವರು, "ದಾಖಲೆಗಳು ಸ್ಪಷ್ಟವಾಗಿದ್ದರೂ, ಕೆಲ ಸೈಡ್ ವಿಂಗ್ ನಾಲಿಗೆಗಳು ವ್ಯರ್ಥ ಸಮರ್ಥನೆಗೆ ಇಳಿದಿವೆ. ಪಾಪ.. ಅವಕ್ಕೆ ವಿದ್ಯೆಬುದ್ಧಿ ಗೊತ್ತಿಲ್ಲ. ದಾಖಲೆಗಳನ್ನು ಓದಿಕೊಳ್ಳುವ ಬೌದ್ಧಿಕ ಸಾಮರ್ಥ್ಯವು ಇಲ್ಲ! ಆದರೂ ಮಂತ್ರಿಗಳಾಗಿದ್ದಾರೆ!! ಅಕ್ರಮ ಸಂಪತ್ತು ಗಳಿಸಿದ ಸಿಎಂ ಸಾಹೇಬರನ್ನು ಸಮರ್ಥಿಸಿಕೊಳ್ಳದಿದ್ದರೆ, ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬ ಭಯದಿಂದಲೇ ಕಿರುಚುತ್ತಿವೆ" ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವರಾಗಿ ಡಿಕೆಶಿ ಅಧಿಕಾರಾವಧಿಯ ಬಗ್ಗೆ ಪ್ರಸ್ತಾಪ:
ಡಿ.ಕೆ. ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿ ಹಾಗೂ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯನ್ನು ಪ್ರಸ್ತಾಪಿಸಿರುವ ಕುಮಾರಸ್ವಾಮಿ
, ಆ ಅವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳು ಅಧಿಕೃತ ದಾಖಲೆಗಳಲ್ಲಿ ಸ್ಪಷ್ಟವಾಗಿವೆ ಎಂದು ಪ್ರತಿಪಾದಿಸಿದ್ದಾರೆ.

"ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಕಾಲದಲ್ಲಿ ಏನಾಯ್ತು? ಜೆ.ಎಚ್. ಪಟೇಲರ ಕಾಲದಲ್ಲಿ ಏನಾಯ್ತು? ಆ ನಂತರ ಬಂದ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪದವೀಧರರ ಸರ್ಕಾರದಲ್ಲಿ ಹಾಲಿ ಸಿಎಂ ಮಹಾಶಯ ನಗರಾಭಿವೃದ್ಧಿ ಸಚಿವರಾಗಿ, BMICPA ಅಧ್ಯಕ್ಷರಾಗಿ ಎಸಗಿರುವ ಅಕ್ರಮಗಳನ್ನು ದಾಖಲೆಗಳೇ ಸಾರಿ ಸಾರಿ ಹೇಳುತ್ತಿವೆ" ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಸಂಘರ್ಷ ತೀವ್ರ: NICE/BMIC ಯೋಜನೆ ವಿಷಯವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕೇಂದ್ರ ಸಚಿವರು ಈ ಯೋಜನೆಯ ಅಕ್ರಮಗಳ ವಿಚಾರವಾಗಿ ಮುಖ್ಯಮಂತ್ರಿಯವರನ್ನು ನಿರಂತರವಾಗಿ ಗುರಿಯಾಗಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸರ್ಕಾರದ ಹಲವು ಸಚಿವರು ಮುಖ್ಯಮಂತ್ರಿಯವರ ಬೆಂಬಲಕ್ಕೆ ನಿಂತು ಸಮರ್ಥಿಸಿಕೊಳ್ಳುತ್ತಿರುವುದು ರಾಜ್ಯ ರಾಜಕಾರಲದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ ಇಮ್ರಾನ್-ಆಶಾ ಆತ್ಮಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ: 11 ಇನ್‌ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ FIRಹಿರಿಯೂರು ತಾಲೂಕಿನ ಮೇಟಿಕುರ್ಕೆಯಲ್ಲಿ ಇಂದು ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮಕೊಡಗಿನ ದಸರಾ; ಕರಗೋತ್ಸವದಿಂದ ಜನೋತ್ಸವದವರೆಗೆ:….ಹನಿಟ್ರ್ಯಾಪ್ ಸಂಚು ಪ್ರಶ್ನಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರ ಮೇಲೆ ಸರ್ಕಾರದ ದೌರ್ಜನ್ಯ: ಕುಮಾರಸ್ವಾಮಿಜೆಡಿ(ಎಸ್) ಕಾರ್ಯಕರ್ತರ ಗುರಿ: ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನೆಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಪಾಲು: ಪ್ರಸ್ತಾವನೆ ಸಲ್ಲಿಸಲು ಸಿಎಂ ನಿರ್ಧಾರಅಮೆರಿಕದ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿಗೆ ಸಂಚು: 19 ವರ್ಷದ ಯುವಕ ಬಂಧನಧಾರ್ಮಿಕ ಮತಾಂತರಕ್ಕೆ ಸಿಗಲ್ಲ ಜಾತಿ ಮೀಸಲಾತಿ: ಸುಪ್ರೀಂ ಕೋರ್ಟ್ಹಾಲಿವುಡ್ ಗಾಯಕಿ ಮೇರಿ ಮಿಲ್‌ಬೆನ್ ಸ್ಫೋಟಕ ಆರೋಪ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದಿಂದ ಹಣಕಾಸು ನೆರವು!ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಮೇರಿ ಮಿಲ್ಬೆನ್ ಎಚ್ಚರಿಕೆ